ಭಾರತೀಯ ಬಳಕೆದಾರರಿಗೆ ಎಚ್ಚರಿಕೆ : ಈ 4 ದೇಶಗಳಲ್ಲಿ ಪಾಸ್‌ವರ್ಡ್ ಹಂಚಿಕೆ ಕೊನೆಗೊಳಿಸಿದ ನೆಟ್‌ಫ್ಲಿಕ್ಸ್‌

ಇತ್ತೀಚಿನ ಜನರು ಸಿನಿಮಂದಿರಗಳಲ್ಲಿ ಹೋಗಿ ಸಿನಿಮಾ ನೋಡುವುದಕ್ಕಿಂತ ಹೆಚ್ಚಾಗಿ ಓಟಿಟಿ ಪ್ಲಾಟ್‌ಫಾರ್ಮ್‌ಗಳ ಮೂಲಕ ತಮ್ಮಗೆ ಸಮಯವಿದ್ದಾಗ ಮನೆಯಲ್ಲೇ ಕೂತು ಸಿನಿಮಾ ಹಾಗೂ ಟಿವಿ ಕಾರ್ಯಕ್ರಮಗಳನ್ನು ನೋಡಿ ಆನಂದಿಸುತ್ತಾರೆ. ಪ್ರಪಂಚದಾದ್ಯಂತ ಹೆಸರಾಂತ ಓಟಿಟಿ ಪ್ಲಾಟ್‌ಫಾರ್ಮ್‌ ಆದ ನೆಟ್‌ಫ್ಲಿಕ್ಸ್ (Netflix password) ಇತ್ತೀಚೆಗೆ ವ್ಯಾಪಕ ಪ್ರಮಾಣದಲ್ಲಿ ತನ್ನ ಪಾಸ್‌ವರ್ಡ್ ಹಂಚಿಕೆಯನ್ನು ಕೊನೆಗೊಳಿಸುವುದಾಗಿ ಘೋಷಿಸಿತು. ಹೀಗಾಗಿ ನೆಟ್‌ಫ್ಲಿಕ್ಸ್ ಪ್ಲಾಟ್‌ಫಾರ್ಮ್ ಈಗ ಕೆನಡಾ, ನ್ಯೂಜಿಲೆಂಡ್, ಪೋರ್ಚುಗಲ್ ಮತ್ತು ಸ್ಪೇನ್ ಸೇರಿದಂತೆ ಹೆಚ್ಚಿನ ದೇಶಗಳಲ್ಲಿ ಪಾಸ್‌ವರ್ಡ್ ಹಂಚಿಕೆಗಳ ವಿರುದ್ಧ ಕ್ರಮಗಳನ್ನು ತೆಗೆದುಕೊಂಡಿದೆ. ಇನ್ನು ಭಾರತೀಯ ನೆಟ್‌ಫ್ಲಿಕ್ಸ್‌ ಬಳಕೆದಾರರು ಇದಕ್ಕೆ ಸಿದ್ದರಾಗಬೇಕಾಗಿದೆ.

ಪ್ಲಾಟ್‌ಫಾರ್ಮ್ ಈಗಾಗಲೇ ಉತ್ತರ ಅಮೆರಿಕಾ ಮತ್ತು ಇತರ ಕೆಲವು ಪ್ರದೇಶಗಳಲ್ಲಿ ಸ್ನೇಹಿತರೊಂದಿಗೆ ಖಾತೆಗಳನ್ನು ಹಂಚಿಕೊಳ್ಳುವ ಬಳಕೆದಾರರಿಗೆ ಶುಲ್ಕ ವಿಧಿಸುತ್ತಿದೆ. ಮಾರ್ಚ್ ಅಂತ್ಯದ ವೇಳೆಗೆ ಯುಕೆಯಲ್ಲಿ ಅದೇ ರೀತಿ ಮಾಡಲು ಯೋಜಿಸುತ್ತಿದೆ ಎಂದು ವರದಿಯಾಗಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಈಗಾಗಲೇ 100 ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರು ಖಾತೆಗಳನ್ನು ಹಂಚಿಕೊಳ್ಳುತ್ತಿದ್ದಾರೆ ಎಂದು ಕಂಪನಿ ತಿಳಿಸಿದೆ. ಇದರಿಂದಾಗಿ ಹೊಸ ಟಿವಿ ಶೋಗಳು ಅಥವಾ ಸಿನಿಮಾಗಳಲ್ಲಿ ಹೂಡಿಕೆ ಮಾಡುವವರ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ.

ನೆಟ್‌ಫ್ಲಿಕ್ಸ್‌ ತನ್ನ ಪೋಸ್ಟ್‌ನಲ್ಲಿ,”ಕಳೆದ ವರ್ಷದಲ್ಲಿ, ಲ್ಯಾಟಿನ್ ಅಮೆರಿಕಾದಲ್ಲಿ ಈ ಸಮಸ್ಯೆಯನ್ನು ಪರಿಹರಿಸಲು ನಾವು ವಿಭಿನ್ನ ವಿಧಾನಗಳನ್ನು ಅನ್ವೇಷಿಸುತ್ತಿದ್ದೇವೆ. ಹೀಗಾಗಿ ಮುಂಬರುವ ತಿಂಗಳುಗಳಲ್ಲಿ ಕೆನಡಾ, ನ್ಯೂಜಿಲೆಂಡ್, ಪೋರ್ಚುಗಲ್ ಮತ್ತು ಸ್ಪೇನ್‌ನಲ್ಲಿ ಇಂದಿನಿಂದ ಪ್ರಾರಂಭಿಸಿ ಅವುಗಳನ್ನು ಹೆಚ್ಚು ವಿಶಾಲವಾಗಿ ಹೊರತರಲು ನಾವು ಈಗ ಸಿದ್ಧರಾಗಿದ್ದೇವೆ. ಸದಸ್ಯರಿಗೆ ತಮ್ಮ ಖಾತೆಯನ್ನು ಯಾರು ಪ್ರವೇಶಿಸಬಹುದು ಎಂಬುದರ ಮೇಲೆ ಹೆಚ್ಚಿನ ನಿಯಂತ್ರಣವನ್ನು ನೀಡುವುದರ ಮೇಲೆ ನಮ್ಮ ಗಮನ ಕೇಂದ್ರೀಕೃತವಾಗಿದೆ, ” ಎಂದು ಹೇಳಿದೆ.

ಪಾಸ್‌ವರ್ಡ್‌ನ್ನು ಕೊನೆಗೊಳಿಸಿವುದರಿಂದ ಭಾರತೀಯರು ಏಕೆ ಸಿದ್ಧರಾಗಿರಬೇಕು?
ನೆಟ್‌ಫ್ಲಿಕ್ಸ್ ತಮ್ಮ ಖಾತೆಯ ಪಾಸ್‌ವರ್ಡ್ ಅನ್ನು ಸ್ನೇಹಿತರು ಅಥವಾ ಅವರ ಮನೆಯ ಹೊರಗಿನ ಇತರ ಜನರೊಂದಿಗೆ ಹಂಚಿಕೊಳ್ಳುವ ಬಳಕೆದಾರರಿಗೆ ಶುಲ್ಕ ವಿಧಿಸುವ ಉದ್ದೇಶವನ್ನು ಸ್ಪಷ್ಟವಾಗಿ ಹೇಳಿದೆ. ವೀಡಿಯೊ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಈಗಾಗಲೇ ಕೆಲವು ಪ್ರದೇಶಗಳಲ್ಲಿ ಹಂಚಿಕೆ ವಿರೋಧಿ ಯೋಜನೆಗಳನ್ನು ಹೊರತಂದಿದ್ದು, ಅದು ಈಗ ಹೆಚ್ಚಿನ ದೇಶಗಳಿಗೆ ವಿಸ್ತರಿಸಿದೆ. ಸದ್ಯ ಭಾರತವು ಪ್ರಸ್ತುತ ಈ ಪಟ್ಟಿಯಲ್ಲಿ ಇರುವುದಿಲ್ಲ. ಆದರೆ ಭಾರತೀಯರು ಅದಕ್ಕೆ ಸಿದ್ಧರಾಗಿರಬೇಕು ಏಕೆಂದರೆ 2023 ರ ಮೊದಲ ತ್ರೈಮಾಸಿಕದಲ್ಲಿ ಪಾಸ್‌ವರ್ಡ್ ಹಂಚಿಕೆಯನ್ನು ಕೊನೆಗೊಳಿಸಲು ಯೋಜಿಸುತ್ತಿದೆ ಎಂದು ವೇದಿಕೆ ಇತ್ತೀಚೆಗೆ ಬಹಿರಂಗಪಡಿಸಿದೆ.

ನೆಟ್‌ಫ್ಲಿಕ್ಸ್‌ಗೆ ಭಾರತವು ಪ್ರಮುಖ ಮಾರುಕಟ್ಟೆಗಳಲ್ಲಿ ಒಂದಾಗಿದ್ದು, ಕಂಪನಿಯು ದೇಶದಲ್ಲಿ 5 ಮಿಲಿಯನ್ ಬಳಕೆದಾರರನ್ನು ಹೊಂದಿದೆ ಎಂದು ವರದಿಯಾಗಿದೆ. ಆದರೆ ಇದನ್ನು ಇನ್ನು ಅಧಿಕೃತವಾಗಿ ದೃಢೀಕರಿಸಲಾಗಿಲ್ಲ. ಆದರೆ, ಅನೇಕ ಭಾರತೀಯರು ತಮ್ಮ ನೆಟ್‌ಫ್ಲಿಕ್ಸ್ ಖಾತೆಯನ್ನು ಬಹಳಷ್ಟು ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಹಂಚಿಕೊಳ್ಳುತ್ತಾರೆ ಎಂಬುದು ರಹಸ್ಯವಾಗಿ ಉಳಿದಿಲ್ಲ. ಹಾಗಾಗಿ, ನೆಟ್‌ಫ್ಲಿಕ್ಸ್‌ನ ಮುಂದಿನ ಗುರಿ ಭಾರತ ಆಗಿರಬಹುದು. ಭಾರತದಲ್ಲಿ ನೆಟ್‌ಫ್ಲಿಕ್ಸ್ ಪಾಸ್‌ವರ್ಡ್ ಹಂಚಿಕೆಯನ್ನು ಯಾವಾಗ ಕೊನೆಗೊಳಿಸುತ್ತದೆ ಎಂಬುದು ತಿಳಿದಿಲ್ಲ. ಆದರೆ ಇದಕ್ಕಾಗಿ ನೆಟ್‌ಫ್ಲಿಕ್ಸ್‌ ಹೆಚ್ಚಿನ ಸಮಯ ತೆಗೆದುಕೊಳ್ಳುವ ಹಾಗೆ ಕಾಣುತ್ತಿಲ್ಲ. ವಿಶೇಷವಾಗಿ ಮುಂಬರುವ ತಿಂಗಳುಗಳಲ್ಲಿ ಇದನ್ನು ವ್ಯಾಪಕ ಪ್ರಮಾಣದಲ್ಲಿ ಕೊನೆಗೊಳಿಸುವುದಾಗಿ ಕಂಪನಿಯು ಹೇಳಿದೆ. ನೆಟ್‌ಫ್ಲಿಕ್ಸ್ ಶೀಘ್ರದಲ್ಲೇ ತಮ್ಮ ಖಾತೆಯನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳುವ ಬಳಕೆದಾರರಿಗೆ ಹೆಚ್ಚುವರಿ ಶುಲ್ಕ ವಿಧಿಸಲು ಪ್ರಾರಂಭಿಸುತ್ತದೆ.

ನೆಟ್‌ಫ್ಲಿಕ್ಸ್ ಪಾಸ್‌ವರ್ಡ್ ಅನ್ನು ಮನೆಯ ಹೊರಗೆ ಹಂಚಿಕೊಳ್ಳಲು ಸಾಧ್ಯವಿಲ್ಲ: ಇದರ ಅರ್ಥವೇನು?
ನೆಟ್‌ಫ್ಲಿಕ್ಸ್ ಒಂದೇ ಮನೆಯಲ್ಲಿ ವಾಸಿಸುವ ಜನರು ನೆಟ್‌ಫ್ಲಿಕ್ಸ್ ಖಾತೆಗಳನ್ನು ಹಂಚಿಕೊಳ್ಳಬಹುದು ಎಂದು ಹೇಳುತ್ತದೆ. ಆದರೆ ಬಳಕೆದಾರರು ಹೊರಗಿನವರೊಂದಿಗೆ ಖಾತೆಗಳನ್ನು ಹಂಚಿಕೊಳ್ಳಲು ಪ್ರಯತ್ನಿಸಿದರೆ, ಕಂಪನಿಯು ಅವರಿಗೆ ಹೆಚ್ಚುವರಿ ಶುಲ್ಕ ವಿಧಿಸಲು ಪ್ರಾರಂಭಿಸುತ್ತದೆ. ನಿಮ್ಮ ಕುಟುಂಬದ ಸದಸ್ಯರಲ್ಲಿ ಯಾರಾದರೂ ಬೇರೆ ಸ್ಥಳಕ್ಕೆ ಸ್ಥಳಾಂತರಗೊಂಡರೆ, ಆ ವ್ಯಕ್ತಿಯು ಅದೇ ನೆಟ್‌ಫ್ಲಿಕ್ಸ್ ಖಾತೆಯನ್ನು ಬಳಸಲು ಸಾಧ್ಯವಾಗುವುದಿಲ್ಲ. ಏಕೆಂದರೆ ನೆಟ್‌ಫ್ಲಿಕ್ಸ್ ಮನೆಯ ಹೊರಗೆ ಪಾಸ್‌ವರ್ಡ್ ಹಂಚಿಕೆಯನ್ನು ಅನುಮತಿಸುವುದಿಲ್ಲ ಎನ್ನುವುದನ್ನು ನೆನಪಿಸಬೇಕಾಗಿದೆ.

ಇದನ್ನೂ ಓದಿ : ಜೈಲು ಶಿಕ್ಷೆಗೆ ಗುರಿಯಾಗಿರುವ ನಟಿ ಅಭಿನಯ ನಾಪತ್ತೆ : ಖ್ಯಾತ ನಟಿಗಾಗಿ ಪೊಲೀಸರ ಶೋಧ

ಇದನ್ನೂ ಓದಿ : ವಾಲ್ಮೀಕಿ ಜಾತ್ರೆಗೆ ಸುದೀಪ್ ಬಾರದ್ದಕ್ಕೆ ಫ್ಯಾನ್ಸ್ ಆಕ್ರೋಶ : ಕರೆದಿದ್ದರೆ ಖಂಡಿತ ಬರುತ್ತಿದ್ದೆ ಎಂದ ಸುದೀಪ್!

ಇದನ್ನೂ ಓದಿ : Golden Star Ganesh: ಕಪಿಲ್ ಶರ್ಮಾ ಶೋದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ : ವಿಡಿಯೋ ವೈರಲ್

ಬಳಕೆದಾರರು ನೆಟ್‌ಫ್ಲಿಕ್ಸ್‌ ಪಾಸ್‌ವರ್ಡ್ ಅನ್ನು ಸ್ನೇಹಿತರೊಂದಿಗೆ ಹಂಚಿಕೊಂಡರೆ ಹೇಗೆ ಪತ್ತೆ ಮಾಡುತ್ತದೆ?
ತನ್ನ ಬೆಂಬಲ ಪುಟದಲ್ಲಿ, ನೆಟ್‌ಫ್ಲಿಕ್ಸ್ ತನ್ನ ವೆಬ್‌ಸೈಟ್ “ಐಪಿ ವಿಳಾಸಗಳು, ಸಾಧನ ಐಡಿಗಳು ಮತ್ತು ನೆಟ್‌ಫ್ಲಿಕ್ಸ್ ಖಾತೆಗೆ ಸೈನ್ ಇನ್ ಮಾಡಿದ ಸಾಧನಗಳಿಂದ ಖಾತೆ ಚಟುವಟಿಕೆಯನ್ನು” ಬಳಸುತ್ತದೆ ಎಂದು ಹೇಳುತ್ತದೆ. ಈ ಸಾಧನಗಳ ಮೂಲಕ ಬಳಕೆದಾರರು ಒಂದೇ ಮನೆಯಲ್ಲಿ ಖಾತೆಯನ್ನು ಬಳಸುತ್ತಿದ್ದರಾ ಎಂದು ತಿಳಿಯುತ್ತದೆ.

Netflix password : Warning for Indian users : Netflix has stopped password sharing in these 4 countries

Comments are closed.