ನಂದಮೂರಿ ವಂಶದ ಯುವ ನಾಯಕ ತಾರಕರತ್ನ ಇನ್ನಿಲ್ಲ : ಕಂಬನಿ ಮಿಡಿದ ಫ್ಯಾನ್ಸ್

ನಂದಮೂರಿ ಕುಟುಂಬದ ಯುವ ನಾಯಕ ಹಾಗೂ ನಟ ತಾರಕರತ್ನ (Nandamuri Tarakaratna) ಜನವರಿ 27ರಂದು ಹೃದಯಾಸ್ತಂಬನಕ್ಕೆ ಒಳಗಾಗಿದ್ದರು. ತಕ್ಷಣವೇ ಅವರನ್ನು ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಹೆಚ್ಚಿನ ಚಿಕಿತ್ಸೆಗೆ ಕರೆದುಕೊಂಡು ಬರಲಾಗಿತ್ತು. ಆದರೆ, ಇಂದು(ಫೆಬ್ರವರಿ 18) ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳಿದಿದ್ದಾರೆ. ನಟ ನಂದಮೂರಿ ತಾರಕರತ್ನ ಅವರ ನಿಧನ ಸುದ್ದಿಯನ್ನು ಅವರ ಕುಟುಂಬದ ಸದಸ್ಯರು ಖಚಿತ ಪಡಿಸಿದ್ದು, ಫ್ಯಾಮಿಲಿ ಹಾಗೂ ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿದೆ. ತಾರಕರತ್ನ ನಿಧನದ ಸುದ್ದಿ ಗೊತ್ತಾದ ಬಳಿಕ ನಂದಮೂರಿ ಅಭಿಮಾನಿಗಳು ಹಾಗೂ ಸಿನಿಪ್ರೇಮಿಗಳು ಕಂಬನಿ ಮಿಡಿಯುತ್ತಿದ್ದಾರೆ.

ಜನವರಿ 27ರಂದು ಟಿಡಿಪಿ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದರು. ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಕುಪ್ಪಂ ಬಳಿ ಪಾದಯಾತ್ರೆ ಮಾಡುತ್ತಿದ್ದ ವೇಳೆ ಕುಸಿದುಬಿದ್ದಿದ್ದರು. ತಕ್ಷಣವೇ ನಂದಮೂರಿ ತಾರಕರತ್ನ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಾರಾಯಣ ಹೃದಯಲಕ್ಕೆ ಕರೆದುಕೊಂಡು ಬರಲಾಗಿತ್ತು. ಕಳೆದ 23 ದಿನಗಳಿಂದ ನಾರಾಯಣ ಹೃದಯಾಲಯ ನುರಿತ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ನಂದಮೂರಿ ಕುಟುಂಬದ ಸದಸ್ಯರು, ಅಭಿಮಾನಿಗಳು ಗುಣಮುಖರಾಗಿ ಬರಲಿ ಎಂದು ಪಾರ್ಥನೆ ಸಲ್ಲಿಸಿದ್ದರು. ಆದರೆ, ಅವರ ಪಾರ್ಥನೆ ಫಲಿಸಲಿಲ್ಲ. ‌

ನಂದಮೂರಿ ತಾರಕರತ್ನ ಟಾಲಿವುಡ್ ದಂತಕತೆ ಎನ್‌ಟಿಆರ್ ಅವರ ಮೊಮ್ಮಗ. 2001ರಲ್ಲಿ ‘ಒಕಟೋ ನಂಬರ್ ಕುರ್ರಡು’ ಸಿನಿಮಾದ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಮೊದಲ ಸಿನಿಮಾವೇ ಟಾಲಿವುಡ್‌ನಲ್ಲಿ ಪ್ರಶಂಸೆಯನ್ನು ಪಡೆದುಕೊಂಡಿತ್ತು. ಒಮ್ಮೆಗೆ 9 ಸಿನಿಮಾಗಳನ್ನು ಸಹಿ ಮಾಡುವ ಮೂಲಕ ಗಿನ್ನಿಸ್ ದಾಖಲೆಯನ್ನು ಬರೆದಿದ್ದರು. ಎರಡು ದಶಕಗಳ ವೃತ್ತಿ ಬದುಕಿನಲ್ಲಿ ಹಲವು ಜನಪ್ರಿಯ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ : ಧ್ರುವ ಸರ್ಜಾ ಅಭಿಮಾನಿ ಬೈಕ್‌ ಅಪಘಾತದಿಂದ ವಿಧಿವಶ : ಆಸ್ಪತ್ರೆಗೆ ಭೇಟಿ ಪೋಷಕರಿಗೆ 5 ಲಕ್ಷ ನೀಡಿ ಆಸರೆಯಾದ ನಟ

ಇತ್ತೀಚೆಗೆ ತಾರಕರತ್ನ ರಾಜಕೀಯದ ಹೆಚ್ಚು ವಲವು ಬೆಳೆಸಿಕೊಂಡಿದ್ದರು. ಹೀಗಾಗಿ ತೆಲುಗು ದೇಶಂ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ತಾರಕರತ್ನ ಯುವನಾಯಕ ನಾರಾ ಲೋಕೇಶ್ ಅವರ ಜೊತೆ ಪಾದಾಯಾತ್ರೆ ಆರಂಭಿಸಿದ್ದರು. ಈ ವೇಳೆ ಹೃದಯಸ್ತಂಬನವಾಗಿತ್ತು. ಹೃದಯದ ಎಡಭಾಗ ಶೇ.90ರಷ್ಟು ಬ್ಲಾಕ್ ಆಗಿದೆ ಎಂದು ವೈದ್ಯರು ಹೇಳಿದ್ದರಿಂದ ಉತ್ತಮ ಚಿಕಿತ್ಸೆಗಾಗಿ ಬೆಂಗಳೂರು ನಾರಾಯಣ ಹೃದಯಾಲಯಕ್ಕೆ ಕರೆದುಕೊಂಡು ಬರಲಾಗಿತ್ತು.

Nandamuri Tarakaratna: Young leader of Nandamuri family Tarakaratna is no more: Kambani Midida fans

Comments are closed.