ಸೋಮವಾರ, ಏಪ್ರಿಲ್ 28, 2025
HomeCinema"ಐ ವಾಂಟ್‌ ಟು ಗೋ ಬ್ಯಾಕ್‌" ಅಂದಿದ್ಯಾಕೆ ನಟಿ ರಶ್ಮಿಕಾ ಮಂದಣ್ಣ

“ಐ ವಾಂಟ್‌ ಟು ಗೋ ಬ್ಯಾಕ್‌” ಅಂದಿದ್ಯಾಕೆ ನಟಿ ರಶ್ಮಿಕಾ ಮಂದಣ್ಣ

- Advertisement -

ಭಾರತ ವಿವಿಧ ಸಿನಿರಂಗಗಳಲ್ಲಿ ನಟಿ ರಶ್ಮಿಕಾ ಮಂದಣ್ಣ ನ್ಯಾಷನಲ್‌ ಕ್ರಶ್‌ (National Crush) ಎಂದು ಗುರುತಿಸಿಕೊಂಡಿದ್ದು, ಕನ್ನಡದ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಬಣ್ಣದಲೋಕಕ್ಕೆ ಪ್ರವೇಶಿಸಿದ್ದಾರೆ. ಸದ್ಯ ನಟಿ ರಶ್ಮಿಕಾ ಮಂದಣ್ಣ ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸುವ ಮೂಲಕ ಬ್ಯುಸಿಯಾಗಿದ್ದಾರೆ. ದೊಡ್ಡ ದೊಡ್ಡ ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸಿರುವ ರಶ್ಮಿಕಾ ಬೇಡಿಕೆ ಇರುವ ನಟಿಯಾಗಿದ್ದಾರೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಸಕ್ರಿಯಳಾಗಿರುವ ರಶ್ಮಿಕಾ ಮಂದಣ್ಣ ತನ್ನೆಲ್ಲಾ ಅಪ್‌ಡೇಟ್‌ಗಳನ್ನು ಅಲ್ಲಿ ತಿಳಿಸುತ್ತಾ ಇರುತ್ತಾರೆ. ಸದ್ಯ ನಟಿ ರಶ್ಮಿಕಾ ಮಂದಣ್ಣ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಹೇಳಿಕೆ ಸಖತ್‌ ಸದ್ದು ಮಾಡುತ್ತಿದೆ.

ಮೊನ್ನೆ ಸಂಕ್ರಾಂತಿ ಹಬ್ಬದ ಪ್ರಯುಕ್ತ ಶುಭಾಶಯವನ್ನು ಕೋರಿ ಫೋಟೊ ಹಂಚಿಕೊಂಡಿದ್ದ ರಶ್ಮಿಕಾ ಮಂದಣ್ಣ ಬಹಳ ದಿನಗಳ ಬಳಿಕ ಪೋಸ್ಟ್‌ನಲ್ಲಿ ಕನ್ನಡ ಬಳಸಿದ್ದಕ್ಕೆ ಸುದ್ದಿಯಾಗಿದ್ದರು. ಈ ಫೋಸ್ಟ್ ಮಾಡಿದ ಮರುದಿನವೇ ರಶ್ಮಿಕಾ ಮಂದಣ್ಣ ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದು, ತಮ್ಮ ಇತ್ತೀಚೆಗಿನ ಪ್ರವಾಸದ ಫೋಟೋಗಳನ್ನು ಹಂಚಿಕೊಂಡು ‘ಐ ವಾಂಟ್ ಟು ಗೋ ಬ್ಯಾಕ್’ ಎಂದು ಬರೆದುಕೊಂಡಿದ್ದಾರೆ. ನಟಿ ರಶ್ಮಿಕಾ ನಾನು ಹಿಂದಿರುಗಿ ಹೋಗಲು ಬಯಸುತ್ತೇನೆ ಎಂದು ಬರೆದುಕೊಂಡಿದ್ದು, ಸದ್ಯ ಈ ಪೋಸ್ಟ್‌ಗೆ ಭಿನ್ನ ವಿಭಿನ್ನ ಕಾಮೆಂಟ್‌ಗಳು ಬರುತ್ತಿವೆ.

ಇದನ್ನೂ ಓದಿ : KL Rahul Athiya Shetty marriage : ಕೆ.ಎಲ್ ರಾಹುಲ್-ಆತಿಯಾ ಶೆಟ್ಟಿ ಮದುವೆಗೆ ಬಾಲಿವುಡ್ ಸ್ಟಾರ್ಸ್‌ಗೆ ಆಹ್ವಾನ ಇಲ್ಲ!

ಇದನ್ನೂ ಓದಿ : ತಮಿಳು ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ

ಇದನ್ನೂ ಓದಿ : ದೊಡ್ಮನೆಯ ಮತ್ತೊಂದು ಕುಡಿ ಸಿನಿರಂಗಕ್ಕೆ ಎಂಟ್ರಿ

ಇದನ್ನೂ ಓದಿ : “ಫಸ್ಟ್‌ ಡೇ ಫಸ್ಟ್‌ ಶೋ” ಮೂಲಕ ಬೆಳ್ಳಿ ತೆರೆಗೆ ಮರಳಿದ ರೋಹಿತ್‌ ಶ್ರೀನಾಥ್

ಕೆಲವರು ಯಾವ ವಿಷಯದಲ್ಲಿ ಹಿಂದಿರುಗಿ ಹೋಗಬೇಕೆಂದು ಬಯಸುತ್ತಿದ್ದೀರ ಎಂದು ರಶ್ಮಿಕಾಗೆ ಪ್ರಶ್ನೆ ಹಾಕುತ್ತಿದ್ದರೆ, ಕೆಲ ನೆಟ್ಟಿಗರು ವಾಪಸ್ ಕರ್ನಾಟಕಕ್ಕೆ ಬರುವ ಆಸೆಯಾ, ಮತ್ತೆ ಪರಮ್‌ವಃ ಸ್ಟುಡಿಯೊಸ್ ಸೇರುವ ಆಸೆಯಾ ಎಂದು ಕಾಲೆಳೆಯುತ್ತಿದ್ದಾರೆ. ಹೌದು, ರಶ್ಮಿಕಾ ತಾನು ನೀಡಿದ ಹೇಳಿಕೆಗಳಿಂದ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿರುವುದು ನಿಮಗೆ ಗೊತ್ತೇ ಇದೆ. ಹೀಗಾಗಿ ಈಕೆ ಏನೇ ಪೋಸ್ಟ್ ಹಂಚಿಕೊಂಡರೂ ಅದರಿಂದ ಟ್ರೋಲ್ ಆಗುವುದು ಸಹಜ. ಅದೇ ರೀತಿ ಈ ಪೋಸ್ಟ್ ಮೂಲಕವೂ ಸಹ ರಶ್ಮಿಕಾ ಟ್ರೋಲ್‌ಗೆ ಒಳಗಾಗಿದ್ದಾರೆ.

National Crush: Actress Rashmika Mandanna said “I want to go back”.

RELATED ARTICLES

Most Popular