Karnataka : ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಕರ್ನಾಟಕವೇ ನಂಬರ್​ 1

Karnataka : ದೇಶದಲ್ಲಿ ಕೊರೊನಾ ಸೋಂಕಿನ ಭೀತಿ ಕಡಿಮೆಯಾಗುವಂತೆ ಕಾಣುತ್ತಿಲ್ಲ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 3.06 ಲಕ್ಷ ಹೊಸ ಕೋವಿಡ್​ ಪ್ರಕರಣಗಳು ವರದಿಯಾಗಿವೆ. ಈ ನಡುವೆ ಆಘಾತಕಾರಿ ವಿಚಾರ ಎಂಬಂತೆ ಇಡೀ ದೇಶದಲ್ಲಿ ಕರ್ನಾಟಕದಲ್ಲಿಯೇ ಅತೀ ಹೆಚ್ಚು ಅಂದರೆ ಬರೋಬ್ಬರಿ 50,210 ದೈನಂದಿನ ಪ್ರಕರಣಗಳು ಭಾನುವಾರ ವರದಿಯಾಗಿದೆ. ಇದು 2021ರ ಮೇ 5ರಂದು ವರದiಿಯಾಗಿದ್ದ 50,112 ದೈನಂದಿನ ಕೋವಿಡ್​ ಪ್ರಕರಣಗಳ ದಾಖಲೆಯನ್ನು ಮುರಿದು ಹಾಕಿದೆ.

2.2 ಲಕ್ಷ ಕೋವಿಡ್​​ ಸ್ಯಾಂಪಲ್​ಗಳ ಪರೀಕ್ಷೆಯ ಜೊತೆಯಲ್ಲಿ ದೇಶದಲ್ಲಿ ಭಾನುವಾರದಂದು ಪಾಸಿಟಿವಿಟಿ ದರವು 22. 78 ಪ್ರತಿಶತಕ್ಕೆ ಬಂದು ತಲುಪಿದೆ. ವಾರದ ಪಾಸಿಟಿವಿಟಿ ದರವು 19.06 ಪ್ರತಿಶತವಾಗಿದೆ. ಹಿಂದಿನ ದಾಖಲೆಯ ವೇಳೆಯಲ್ಲಿ ರಾಜ್ಯವು 1,55,224 ಟೆಸ್ಟ್​ಗಳನ್ನು ಮಾಡಿತ್ತು ಹಾಗೂ 32.28 ಪ್ರತಿಶತ ಪಾಸಿಟಿವಿಟಿ ದರ ವರದಿಯಾಗಿತ್ತು.


ಇನ್ನು ಕರ್ನಾಟಕದಲ್ಲಿ ವರದಿಯಾದ 50,210 ಹೊಸ ಕೋವಿಡ್​ ಪ್ರಕರಣಗಳಲ್ಲಿ ಅತೀ ಹೆಚ್ಚು ಪ್ರಕರಣಗಳು ಬೆಂಗಳೂರಿನಲ್ಲಿಯೇ ವರದಿಯಾಗಿದೆ.ಇಲ್ಲಿ ಭಾನುವಾರದಂದು ಬರೋಬ್ಬರಿ 26,299 ಹೊಸ ಕೋವಿಡ್​ ಪ್ರಕರಣಗಳು ಧೃಡಪಟ್ಟಿವೆ. ಇದಾದ ಬಳಿಕ ಮೈಸೂರಿನಲ್ಲಿ 4359 ಕೋವಿಡ್​ ಪ್ರಕರಣಗಳು ವರದಿಯಾಗಿವೆ. ಮೂರನೇ ಸ್ಥಾನದಲ್ಲಿರುವ ತುಮಕೂರಿನಲ್ಲಿ 1963 ಕೋವಿಡ್​ ಪ್ರಕರಣಗಳು ಧೃಡಪಟ್ಟಿವೆ. ಹಾಸನದಲ್ಲಿ 1922 ಪ್ರಕರಣಗಳು ಹಾಗೂ ಕೊಡಗಿನಲ್ಲಿ 1139 ಕೊರೊನಾ ಪ್ರಕರಣಗಳು ವರದಿಯಾಗಿವೆ,


ಕರ್ನಾಟಕದಲ್ಲಿ 19ಮಂದಿ ಭಾನುವಾರಂದು ಕೊರೊನಾದಿಂದ ಮೃತಪಟ್ಟಿದ್ದಾರೆ. ಇದರಲ್ಲಿ ಮೈಸೂರಿನ ಮೂರು ವರ್ಷದ ಬಾಲಕಿ ಕೂಡ ಸೇರಿದ್ದಾಳೆ. ಈಕೆ ಜನವರಿ 21ರಂದು ಮೃತಪಟ್ಟಿದ್ದಳು. ಬಾಗಲಕೋಟೆಯಲ್ಲಿ ಜನವರಿ 20ರಂದು ಆರು ವರ್ಷದ ಬಾಲಕಿ ಕೋವಿಡ್​ನಿಂದ ಮೃತಪಟ್ಟಿದ್ದಾಳೆ.
ಇನ್ನು ರಾಜ್ಯದಲ್ಲಿ 8655 ಮಂದಿ ಮಕ್ಕಳಿಗೆ ಕೊರೊನಾ ಸೋಂಕು ಧೃ

ಡಪಟ್ಟಿದೆ. ಜನವರಿ 16ರಿಂದ 22ನೇ ತಾರೀಖಿನ ಅವಧಿಯಲ್ಲಿ ಇಷ್ಟು ಮಕ್ಕಳೂ ಕೋವಿಡ್​ ಸೋಂಕಿಗೆ ಒಳಗಾಗಿದ್ದಾರೆ.

At 50,210, Karnataka hits single-day Covid high

ಇದನ್ನು ಓದಿ : Bank fraud : ಬ್ರಹ್ಮಾವರದಲ್ಲಿ ಸಾಲ ಪಡೆದು ಬ್ಯಾಂಕಿಗೆ ಕೋಟ್ಯಾಂತರ ರೂಪಾಯಿ ವಂಚನೆ

Comments are closed.