Sunday Special Recipe : ಮನೆಯಲ್ಲಿಯೇ ತಯಾರಿಸಿ ಸುಲಭದ ಕೇಕ್‌; ತೆಂಗಿನಕಾಯಿ–ಸೂಜಿ ರವಾ ಕೇಕ್‌

ಕೇಕ್‌ (Cake) ಎಂದರೆ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಇಷ್ಟಪಡುತ್ತಾರೆ. ಬಗೆ–ಬಗೆಯ ಕೇಕ್‌ನ ರುಚಿ ನೋಡುವುದೆಂದರೆ ಕೆಲವರಿಗೆ ಬಹಳ ಪ್ರೀತಿ. ಹಾಗೆ ಮನೆಯಲ್ಲಿಯೇ ತಯಾರಿಸಿದ ಕೇಕ್‌ (Home Made Cake) ಎಂದರೆ ಸ್ವಲ್ಪ ಹೆಚ್ಚು ತಿನ್ನುವವರೂ ಇದ್ದಾರೆ. ಈಗ ಅವುಗಳ ಸಾಲಿಗೆ ತೆಂಗಿನಕಾಯಿ–ಸೂಜಿ ರವಾ ಕೇಕ್‌ (Sunday Special Recipe) ಅನ್ನು ಸೇರಿಸಿಕೊಳ್ಳಿ. ಹಾಲು, ತೆಂಗಿನಕಾಯಿ, ಸಕ್ಕರೆ ಮತ್ತು ಕೋಕೋ ಪುಡಿಗಳ ಮಿಶ್ರಣದಿಂದ ತಯರಿಸಿದ ಈ ಕೇಕ್‌ ನಿಮಗೆ ಕ್ಲಾಸಿಕ್‌ ರುಚಿಯನ್ನು ನೀಡುತ್ತದೆ. ಬಾದಾಮಿ, ಗೋಡಂಬಿ, ಒಣದ್ರಾಕ್ಷಿ, ವಾಲ್‌ನಟ್ಸ್, ಒಣಗಿದ ಟೂಟ್ಟಿ-ಫ್ರುಟ್ಟಿ, ಚೋಕೊ ಚಿಪ್ಸ್ ಮುಂತಾದ ಪದಾರ್ಥಗಳನ್ನು ಸಹ ಬ್ಯಾಟರ್‌ನೊಂದಿಗೆ ಬೆರೆಸಿ ತೆಂಗಿನಕಾಯಿ ಕೇಕ್‌ಗೆ ಹೆಚ್ಚಿನ ಪರಿಮಳವನ್ನು ಸೇರಿಸಬಹುದು. ರುಚಿಕರವಾದ ಕೇಕ್‌ ತಯಾರಿಸುವುದು ಹೇಗೆ ಅಂತೀರಾ? ಇಲ್ಲಿದೆ ಓದಿ.

ತೆಂಗಿನ ಕಾಯಿ–ಸೂಜಿ ರವಾ ಕೇಕ್‌ ಹೀಗೆ ತಯಾರಿಸಿ:

ಮಿಕ್ಸರ್‌ನಲ್ಲಿ ಸೂಜಿ ರವಾವನ್ನು 1 ನಿಮಿಷ ರುಬ್ಬಿಕೊಳ್ಳಿ. ಅದನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಂಡು ಅದಕ್ಕೆ ಕೋಕೋ ಪೌಡರ್ ಮತ್ತು ಉಪ್ಪನ್ನು ಸೇರಿಸಿ. ಒಂದು ಪಾತ್ರೆಯಲ್ಲಿ ಹಾಲು, ಬೆಣ್ಣೆ, ಸಕ್ಕರೆ ಮತ್ತು ವೆನಿಲ್ಲಾ ಎಸೆನ್ಸ್ ಹಾಕಿ ಮತ್ತು ಸಕ್ಕರೆ ಸಂಪೂರ್ಣವಾಗಿ ಕರಗುವ ತನಕ ಕಡಿಮೆ ಶಾಖದಲ್ಲಿ ಇರಿಸಿ, ಮಿಕ್ಸ್‌ ಮಾಡುತ್ತಾ ಇರಿ. ನಿಧಾನವಾಗಿ ಆ ಮಿಶ್ರಣವನ್ನು ರವಾ ಮತ್ತು ಕೋಕೋ ಪೌಡರ್‌ ಇರುವ ಪಾತ್ರೆಗೆ ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣವಾಗುವವರೆಗೆ ಮಿಕ್ಸ್‌ ಮಾಡಿ. ಹಿಟ್ಟನ್ನು ಮುಚ್ಚಿ 15 ನಿಮಿಷಗಳ ಕಾಲ ಹಾಗೆ ಇರಿಸಿ.

ಒವನ್‌ ಅನ್ನು 180 ಡಿಗ್ರಿ ಸೆಲ್ಸಿಯಸ್ನಲ್ಲಿ 15 ನಿಮಿಷಗಳ ಕಾಲ ಪ್ರೀ ಹೀಟ್‌ ಮಾಡಿಕೊಳ್ಳಿ. ನಿಮ್ಮ ಬೇಕಿಂಗ್ ಟಿನ್ ಅನ್ನು ಸ್ವಲ್ಪ ಬೆಣ್ಣೆಯಿಂದ ಗ್ರೀಸ್ ಮಾಡಿ ಮತ್ತು ಸುತ್ತಲೂ ಸ್ವಲ್ಪ ಹಿಟ್ಟನ್ನು ಉದುರಿಸಿ. ಕೇಕ್ ಹಿಟ್ಟಿಗೆ ಬೇಕಿಂಗ್ ಪೌಡರ್ ಮತ್ತು ಬೇಕಿಂಗ್ ಸೋಡಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಕೇಕ್‌ ಮಿಶ್ರಣವನ್ನು ಬೇಕಿಂಗ್‌ ಟಿನ್‌ಗೆ ಹಾಕಿ 180 ಡಿಗ್ರಿ ಸೆಲ್ಸಿಯಸ್‌ನಲ್ಲಿ 25-30 ನಿಮಿಷಗಳ ಕಾಲ ಅಥವಾ ಟೂತ್‌ಪಿಕ್ ಕ್ಲೀನ್ ಆಗುವವರೆಗೆ ಬೇಯಿಸಿ.

ನಂತರ ತೆಂಗಿನ ಕಾಯಿಯ ಸಣ್ಣ ತುರಿಯನ್ನು ಬಾಣಲೆಯಲ್ಲಿ ಕಡಿಮೆ ಉರಿಯಲ್ಲಿ ಗೋಲ್ಡನ್ ಬ್ರೌನ್ ಆಗುವವರೆಗೆ ಹುರಿಯಿರಿ. ಸ್ವಲ್ಪ ತಣ್ಣಗಾಗಲು ಬಿಡಿ. ಇದನ್ನು 2 ಟೀಸ್ಪೂನ್ ಪುಡಿ ಸಕ್ಕರೆ ಅದಕ್ಕೆ ಬೆರೆಸಿ ಮಿಶ್ರಣ ತಯಾರಿಸಿ. ಬೇಯಿಸಿದ ಕೇಕ್ ಮೇಲೆ ಆ ಮಿಶ್ರಣವನ್ನು ಹರಡಿ ಅಲಂಕರಿಸಿ. ತುಂಡುಗಳನ್ನಾಗಿ ಕತ್ತರಿಸಿ. ಕೇಕ್‌ ಸವಿಯಲು ಸಿದ್ಧ.

ಇದನ್ನೂ ಓದಿ : Belly Fat : ಈ ವ್ಯಾಯಾಮಗಳನ್ನು ಮಾಡಿ, ಹೊಟ್ಟೆಯ ಭಾಗದ ಕೊಬ್ಬನ್ನು ಕರಗಿಸಿ

ಇದನ್ನೂ ಓದಿ : Fruits and Vegetables Health Tips:ನೈಸರ್ಗಿಕವಾಗಿ ನಿಮ್ಮ ಅಂದ ಹೆಚ್ಚಿಸುತ್ತೆ ಹಣ್ಣು ಮತ್ತು ತರಕಾರಿ

(Sunday Special Recipe coconut suji rava cake. The yummy cake will leave you craving more.)

Comments are closed.