‘ಕರ್ಣ’ ಸೀರಿಯಲ್‌ನಿಂದ ಹೊರಬಿದ್ದ ಬೆನ್ನಲ್ಲೇ ನಮ್ರತಾ ಗೌಡ ಶಾಕಿಂಗ್ ಪೋಸ್ಟ್; ಕಾರ್ತಿಕ್ ಮಹೇಶ್ ಜೊತೆ ಲವ್ ನಿಜನಾ?!

ಕನ್ನಡ ಕಿರುತೆರೆಯ ಜನಪ್ರಿಯ ನಟಿ, ಬಿಗ್ ಬಾಸ್ ಖ್ಯಾತಿಯ ನಮ್ರತಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವ ಬೆಡಗಿ. ತಮ್ಮ ಗ್ಲಾಮರಸ್ ಫೋಟೋಶೂಟ್ ಹಾಗೂ ರೀಲ್ಸ್‌ಗಳ ಮೂಲಕವೇ ಸದಾ ಸುದ್ದಿಯಲ್ಲಿರುವ ನಮ್ರತಾ, ಇದೀಗ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿರುವ ಪೋಸ್ಟ್ ಒಂದು ಭಾರಿ ಕುತೂಹಲಕ್ಕೆ ಕಾರಣವಾಗಿದೆ.

ಕನ್ನಡ ಕಿರುತೆರೆಯ ಜನಪ್ರಿಯ ನಟಿ, ಬಿಗ್ ಬಾಸ್ ಖ್ಯಾತಿಯ ನಮ್ರತಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವ ಬೆಡಗಿ. ತಮ್ಮ ಗ್ಲಾಮರಸ್ ಫೋಟೋಶೂಟ್ ಹಾಗೂ ರೀಲ್ಸ್‌ಗಳ ಮೂಲಕವೇ ಸದಾ ಸುದ್ದಿಯಲ್ಲಿರುವ ನಮ್ರತಾ, ಇದೀಗ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿರುವ ಪೋಸ್ಟ್ ಒಂದು ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಬೋಲ್ಡ್ ಫೋಟೋಗಳ ಜೊತೆಗೆ ನಟಿ ನೀಡಿರುವ ಇಂಟ್ರೆಸ್ಟಿಂಗ್ ಕ್ಯಾಪ್ಶನ್ ಕಂಡು ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ!

ಬೋಲ್ಡ್ ಲುಕ್.. ಇಂಟ್ರೆಸ್ಟಿಂಗ್ ಕ್ಯಾಪ್ಶನ್!

ನಮ್ರತಾ ಗೌಡ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸಖತ್ ಬೋಲ್ಡ್ ಆಗಿರುವ ಹೊಸ ಫೋಟೋಶೂಟ್ ಹಂಚಿಕೊಂಡಿದ್ದಾರೆ. ಕಪ್ಪು ಬಣ್ಣದ ಪ್ಯಾಂಟ್ ಮತ್ತು ಸಿಲ್ವರ್ ಕಲರ್‌ನ ಕ್ರಾಪ್ ಟಾಪ್ ಧರಿಸಿ ಕಿಲ್ಲಿಂಗ್ ಪೋಸ್ ನೀಡಿರುವ ನಮ್ರತಾ, ಅದಕ್ಕೆ ನೀಡಿರುವ ಕ್ಯಾಪ್ಶನ್ ಮಾತ್ರ ಸಖತ್ ಹೈಲೈಟ್ ಆಗಿದೆ

ಕರಿಯರ್ ಮುಗಿಯಿತಾ? ಧಾರಾವಾಹಿಯಿಂದ ಹೊರಬಿದ್ದರಾ ನಮ್ರತಾ?

ಬಾಲನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ‘ಪುಟ್ಟಗೌರಿಯ ಮದುವೆ’ ಹಾಗೂ ‘ನಾಗಿಣಿ 2’ ಮೂಲಕ ಮನೆಮಾತಾಗಿದ್ದ ನಮ್ರತಾ, ಬಿಗ್ ಬಾಸ್ ಬಳಿಕ ಸಖತ್ ಫೇಮಸ್ ಆದರು. ಇತ್ತೀಚೆಗೆ ಸ್ಟಾರ್ ಸುವರ್ಣದ ಜನಪ್ರಿಯ ಧಾರಾವಾಹಿ ‘ಕರ್ಣ’ದಲ್ಲಿ ನಿತ್ಯಾ ಎಂಬ ನೆಗೆಟಿವ್ ಶೆಡ್ ಪಾತ್ರದ ಮೂಲಕ ಮಿಂಚುತ್ತಿದ್ದರು. ಆದರೆ ಸದ್ಯ ಸೀರಿಯಲ್‌ನಲ್ಲಿ ನಿಧಿ-ಕರ್ಣ ಮದುವೆ ಎಪಿಸೋಡ್ ಮುಗಿಯುತ್ತಿದ್ದಂತೆ ನಮ್ರತಾ ಕಾಣಿಸಿಕೊಳ್ಳುತ್ತಿಲ್ಲ. ಅವರು ಸೀರಿಯಲ್‌ನಿಂದ ಹೊರನಡೆದಿದ್ದಾರೆ ಎಂಬ ವದಂತಿ ದಟ್ಟವಾಗಿದೆ. ಇದರ ಬೆನ್ನಲ್ಲೇ “ನನಗೆ ಕರಿಯರ್ ಬೇಕು” ಎಂದು ಪೋಸ್ಟ್ ಮಾಡಿರುವುದು ಅಭಿಮಾನಿಗಳಲ್ಲಿ ಅನುಮಾನ ಮೂಡಿಸಿದೆ.

ಕಾರ್ತಿಕ್ ಮಹೇಶ್ ಜೊತೆಗಿನ ಲವ್ ಲೈಫ್ ನಿಜನಾ?

ಇನ್ನು ಕ್ಯಾಪ್ಶನ್‌ನಲ್ಲಿ ‘ಲವ್’ (Love) ಎಂದು ಉಲ್ಲೇಖಿಸಿರುವುದು ಅವರ ಲವ್ ಲೈಫ್ ಮೇಲಿನ ಕುತೂಹಲವನ್ನು ಡಬಲ್ ಮಾಡಿದೆ. ಬಿಗ್‌ಬಾಸ್ ಮನೆಯಲ್ಲಿದ್ದಾಗಿನಿಂದಲೂ ನಮ್ರತಾ ಗೌಡ ಮತ್ತು ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮಹೇಶ್ ನಡುವೆ ಸಂಥಿಂಗ್ ಸಂಥಿಂಗ್ ನಡೆಯುತ್ತಿದೆ ಎಂಬ ಗಾಸಿಪ್ ಕೇಳಿಬರುತ್ತಲೇ ಇದೆ. ಇತ್ತೀಚೆಗೆ ನಮ್ರತಾ ಬರ್ತ್‌ಡೇ ಪಾರ್ಟಿಯಲ್ಲೂ ಕಾರ್ತಿಕ್ ಕುಟುಂಬವೇ ಮುಂಚೂಣಿಯಲ್ಲಿತ್ತು. ಆದರೆ ಈ ಜೋಡಿ ಮಾತ್ರ “ನಾವು ಕೇವಲ ಬೆಸ್ಟ್ ಫ್ರೆಂಡ್ಸ್” ಎನ್ನುತ್ತಾ ಪ್ರೀತಿಯ ಮ್ಯಾಟರ್ ಅನ್ನು ಸಸ್ಪೆನ್ಸ್ ಆಗಿ ಇಟ್ಟಿದೆ.

ಇದೀಗ “ಲವ್ ಕೂಡ ಬೇಕು” ಎಂದು ನಮ್ರತಾ ಹೇಳಿರುವುದು, ಕಾರ್ತಿಕ್ ಜೊತೆಗಿನ ಸಂಬಂಧವನ್ನು ಶೀಘ್ರದಲ್ಲೇ ಅಧಿಕೃತ ಮಾಡಲಿದ್ದಾರಾ? ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಒಟ್ಟಿನಲ್ಲಿ ನಮ್ರತಾ ಅವರ ಈ ಒಂದು ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿರುವುದಂತೂ ಸುಳ್ಳಲ್ಲ.

Meghana Pranuth | ಮೇಘನಾ ಪ್ರಣೂತ್‌

ಮೇಘನಾ ಪ್ರಣೂತ್‌ ಮೂಲತಃ ಉಡುಪಿ ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಫ್ಯಾಷನ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಇದೀಗ ನ್ಯೂಸ್‌ ನೆಕ್ಸ್ಟ್‌ನಲ್ಲಿ ನಿರೂಪಕರಾಗಿ, ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.