Raghu Dixit and Mayuri : ರಘು ದೀಕ್ಷಿತ್​ – ಮಯೂರಿ ನಡುವಿನ ದಾಂಪತ್ಯ ಮುರಿದುಬೀಳಲು ನಿಜವಾದ ಕಾರಣ ಇಲ್ಲಿದೆ ನೋಡಿ

Raghu Dixit and Mayuri : ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಬಹುಬೇಡಿಕೆಯ ಸಂಗೀತ ನಿರ್ದೇಶಕ ಎನಿಸಿರುವ ಗಾಯಕ ರಘು ದೀಕ್ಷಿತ್​ ಆಗಾಗ ವಿದೇಶಗಳಲ್ಲಿಯೂ ಪ್ರದರ್ಶನಗಳನ್ನು ನೀಡುವ ಮೂಲಕ ಅಲ್ಲಿಯೂ ಅಭಿಮಾನಿಗಳನ್ನು ಗಳಿಸಿದ್ದಾರೆ. ಅತ್ಯಂತ ವಿಭಿನ್ನ ಶೈಲಿಯಲ್ಲಿ ಉಡುಪನ್ನು ಧರಿಸಿ ಜಾನಪದ ಶೈಲಿಯಲ್ಲಿ ರಘು ದೀಕ್ಷಿತ್​ ಸಂಗೀತ ಪ್ರದರ್ಶನ ನೀಡಲು ಆರಂಭಿಸಿದರೆ ಸಾಕು ಮೈ ರೋಮಾಂಚನಗೊಳ್ಳುತ್ತದೆ. ಸಂಗೀತ ಕ್ಷೇತ್ರದಲ್ಲಿ ಅಪಾರ ಪ್ರಮಾಣದ ಸಾಧನೆಯನ್ನು ಮಾಡಿರುವ ರಘು ದೀಕ್ಷಿತ್​ ತಮ್ಮ ವೈಯಕ್ತಿಕ ಜೀವನದಲ್ಲಿ ಮಾತ್ರ ಸಾಕಷ್ಟು ಏರಿಳಿತಗಳನ್ನು ಕಂಡಿದ್ದಾರೆ. ನೃತ್ಯ ಸಂಯೋಜಕಿ ಮಯೂರಿಯನ್ನು ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿಯ ನಡುವೆ ವಿರಸ ಬರಲು ನಿಜವಾದ ಕಾರಣವೇನು ಎಂಬುದಕ್ಕೆ ಇಲ್ಲಿದೆ ಮಾಹಿತಿ.

ಗಿಟಾರ್​ ಹಾಗೂ ಬ್ಯಾಂಡ್​ಗಳನ್ನು ಹಿಡಿದು ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸುವಂತೆ ಪ್ರದರ್ಶನ ನೀಡುವ ರಘು ದೀಕ್ಷಿತ್​ ಕನ್ನೆ ಮಾತ್ರವಲ್ಲದೇ ತೆಲುಗು, ಇಂಗ್ಲಿಷ್​ ಭಾಷೆಯಲ್ಲಿಯೂ ಆಲ್ಬಂ ಸಾಂಗ್​ಗಳನ್ನು ರಚಿಸಿ ಹಿಟ್​ ಆಗಿದ್ದಾರೆ. ಸೈಕೋ, ಜಸ್ಟ್​ ಮಾತ್​ ಮಾತಲ್ಲಿ, ಕೋಟೆ, ಸೂಪರ್​ ಮ್ಯಾನ್​ ಹೀಗೆ ಸಾಕಷ್ಟು ಸಿನಿಮಾಗಳು ಇವರಿಗೆ ಹೆಸರು ತಂದುಕೊಟ್ಟಿವೆ.

ವೃತ್ತಿಯಲ್ಲಿ ಡ್ಯಾನ್ಸರ್​ ಆಗಿರುವ ಮಯೂರಿ ಹಾಗೂ ರಘು ದೀಕ್ಷಿತ್​​ ಪರಸ್ಪರ ಪ್ರೀತಿಸಿ ಮದುವೆಯಾದವರು. ಆದರೆ ಕಾಲಾಂತರದಲ್ಲಿ ಇವರು ವಿಚ್ಛೇದನ ಪಡೆಯುವ ಮೂಲಕ ದೂರಾಗಿದ್ದರು. ವಿಚ್ಛೇದನ ಪಡೆದ ಬಳಿಕ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಶೇರ್​ ಮಾಡಿದ್ದ ರಘು ದೀಕ್ಷಿತ್​ ಮಯೂರಿ ಬಳಿ ಸಾರ್ವಜನಿಕವಾಗಿ ಕ್ಷಮೆ ಕೂಡ ಕೇಳಿದ್ದರು. ಹಾಗಾದರೆ ನಿಜಕ್ಕೂ ಈ ಜೋಡಿಯ ನಡುವೆ ಏನಾಗಿತ್ತು..? ಎಂದು ಕೇಳಿದರೆ ಅದಕ್ಕೆ ಸಿಗುವ ಉತ್ತರ ಮೀಟೂ ಆರೋಪ.

ವಿಚ್ಚೇದನ ಪಡೆಯುವುದಕ್ಕೂ ಮುನ್ನ ಈ ಜೋಡಿ ಒಂದು ವರ್ಷಗಳ ಕಾಲ ಬೇರೆಯಾಗಿ ವಾಸಿಸುತ್ತಿದ್ದರು. ಸ್ಯಾಂಡಲ್​ವುಡ್​ನಲ್ಲಿ ಮೀಟೂ ಆರೋಪ ಜೋರಾಗಿ ಸದ್ದು ಮಾಡುತ್ತಿದ್ದ ಸಂದರ್ಭದಲ್ಲಿ ಗಾಯಕಿ ಚಿನ್ಮಯಿ ಶ್ರೀಪಾದ್​ ರಘು ದೀಕ್ಷಿತ್​ ಮೇಲೆ ಮೀಟೂ ಆರೋಪ ಮಾಡಿದ್ದರು. ಚಿನ್ಮಯಿ ಟ್ವಿಟರ್​ನಲ್ಲಿ ಸುದೀರ್ಘ ಪತ್ರವನ್ನು ಬರೆಯುವ ಮೂಲಕ ರಘು ದೀಕ್ಷಿತ್​ ವಿರುದ್ಧ ಆರೋಪ ಮಾಡಿದ್ದರು.

ಈ ಆರೋಪಕ್ಕೆ ಸಕಾರಾತ್ಮಕವಾಗಿಯೇ ಪ್ರತಿಕ್ರಿಯಿಸಿದ್ದ ರಘು ದೀಕ್ಷಿತ್​ ನಾನು ಆಕೆಯನ್ನು ಹಗ್​ ಮಾಡಿ ಕಿಸ್​ ಮಾಡಲು ಯತ್ನಿಸಿದ್ದು ಹೌದು. ಬಳಿಕ ನನ್ನ ತಪ್ಪಿನ ಅರಿವಾಗಿ ಕ್ಷಮೆ ಕೂಡ ಕೇಳಿದ್ದೇನೆ. ಈಗಲೂ ನಾನು ಮಾಡಿದ ತಪ್ಪಿಗೆ ಕ್ಷಮೆ ಕೇಳುತ್ತೇನೆ ಎಂದು ಟ್ವಿಟರ್​ನಲ್ಲಿಯೇ ಪ್ರತಿಕ್ರಿಯೆ ನೀಡಿದ್ದರು.

ಪತಿಯ ವಿರುದ್ಧ ಇಂತದ್ದೊಂದು ಆರೋಪ ಎದುರಾಗುತ್ತಿದ್ದಂತೆಯೇ ಟ್ವಿಟರ್​ನಲ್ಲಿ ಪ್ರತಿಕ್ರಿಯಿಸಿದ್ದ ಮಯೂರಿ, ಲೈಂಗಿಕ ಕಿರುಕುಳಕ್ಕೆ ಬಲಿಯಾದವರ ಪರವಾಗಿ ನಾನು ಎಂದಿಗೂ ನಿಲ್ಲುತ್ತೇನೆ. ಲೈಂಗಿಕ ಕಿರುಕುಳದ ವಿರುದ್ಧ ಕಾನೂನು ಸಮರವೇ ಸೂಕ್ತ ಎಂದು ನನಗೆನಿಸುತ್ತದೆ. ಆಗ ಮಾತ್ರ ಮಹಿಳೆಯರಿಗೆ ತೊಂದರೆ ನೀಡಲು ಪುರುಷರು ಧೈರ್ಯ ತೋರುವುದಿಲ್ಲ ಎಂದು ನಾನು ಭಾವಿಸುತ್ತೇನೆಂದು ಎಂದು ಬರೆದುಕೊಂಡಿದ್ದರು. ಈ ಘಟನೆಯ ಬಳಿಕ ಮಯೂರಿ ಹಾಗೂ ರಘು ದೀಕ್ಷಿತ್​ ನಡುವೆ ವೈಮನಸ್ಯ ಮೂಡಿತ್ತು. ಕಾಲಾಂತರದಲ್ಲಿ ಇಬ್ಬರೂ ವಿಚ್ಛೇದನವನ್ನು ಪಡೆದು ದೂರಾಗಿದ್ದರು.

ಇದನ್ನು ಓದಿ : kerala girl commits suicide : ಅತಿಯಾದ ಮೊಬೈಲ್​ ಚಟದಿಂದ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ

ಇದನ್ನೂ ಓದಿ : ಕಮರಿಗೆ ಉರುಳಿದ ಬಸ್ : 22 ಸಾವು, 6 ಮಂದಿಗೆ ಗಾಯ

News of Raghu Dixit and Mayuri divorce

Comments are closed.