IT RAID : ಐಟಿ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ : ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ

ಶಿಕಾರಿಪುರ : ಐಟಿ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿಭಾಯಿಸಿದ್ದಾರೆ. ಉಮೇಶ್‌ ಮನೆ ಮೇಲೆ ಐಟಿ ದಾಳಿ ನಡೆಸಿರುವುದು ಗೊತ್ತಾಗಿದೆ. ಮಾಹಿತಿ ಪಡೆದು ಮಾತನಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಶಿಕಾರಿಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಿಎಸ್.‌ ಯಡಿಯೂರಪ್ಪ, ಉಮೇಶ್‌ ಮನೆಯ ಮೇಲೆ ದಾಳಿ ನಡೆದಿರೋದು ಗೊತ್ತಾಗಿದೆ. ನಾಳೆ ಐಟಿ ಅಧಿಕಾರಿಗಳು ಮಾಹಿತಿಯನ್ನು ನೀಡಲಿದ್ದಾರೆ. ಹೀಗಾಗಿ ಮಾಹಿತಿಯನ್ನು ಪಡೆದ ನಂತರದಲ್ಲಿ ತಾನು ಉತ್ತರವನ್ನು ನೀಡುತ್ತೇನೆ. ಆದರೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಯಾರೇ ತಪ್ಪು ಮಾಡಿದ್ರೂ ಬಿಡುವುದಿಲ್ಲ. ಹೀಗಾಗಿ ಐಟಿ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಮಾಡಿದ್ದಾರೆ ಎಂದಿದ್ದಾರೆ.

ಬಿಎಸ್‌ವೈ ಆಪ್ತ ನೂರು ಕೋಟಿ ಕುಬೇರ !

ಕಳೆದ ಹತ್ತು ವರ್ಷಗಳಿಂದಲೂ ಉಮೇಶ್‌ ಮಾಜಿ ಸಿಎಂ ಯಡಿಯೂರಪ್ಪ ಅವರ ಆಪ್ತನಾಗಿ ಕೆಲಸ ಮಾಡಿಕೊಂಡಿದ್ದ. ಯಡಿಯೂರಪ್ಪ ಸರಕಾರದ ಅವಧಿಯಲ್ಲಿ ನೀರಾವರಿ ಇಲಾಖೆಯಲ್ಲಿನ ಕೆಲಸ ಕಾರ್ಯಗಳನ್ನು ಮಾಡುವ ಕಾರ್ಯವನ್ನು ಮಾಡುತ್ತಿದ್ದ. ನೀರಾವರಿ ನಿಗಮದಲ್ಲಿ ನಡೆಯುತ್ತಿದ್ದ ಟೆಂಡರ್‌ ಮೇಲೆ ಕಣ್ಣಿಟ್ಟಿದ್ದ ಉಮೇಶ್‌ ಕರ್ನಾಟಕದ ಗುತ್ತಿಗೆದಾರರ ಎನ್‌ಓಸಿಯನ್ನು ತಡೆ ಹಿಡಿಯುತ್ತಿದ್ದ. ನಂತರದ ಎ ಗ್ರೇಡ್‌ ಟೆಂಡರ್‌ಗಳನ್ನು ಆಂಧ್ರ ಮೂಲದ ಗುತ್ತಿಗೆದಾರರಿಗೆ ಕೊಡಿಸುವ ಕಾರ್ಯವನ್ನು ಮಾಡುತ್ತಿದ್ದ. ಹಲವು ಬಾರಿ ಯಡಿಯೂರಪ್ಪ ಹೇಳಿದ್ರೂ ಕೂಡ ಈತ ತಡೆ ಹಿಡಿಯುವ ಕಾರ್ಯವನ್ನು ಮಾಡಿದ್ದಾನೆ ಅನ್ನೋ ಆರೋಪ ಕೇಳಿಬಂದಿದೆ.

ಇದನ್ನೂ ಓದಿ : ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಆಪ್ತ ಉಮೇಶ್ ಮನೆ ಮೇಲೆ ಐಟಿ ರೇಡ್‌

ಉಮೇಶ್‌ ರಾಜಾಜಿನಗರದ ಬಾಷ್ಯಂ ಸರ್ಕಲ್‌ ಬಳಿಯಲ್ಲಿರುವ ಫ್ಲ್ಯಾಟ್ ನಲ್ಲಿ ವಾಸವಾಗಿದ್ದ ಉಮೇಶ್‌ ಸಹಕಾರ ನಗರದಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ಮನೆಯನ್ನು ನಿರ್ಮಾಣ ಮಾಡಿದ್ದ. ತನ್ನ ಮನೆಗೆ ದವಳಗಿರಿ ಎಂದು ಹೆಸರನ್ನು ಇಟ್ಟಿದ್ದ. ಭವ್ಯ ಬಂಗಲೆಯ ಜೊತೆಗೆ ಬಾಗಲಗುಂಟೆಯಲ್ಲಿ ಸೈಟ್‌, ನೆಲಮಂಗಲದಲ್ಲಿ ಜಮೀನು, ಬಿಡಿಎದಲ್ಲಿ ಅನೇಕ ಸೈಟ್‌ಗಳನ್ನು ಮಂಜೂರು ಮಾಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲಾ ತನ್ನ ಕುಟುಂಬಸ್ಥರ ಹೆಸರಿನಲ್ಲಿಯೂ ಕೋಟ್ಯಾಂತರ ಮೌಲ್ಯದ ಆಸ್ತಿಯನ್ನು ಮಾಡಿಸಿಕೊಂಡಿದ್ದ. ಅಲ್ಲದೇ ಬೇನಾಮಿ ಹೆಸರಿನಲ್ಲಿಯೂ ಆಸ್ತಿ ಸಂಪಾದನೆಯನ್ನು ಮಾಡಿದ್ದಾನೆ. ದಾಳಿಯ ವೇಳೆಯಲ್ಲಿ ಬರೋಬ್ಬರಿ ನೂರು ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಪತ್ತೆಯಾಗಿದೆ ಎನ್ನಲಾಗುತ್ತಿದೆ.

ಬೆಂಗಳೂರಿನ ಯಲಹಂಕದ ಡಿಪೋದಲ್ಲಿ ಬಿಎಂಟಿಸಿ ಕಂಡಕ್ಟರ್‌ ಕಂ ಡ್ರೈವರ್‌ ಆಗಿ ಕೆಲಸ ಮಾಡಿಕೊಂಡಿದ್ದ ಉಮೇಶ್‌ 2008 ರಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಆದ ಮೇಲೆ ಬಿಎಂಟಿಸಿ ಕೆಲಸ ಬಿಟ್ಟ ಬಿಎಸ್‌ವೈ ಕುಟುಂಬದ ಆಪ್ತನಾಗಿ ಗುರುತಿಸಿಕೊಂಡಿದ್ದ. ಯಡಿಯೂರಪ್ಪ ಪುತ್ರ ವಿಜಯೇಂದ್ರ ಭೇಟಿಯಾಗಲು ಉಮೇಶ್‌ ಅಪ್ಪಣೆ ಮುಖ್ಯವಾಗಿತ್ತು. ಐಟಿ ದಾಳಿಯ ಬೆನ್ನಲ್ಲೇ ಅಧಿಕಾರಿಗಳ ನಾಳೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿದ್ದಾರೆ.

ಇದನ್ನೂ ಓದಿ : ಕರ್ನಾಟಕ ಬಿಟ್ಟು ದೆಹಲಿಗೆ ಬರಲಾರೆ : ಸೋನಿಯಾ ಆಹ್ವಾನ ತಿರಸ್ಕರಿಸಿದ ಸಿದ್ದರಾಮಯ್ಯ

( IT officials have done their duty : Ex- CM BS Yediyurappa )

Comments are closed.