Kim Kardashian : ಮರ್ಲಿನ್​ ಮನ್ರೋ ಉಡುಪಿಗೆ ಹಾನಿ ಮಾಡಿದ ಕಿಮ್​ ಕಾರ್ಡಶಿಯಾನ್​ : ನೆಟ್ಟಿಗರ ಆಕ್ರೋಶ

Kim Kardashian : 2022ನೇ ಸಾಲಿನ ಮೆಟ್​ ಗಾಲಾದಲ್ಲಿ ಕಿಮ್​ ಕಾರ್ಡಶಿಯಾನ್​​ ಮರ್ಲಿನ್​ ಮನ್ರೋ ಧರಿಸಿದ್ದ ಐತಿಹಾಸಿಕ ಹಾಗೂ ಅತ್ಯಂತ ದುಬಾರಿ ಗೌನ್​ನ್ನು ಧರಿಸಿದ್ದು ನೆನಪಿದ್ದಿರಬಹುದು. ಅನೇಕರು 60 ವರ್ಷಗಳ ಹಿಂದಿನ ಉಡುಗೆಯನ್ನು ಧರಿಸಿದ್ದನ್ನು ಹೊಗಳಿದರೆ ಇನ್ನೂ ಕೆಲವರು ಇದು ಇತಿಹಾಸಕ್ಕೆ ಮಾಡಿದ ಅವಮಾನ ಎಂದು ಖಂಡಿಸಿದ್ದರು. ಆದರೆ ಇದೀಗ ಕಿಮ್​ ಕಾರ್ಡಶಿಯಾನ್​ ಇದೇ ಉಡುಗೆಯ ವಿಚಾರದಲ್ಲಿ ಹೊಸದೊಂದು ವಿವಾದದಲ್ಲಿ ಸಿಲುಕಿದ್ದಾರೆ. ಏಕೆಂದರೆ ಮೆಟ್​ ಗಾಲಾದಲ್ಲಿ ಕಿಮ್​ ಕಾರ್ಡಶಿಯಾನ್​ ಧರಿಸಿದ್ದ ಈ ಬಹುಮುಖ್ಯವಾದ ಉಡುಪು ನಾಶವಾಗಿದೆ.


41 ವರ್ಷದ ಕಿಮ್​ ಕಾರ್ಡಶಿಯಾನ್​​​ ಈ ಗೌನ್​​ನ್ನು ಧರಿಸುವ ಸಲುವಾಗಿ ಕೇವಲ 1 ವಾರದಲ್ಲಿ 16 ಪೌಂಡ್​ ತೂಕವನ್ನು ಕಳೆದುಕೊಂಡಿದ್ದಾರೆ. ಆದರೂ ಸಹ ಕಿಮ್​ ಕಾರ್ಡಶಿಯಾನ್​ ಈ ಉಡುಪಿನಲ್ಲಿ ಆರಮದಾಯಕವಾಗಿ ಇದ್ದಂತೆ ತೋರಲಿಲ್ಲ. ಕಾರ್ಡಶಿಯಾನ್​ಗೆ ಗೌನ್​​ನಲ್ಲಿ ಮುಕ್ತವಾಗಿ ಚಲಿಸಲು ಸಾಧ್ಯವಾಗಿರಲಿಲ್ಲ .


ಈ ಉಡುಪನ್ನು ಧರಿಸಲು ನನಗೆ ಅವಕಾಶ ಸಿಕ್ಕಿದ್ದಕ್ಕೆ ನಾನು ಗೌರವಾನ್ವಿತಳು. ಇದು ಅಮರಿಕದ ಇತಿಹಾಸದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. ನಾನು ಈ ಉಡುಗೆಯಲ್ಲಿ ಕುಳಿತುಕೊಳ್ಳಲು ಅಥವಾ ತಿನ್ನಲು ಇಷ್ಟಪಡುವುದಿಲ್ಲ . ನಾನು ಸಾಮಾನ್ಯವಗಾಗಿ ಧರಿಸುವ ಬಾಡಿ ಮೇಕಪ್​​ನ್ನು ಈ ಉಡುಗೆಯಲ್ಲಿ ಧರಿಸಿಲ್ಲ ಎಂದು ಹೇಳಿದ್ದರು. ಇದಾದ ಬಳಿಕ ಪೀಟ್​ ಡೇವಿಡ್ಸನ್​ ಜೊತೆಯಲ್ಲಿ ಕಿಮ್​ ಕಾರ್ಡಶಿಯಾನ್​​ ಪೋಸ್​ ಕೂಡ ನೀಡಿದ್ದರು. ಆದರೆ ಇದೀಗ ಕಿಮ್ ಕಾರ್ಡಶಿಯಾನ್​ ವಿರುದ್ಧ ವಿಶ್ವದ ಅತ್ಯಂತ ದುಬಾರಿ ಗೌನ್​ಗೆ ಹಾನಿ ಉಂಟು ಮಾಡಿರುವ ಆರೋಪ ಎದುರಾಗಿದೆ.

ಮೆಟ್​​ ಗಲಾದಲ್ಲಿ ಕಾರ್ಡಶಿಯಾನ್​ ಗೌನ್​ನ್ನು ಧರಿಸುವ ಮುನ್ನ ಹಾಗೂ ನಂತರದ ಫೋಟೋಗಳನ್ನು ಪಾಪ್​ ಕಲ್ಚರ್​​​ ಪ್ರಕಟಿಸಿದೆ. ಈ ಫೋಟೋದಲ್ಲಿ ಗೌನ್​​ನ ಹಿಂಭಾಗದಲ್ಲಿ ಹರಳುಗಳು ಉರುಳಿರುವದನ್ನು ಕಾಣಬಹುದಾಗಿದೆ .
ಈ ವಿಚಾರ ವೈರಲ್​ ಆಗುತ್ತಿದ್ದಂತೆಯೇ ಇಂಟರ್ನೆಟ್​ನಲ್ಲಿ ನೆಟ್ಟಿಗರು ಆಕ್ರೋಶವನ್ನು ಹೊರ ಹಾಕಲು ಆರಂಭಿಸಿದ್ದಾರೆ. ಕಿಮ್​ ಈ ಉಡುಪನ್ನು ಧರಿಸಬಾರದಿತ್ತು. ಮರ್ಲಿನ್​ ಮನ್ರೋಗೆ ಗೌರವ ಕೊಡಲೇಬೇಕು ಎನಿಸಿದ್ದರೆ ಅವರು ಇಂತಹದ್ದೇ ಪ್ರತಿರೂಪದ ಉಡುಪನ್ನು ಧರಿಸಬಹುದಿತ್ತು. ಇದೊಂದು ಐತಿಹಾಸಿಕ ಉಡುಗೆಯಾಗಿದ್ದು ಈಗ ಅದೂ ಹಾಳಾಗಿದೆ ಎಂದು ಮೂಗು ಮುರಿದಿದ್ದಾರೆ.

ಇದನ್ನು ಓದಿ : Virat Kohli : ಸಮುದ್ರ ತಟದಲ್ಲಿ ಕುಳಿತು ಹಾಟ್ ಫೋಟೋ ಶೇರ್ ಮಾಡಿದ ಕಿಂಗ್ ವಿರಾಟ್ ಕೊಹ್ಲಿ

ಇದನ್ನೂ ಓದಿ : Broadcasting Rights : ಅಬ್ಬಬ್ಬಾ… ಐಪಿಎಲ್ ಮುಂದೆ ಇಂಗ್ಲೀಷ್ ಪ್ರೀಮಿಯರ್ ಲೀಗ್ ದಾಖಲೆಯೂ ಉಡೀಸ್

Netizens bash Kim Kardashian for damaging Marilyn Monroe’s iconic dress during her Met Gala outing

Comments are closed.