ಬಿಗ್ ಬಾಸ್ ಕನ್ನಡ 13: ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ ಸಂಭಾವ್ಯ ಸ್ಪರ್ಧಿಗಳ ಪಟ್ಟಿ!
ಬಿಗ್ ಬಾಸ್ ಕನ್ನಡ ಸೀಸನ್ 13 (BBK 13) ಆರಂಭಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ, ಸೋಶಿಯಲ್ ಮೀಡಿಯಾದಲ್ಲಿ ದೊಡ್ಮನೆಗೆ ಪ್ರವೇಶಿಸಲಿರುವ ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಸಖತ್ ವೈರಲ್ ಆಗುತ್ತಿದೆ.

ಬಿಗ್ ಬಾಸ್ ಕನ್ನಡ ಸೀಸನ್ 13 (BBK 13) ಆರಂಭಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ, ಸೋಶಿಯಲ್ ಮೀಡಿಯಾದಲ್ಲಿ ದೊಡ್ಮನೆಗೆ ಪ್ರವೇಶಿಸಲಿರುವ ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಸಖತ್ ವೈರಲ್ ಆಗುತ್ತಿದೆ. ಈ ಬಾರಿಯ ವಿಶೇಷವೆಂದರೆ ಸೆಲೆಬ್ರಿಟಿಗಳ ಜೊತೆಗೆ ಜನಸಾಮಾನ್ಯರಿಗೂ (ಕಾಮನ್ ಮ್ಯಾನ್) ಆಡಿಷನ್ ಮೂಲಕ ಮುಕ್ತ ಅವಕಾಶ ಕಲ್ಪಿಸಲಾಗಿದ್ದು, ಈಗಾಗಲೇ ಮೊದಲ ಹಂತದ ಸೆಲೆಕ್ಷನ್ ಪ್ರಕ್ರಿಯೆಗಳು ಭರದಿಂದ ಸಾಗುತ್ತಿವೆ.
ಸದ್ಯ ಸಾಮಾಜಿಕ ಜಾಲತಾಣಗಳು ಹಾಗೂ ವೀಕ್ಷಕರ ವಲಯದಲ್ಲಿ ಅತಿ ಹೆಚ್ಚು ಚರ್ಚೆಯಾಗುತ್ತಿರುವ ಮತ್ತು ಬಿಗ್ ಬಾಸ್ ಮನೆಗೆ ಬರಬಹುದು ಎಂದು ಅಂದಾಜಿಸಲಾದ ಸಂಭಾವ್ಯ ಅಭ್ಯರ್ಥಿಗಳ ವಿವರ ಇಲ್ಲಿದೆ:
ಕಿರುತೆರೆ ಮತ್ತು ಸಿನಿಮಾ ತಾರೆಯರು

ಸುಷ್ಮಾ ಕೆ. ರಾವ್: ಇತ್ತೀಚೆಗಷ್ಟೇ ಮುಕ್ತಾಯಗೊಂಡ ಸೂಪರ್ ಹಿಟ್ ‘ಭಾಗ್ಯಲಕ್ಷ್ಮೀ’ ಧಾರಾವಾಹಿಯ ‘ಭಾಗ್ಯ’ ಪಾತ್ರದ ಮೂಲಕ ಹೆಂಗಳೆಯರ ಮನಗೆದ್ದಿರುವ ನಟಿ ಹಾಗೂ ನಿರೂಪಕಿ ಸುಷ್ಮಾ ಅವರ ಹೆಸರು ಮುಂಚೂಣಿಯಲ್ಲಿದೆ.

ರಿತ್ವಿಕ್ ಕೃಪಾಕರ್: ‘ರಾಮಾಚಾರಿ’ ಸೀರಿಯಲ್ ಮೂಲಕ ಮನೆಮಾತಾಗಿದ್ದ ಈ ಯುವ ನಟ ಸದ್ಯ ಸೀರಿಯಲ್ ಮುಗಿದ ನಂತರ ಎಲ್ಲೂ ಕಾಣಿಸಿಕೊಂಡಿಲ್ಲ. ಇವರು ದೊಡ್ಮನೆಗೆ ಎಂಟ್ರಿ ಕೊಡುವ ಸಾಧ್ಯತೆ ದಟ್ಟವಾಗಿದೆ.

ಸುದರ್ಶನ್ ರಂಗಪ್ರಸಾದ್: ‘ಭಾಗ್ಯಲಕ್ಷ್ಮೀ’ ಸೀರಿಯಲ್ನ ನೆಗೆಟಿವ್ ಪಾತ್ರ ‘ತಾಂಡವ್’ ಮೂಲಕ ಫೇಮಸ್ ಆಗಿರುವ ಸುದರ್ಶನ್, ರಿಯಲ್ ಲೈಫ್ನಲ್ಲಿ ಅದ್ಭುತ ಸ್ಟ್ಯಾಂಡಪ್ ಕಾಮಿಡಿಯನ್. ಇವರು ಬಂದರೆ ಭರ್ಜರಿ ಮನರಂಜನೆ ಗ್ಯಾರಂಟಿ ಎಂಬುದು ವೀಕ್ಷಕರ ಅಭಿಪ್ರಾಯ.

ಅನಿಲ್ ಸಿದ್ದು: ‘ಬಲರಾಮನ ದಿನಗಳು’ ಸಿನಿಮಾದ ಪಠಾಣ್ ಪಾತ್ರದ ಮೂಲಕ ಗಮನ ಸೆಳೆದಿರುವ ನಟ ಅನಿಲ್ ಸಿದ್ದು ಸಂಭಾವ್ಯ ಪಟ್ಟಿಯಲ್ಲಿದ್ದಾರೆ.
ಶಿವರಾಜ್ ಕೆ.ಆರ್. ಪೇಟೆ: ‘ಕಾಮಿಡಿ ಕಿಲಾಡಿಗಳು’ ವಿನ್ನರ್, ಖ್ಯಾತ ಹಾಸ್ಯ ನಟ ಶಿವರಾಜ್ ಈ ಬಾರಿಯಾದರೂ ಬಿಗ್ ಬಾಸ್ಗೆ ಬರಲಿ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ.
ಸೋಶಿಯಲ್ ಮೀಡಿಯಾ ಸೆನ್ಸೇಷನ್ಸ್ & ಗಾಯಕರು

ಡಾ. ಬ್ರೋ (ಗಗನ್ ಶ್ರೀನಿವಾಸ್): ಪ್ರತಿ ಸೀಸನ್ನಲ್ಲೂ ವೀಕ್ಷಕರು ಅತಿ ಹೆಚ್ಚು ಡಿಮ್ಯಾಂಡ್ ಮಾಡುವ ಹೆಸರು ಇವರದ್ದು. ಕಳೆದ ಬಾರಿ “ಒಂದೇ ಮನೆಯಲ್ಲಿ 3 ತಿಂಗಳು ಇರೋದು ಕಷ್ಟ” ಎಂದಿದ್ದ ಡಾ. ಬ್ರೋ ಈ ಬಾರಿ ಮನಸ್ಸು ಬದಲಾಯಿಸುತ್ತಾರಾ ಎಂದು ಕಾದು ನೋಡಬೇಕು.

ಅರ್ಚನಾ ಕೊಟ್ಟಿಗೆ: ತಮ್ಮ ಫಿಲ್ಟರ್ಲೆಸ್ ಮಾತು ಮತ್ತು ಕಾಮಿಡಿ ಟೈಮಿಂಗ್ನಿಂದ ಇನ್ಸ್ಟಾಗ್ರಾಮ್ನಲ್ಲಿ ಸಖತ್ ವೈರಲ್ ಆಗಿರುವ ನಟಿ ಅರ್ಚನಾ ಅವರ ಎಂಟ್ರಿಯ ಬಗ್ಗೆಯೂ ಚರ್ಚೆ ನಡೀತಿದೆ.

ಗಗನಾ ಭಾರಿ: ರಿಯಾಲಿಟಿ ಶೋಗಳ ಮೂಲಕವೇ ಮನೆಮಾತಾಗಿರುವ ಗಗನಾ ಭಾರಿ ಅವರ ಹೆಸರು ಕೂಡ ಕೇಳಿಬರುತ್ತಿದೆ.
ಬಿಗ್ ಬಾಸ್ ತಂಡವು ಅಧಿಕೃತವಾಗಿ ಸ್ಪರ್ಧಿಗಳ ಲೈನ್ಅಪ್ ಅನ್ನು ಪ್ರೀಮಿಯರ್ ಶೋ ದಿನದವರೆಗೂ ಅತ್ಯಂತ ಗೌಪ್ಯವಾಗಿಡುತ್ತದೆ. ಹೀಗಾಗಿ, ಸದ್ಯ ಹರಿದಾಡುತ್ತಿರುವ ಪಟ್ಟಿಯು ವೀಕ್ಷಕರ ಒಲವು ಮತ್ತು ಪ್ರಾಥಮಿಕ ಚರ್ಚೆಗಳ ಮೇಲಷ್ಟೇ ಆಧಾರಿತವಾಗಿದೆ.

