lorry caught fire: ರಸ್ತೆಯಲ್ಲೇ ಹೊತ್ತಿ ಉರಿದ ಲಾರಿ: ಚಾಲಕ, ಕ್ಲೀನರ್ ಅಪಾಯದಿಂದ ಪಾರು

ಕಾರವಾರ: (lorry caught fire) ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಸಿಮೆಂಟ್‌ ತುಂಬಿದ ಲಾರಿಯೊಂದು ಹೊತ್ತಿ ಉರಿದ ಘಟನೆ ಕಾರವಾರದಲ್ಲಿ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್‌ ಘಟ್ಟದಲ್ಲಿ ಘಟನೆ ನಡೆದಿದ್ದು, ಲಾರಿಯಲ್ಲಿದ್ದ ಚಾಲಕ ಹಾಗೂ ಕ್ಲೀನರ್‌ ಅಪಾಯದಿಂದ ಪಾರಾಗಿದ್ದಾರೆ.

ಹುಬ್ಬಳಿಯಿಂದ ಮಂಗಳೂರಿನ ಕಡೆಗೆ ಸಿಮೆಂಟ್‌ ತುಂಬಿದ ಲಾರಿಯೊಂದು ಬರುತ್ತಿತ್ತು. ಅರಬೈಲ್‌ ಘಟ್ಟದ ಮೂಲಕ ಹೊರಟಿದ್ದ ವೇಳೆ ಲಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಪೂರ್ತಿ ಲಾರಿಯನ್ನು ಬೆಂಕಿ ಕ್ಷಣಮಾತ್ರದಲ್ಲಿ ಆವರಿಸಿಕೊಂಡಿದ್ದು, ಬೆಂಕಿಯ ಕೆನ್ನಾಲಿಗೆಗೆ ಲಾರಿ ಸುಟ್ಟು ಕರಕಲಾಗಿದೆ. ಅದೃಷ್ಟವೆಂಬಂತೆ ಚಾಲಕ ಹಾಗೂ ಕ್ಲೀನರ್‌ ಇಬ್ಬರು ಬೆಂಕಿಯಿಂದ ಸೃಷ್ಟಿಯಾದ ಅಪಾಯದಿಂದ ಪಾರಾಗಿದ್ದಾರೆ.

ಕೂಡಲೇ ಲಾರಿ ಚಾಲಕ ಘಟನೆಯ ಬಗ್ಗೆ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಅಗ್ನಿ ಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸಿದ್ದಾರೆ. ಇನ್ನೂ ಈ ಅವಘಡಕ್ಕೆ ಲಾರಿಯ ಬ್ರೇಕ್‌ ಲೈನರ್‌ ಸವೆತವೇ ಕಾರಣ ಎನ್ನಲಾಗಿದೆ. ಲಾರಿಯ ಬ್ರೇಕ್‌ ಲೇನರ್‌ ಸವೆದಿದ್ದು, ಇದರಿಂದ ಉತ್ಪತ್ತಿಯಾದ ಹೀಟ್‌ ನಿಂದಾಗಿ ಟೈಯರ್‌ ಗೆ ಬೆಂಕಿ ತಗುಲಿದೆ. ಕ್ಷಣಮಾತ್ರದಲ್ಲಿ ಇಡೀ ಲಾರಿಗೆ ಬೆಂಕಿ ವ್ಯಾಪಿಸಿಕೊಂಡಿದ್ದು, ಲಾರಿ ಪೂರ್ತಿಯಾಗಿ ಸುಟ್ಟು ಕರಕಲಾಗಿದೆ. ಅಲ್ಲದೇ ಲಾರಿಯಲ್ಲಿದ್ದ ಸಿಮೆಂಟ್‌ ಚೀಲಗಳು ಕೂಡ ಬೆಂಕಿಗಾಹುತಿಯಾಗಿವೆ.

ಸದ್ಯ ಘಟನೆಯ ಕುರಿತು ಯಲ್ಲಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : Kundapura 4 Arrest : ಕುಂದಾಪುರದಲ್ಲಿ ಇಸ್ಪೀಟ್ ಆಡುತ್ತಿದ್ದ 4 ಮಂದಿಯ ಬಂಧನ

ಕುಂದಾಪುರದಲ್ಲಿ ಇಸ್ಪೀಟ್ ಆಡುತ್ತಿದ್ದ 4 ಮಂದಿಯ ಬಂಧನ

ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಆಟವಾಡುತ್ತಿದ್ದ ನಾಲ್ವರನ್ನು ಬಂಧಿಸಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಸಬಾ ಗ್ರಾಮದ ಮೀನು ಮಾರುಕಟ್ಟೆಯ ರಸ್ತೆಯಲ್ಲಿರುವ ನಾಗಬೊಬ್ಬರ್ಯ ದೇವಸ್ಥಾನದ ಬಳಿಯಲ್ಲಿ ನಡೆದಿದೆ. ಹಂಗೂರು ಗ್ರಾಮದ ನೇರಂಬಳ್ಳಿಯ ಸತೀಶ್ (35 ವರ್ಷ), ಕಸಬಾ ಗ್ರಾಮದ ಗಣೇಶ್ 32 ವರ್ಷ, ಕಸಬಾ ಗ್ರಾಮದ ಅನಿಲ್ ಡಿʼಸೋಜಾ (43 ವರ್ಷ) ಹಾಗೂ ಸಂದೇಶ (31 ವರ್ಷ) ಎಂಬವರೇ ಬಂಧಿತರರು.

ಕ್ರೈಂ ಪಿಎಸ್ ಐ ಪ್ರಸಾದ್ ಕುಮಾರ್ ಅವರು ರೌಂಡ್ಸ್ ನಲ್ಲಿ ಇರುವ ವೇಳೆಯಲ್ಲಿ ಕುಂದಾಪುರ ತಾಲೂಕು ಕುಂದಾಪುರ ಕಸಬಾ ಗ್ರಾಮದ ಮೀನು ಮಾರ್ಕೆಟ್ ರಸ್ತೆಯಲ್ಲಿರುವ ನಾಗ ಬೊಬ್ಬರ್ಯ ದೇವಸ್ಥಾನದ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಎಂಬ ಜುಗಾರಿ ಆಟ ಆಡುತ್ತಿರುವ ಕುರಿತು ಮಾಹಿತಿ ದೊರೆತಿದೆ. ಕೂಡಲೇ ತಮ್ಮ ಇಲಾಖೆಯ ಸಿಬ್ಬಂದಿಗಳೊಂದಿಗೆ ಸಂಜೆಯ ವೇಳೆಯಲ್ಲಿ ದಾಳಿ ನಡೆಸಿದ ಸಂದರ್ಭದಲ್ಲಿ ಇಸ್ಪೀಟು ಆಟವಾಡುತ್ತಿದ್ದು, ಹಣವನ್ನು ಪಣಕ್ಕಿಟ್ಟು ಅಂದರ್ ಬಾಹರ್ ಆಟವಾಡುತ್ತಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಸತೀಶ್, ಗಣೇಶ್, ಅನಿಲ್ ಡಿʼಸೋಜಾ ಹಾಗೂ ಸಂದೇಶ ಎಂಬವರನ್ನು ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಇದನ್ನೂ ಓದಿ : Freedom fighter G.Govindaraj: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಜಿ.ಗೋವಿಂದರಾಜ್‌ ವಿಧಿವಶ

ಇದನ್ನೂ ಓದಿ : Arecanut Price Decrease : ಅಡಿಕೆ ಬೆಲೆ ಕುಸಿತ, ಅತಂಕದಲ್ಲಿ ಬೆಳೆಗಾರರು

lorry caught fire: Lorry caught fire on the road: driver, cleaner escaped from danger

Comments are closed.