Loud Speaker Permission : ಬೆಂಗಳೂರಿನಲ್ಲಿ ಜೋರಾಗಲಿದೆ ಧರ್ಮ ದಂಗಲ್ : ಲೌಡ್ ಸ್ಪೀಕರ್ ಗೆ ಅನುಮತಿ ಕೋರಿ 700 ಅರ್ಜಿ ಸಲ್ಲಿಕೆ

ಬೆಂಗಳೂರು : ರಾಜ್ಯದಲ್ಲಿ ಸದ್ಯ ಧರ್ಮ ದಂಗಲ್ ನಿಲ್ಲುವ ಲಕ್ಷಣಗಳೇ ಇಲ್ಲ. ಮಸೀದಿಯಲ್ಲಿ ಲೌಡ್ ಸ್ಪೀಕರ್ (Loud Speaker) ಬಳಕೆಗೆ ಪರ್ಯಾಯವಾಗಿ ಧಾರ್ಮಿಕ ಕೇಂದ್ರದಲ್ಲಿ ಮೈಕ್ ಬಳಕೆಗೆ ಹಿಂದೂಪರ ಸಂಘಟನೆಗಳು ಸಿದ್ಧತೆ ನಡೆಸಿದ್ದವು. ಆದರೆ ಈ ಹೋರಾಟಕ್ಕೆ ಕಡಿವಾಣ ಹಾಕಲು ಸಿದ್ಧವಾದ ಸರ್ಕಾರ ಲೌಡ್ ಸ್ಪೀಕರ್ ಬಳಕೆಗೆ ಅನುಮತಿ ಕಡ್ಡಾಯ ಎಂದು ಆದೇಶ ಹೊರಡಿಸಿತ್ತು. ಇದರ ಫಲವಾಗಿ ರಾಜ್ಯದ ಪೊಲೀಸ್ ಠಾಣೆಗಳಲ್ಲಿ ಲೌಡ್ ಸ್ಪೀಕರ್ ಬಳಕೆಗೆ ಅನುಮತಿ ಕೋರಿ ಸಾಲು ಸಾಲು ಅರ್ಜಿ ಸಲ್ಲಿಕೆಯಾಗಿದೆ.

ಧಾರ್ಮಿಕ ಕೇಂದ್ರಗಳಲ್ಲಿ ಲೌಡ್ ಸ್ಪೀಕರ್ ಬಳಕೆಗೆ ಅನುಮತಿ ಕೋರಿ ಬೆಂಗಳೂರು ನಗರ ಒಂದರಲ್ಲೇ ಬರೋಬ್ಬರಿ ಏಳು ನೂರಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಧಾರ್ಮಿಕ ಕೇಂದ್ರಗಳಲ್ಲಿ ಲೌಡ್ ಸ್ಪೀಕರ್ ಬಳಕೆಗೆ ಅನುಮತಿ ಪಡೆಯುವಂತೆ ಆದೇಶಿಸಿದ್ದ ಸರ್ಕಾರ ಇದಕ್ಕಾಗಿ ಅರ್ಜಿ ಸಲ್ಲಿಸಲು 15 ದಿನ ಗಡುವು ನೀಡಿತ್ತು. ಹೀಗಾಗಿ ಸರ್ಕಾರದ ಆದೇಶದಂತೆ ಪೊಲೀಸ್ ಠಾಣೆ, ಎಸಿಪಿ ಕಚೇರಿಗಳಿಗೆ ಅರ್ಜಿಗಳು ಬರ್ತಿವೆ. ಇನ್ನೂ ಬೆಂಗಳೂರು ನಗರದಲ್ಲಿ ಈವರೆಗೆ ಎಷ್ಟು ಅರ್ಜಿ ಬಂದಿವೆ ಅನ್ನೋದನ್ನು ನೋಡೋದಾದರೇ, ಲೌಡ್ ಸ್ಪೀಕರ್ ಬಳಕೆಗೆ ಅನುಮತಿ ಕೋರಿ ಈವರೆಗೆ 700 ಕ್ಕೂ ಹೆಚ್ಚು ಅರ್ಜಿ.700 ಅರ್ಜಿಯಲ್ಲಿ 62 ದೇವಾಲಯ, 611 ಮಸೀದಿ, 42 ಚರ್ಚ್, ಇತರೆ 2.

ನಗರದ ಕೇಂದ್ರ ವಿಭಾಗದಲ್ಲಿ 36 Loud Speaker ಅರ್ಜಿ ಸಲ್ಲಿಕೆ

ದೇವಾಲಯ 1, ಮಸೀದಿ 32, ಚರ್ಚ್ 2.
ಪೂರ್ವ ವಿಭಾಗದಲ್ಲಿ 233 ಅರ್ಜಿ ಸಲ್ಲಿಕೆ.
ದೇವಾಲಯ 22, ಮಸೀದಿ 191, ಚರ್ಚ್ 20.
ಪಶ್ಚಿಮ ವಿಭಾಗದಲ್ಲಿ 114 ಅರ್ಜಿ ಸಲ್ಲಿಕೆ.
ದೇವಾಲಯ 5, ಮಸೀದಿ 108, ಚರ್ಚ್ 1.
ದಕ್ಷಿಣ ವಿಭಾಗದಲ್ಲಿ 47 ಅರ್ಜಿ ಸಲ್ಲಿಕೆ.
ದೇವಾಲಯ 2, ಮಸೀದಿ 43, ಚರ್ಚ್ 0, ಇತರೆ 2.

ಉತ್ತರ ವಿಭಾಗದಲ್ಲಿ 101 Loud Speaker ಅರ್ಜಿ ಸಲ್ಲಿಕೆ

ದೇವಾಲಯ 10, ಮಸೀದಿ 79, ಚರ್ಚ್ 12.
ಈಶಾನ್ಯ ವಿಭಾಗದಲ್ಲಿ 86 ಅರ್ಜಿ ಸಲ್ಲಿಕೆ.
ದೇವಾಲಯ 18, ಮಸೀದಿ 66, ಚರ್ಚ್ 2.
ಆಗ್ನೇಯ ವಿಭಾಗದಲ್ಲಿ 67 ಅರ್ಜಿ ಸಲ್ಲಿಕೆ.
ದೇವಾಲಯ 3, ಮಸೀದಿ 60, ಚರ್ಚ್ 4.
ವೈಟ್ ಫೀಲ್ಡ್ ವಿಭಾಗದಲ್ಲಿ 33 ಅರ್ಜಿ ಸಲ್ಲಿಕೆ.
ದೇವಾಲಯ 1, ಮಸೀದಿ 31, ಚರ್ಚ್ 1.
ಎಸಿಪಿ, ಬಿಬಿಎಂಪಿ ಅಧಿಕಾರಿ, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಯನ್ನೊಳಗೊಂಡ ಸಮಿತಿಗೆ ಅರ್ಜಿ ಸಲ್ಲಿಕೆಯಾಗ್ತಿದ್ದು, ಅಲ್ಲಿ ಅರ್ಜಿ ಪರಿಶೀಲಿಸಿದ ಬಳಿಕ ಅನುಮತಿ ಸಿಗಲಿದೆ.

ಇದನ್ನೂ ಓದಿ : Kuwait Supermarket : ಪ್ರವಾದಿ ಮೊಹಮ್ಮದ್​​ ವಿರುದ್ಧ ಹೇಳಿಕೆಗೆ ಹೆಚ್ಚಿದ ಆಕ್ರೋಶ : ಕುವೈತ್​ನಲ್ಲಿ ಭಾರತೀಯ ಉತ್ಪನ್ನಗಳಿಗೆ ಗೇಟ್​ಪಾಸ್​

ಇದನ್ನೂ ಓದಿ : Severe Heatwave Warning : ರಾಷ್ಟ್ರ ರಾಜಧಾನಿ ಸೇರಿದಂತೆ ಹಲವು ರಾಜ್ಯಗಳಲ್ಲಿ ತೀವ್ರ ಉಷ್ಣ ಅಲೆಯ ಎಚ್ಚರಿಕೆ

Loud Speaker Permission 700 application for Bangalore police

Comments are closed.