Healthy Weightloss Tips : ದೇಹದ ಕೊಬ್ಬನ್ನು ಕರಗಿಸಲು ಬಳಸಿ ಈ ಮ್ಯಾಜಿಕಲ್‌ ಡ್ರಿಂಕ್

ಇತ್ತೀಚಿನ ದಿನಗಳಲ್ಲಿ ದೇಹದಲ್ಲಿರುವ ಅನಗತ್ಯ ಕೊಬ್ಬನ್ನು (Healthy Weightloss Tips)ಕರಗಿಸಲು ಜನರು ಸಾಕಷ್ಟು ಕಸರತ್ತುಗಳನ್ನು ಮಾಡುತ್ತಾರೆ. ದೇಹವು ಸುಂದರವಾಗಿ ಕಾಣಿಸುವುದಕೊಸ್ಕರ ಯೋಗ, ಜೀಮ್‌, ವ್ಯಾಯಮಗಳೊಂದಿಗೆ ಶಸ್ತ್ರಚಿಕಿತ್ಸೆಯ ಮೂಲಕ ಕೊಬ್ಬನ್ನು ಕರಗಿಸಿಕೊಳ್ಳುವುದು ಒಂದು ರೀತಿಯ ಟ್ರೆಂಡ್‌ ಆಗಿರುತ್ತದೆ. ಅದರಲ್ಲೂ ಶಸ್ತ್ರಚಿಕಿತ್ಸೆಯ ಮೂಲಕ ದೇಹದ ಕೊಬ್ಬನ್ನು ಒಂದೇ ಸಮಯದಲ್ಲಿ ತೆಗೆಯುವುದರಿಂದ ಪ್ರಾಣ ಅಪಾಯ ಬರುತ್ತದೆ.

ಹೀಗಾಗಿ ದೇಹದ ತೂಕವನ್ನು ಆಯುರ್ವೇದ ಅಥವಾ ನೈಸರ್ಗಿಕವಾಗಿ ವಿಧಾನಗಳಿಂದ ಇಳಿಸುವುದು ತುಂಬಾ ಸೂಕ್ತವಾಗಿರುತ್ತದೆ. ಅಲ್ಲದೇ ದೇಹದ ತೂಕವನ್ನು ಶಸ್ತ್ರಚಿಕಿತ್ಸೆಯಲ್ಲಿ ಮಾತ್ರವಲ್ಲದೇ ಯಾವುದೇ ಅಪಾಯಗಳಿಲ್ಲದೆ ಆರೋಗ್ಯಕರವಾಗಿ ತೂಕ ಹಾಗೂ ದೇಹದ ಕೊಬ್ಬನ್ನು ಇಳಿಸಲು ಸಾಕಷ್ಟು ವಿಧಾನಗಳಿರುತ್ತದೆ. ಅದರಲ್ಲಿ ಮನೆಯಲ್ಲಿ ತಯಾರಿಸುವ ಆರೋಗ್ಯಕರ ಡ್ರಿಂಕ್‌ಗಳಿಂದ ಕೂಡ ದೇಹದ ಕೊಬ್ಬನ್ನು ಕರಗಿಸಬಹುದಾಗಿದೆ. ಹಾಗಾದರೆ ಆ ಆರೋಗ್ಯಕರ ಮ್ಯಾಜಿಕಲ್‌ ಡ್ರಿಂಕ್‌ನ್ನು ತಯಾರಿಸುವ ವಿಧಾನವನ್ನು ತಿಳಿಯೋಣ.

ಬೇಕಾಗುವ ಸಾಮಗ್ರಿ :
ಜೀರಿಗೆ
ಶುಂಠಿ
ಲಿಂಬೆಹಣ್ಣು

ತಯಾರಿಸುವ ವಿಧಾನ :
ಮೊದಲಿಗೆ ಒಂದು ಪಾತ್ರೆಗೆ ಒಂದು ಲೋಟ ನೀರನ್ನು ಹಾಕಬೇಕು. ನೀರು ಬಿಸಿಯಾದ ನಂತರ ಒಂದು ಚಮಚ ಜೀರಿಗೆ ಮತ್ತು ಒಂದು ಚಮಚ ತುರಿದಿರುವ ಹಸಿಶುಂಠಿಯನ್ನು ಹಾಕಿ ಮೂರು ನಿಮಿಷಗಳ ಕಾಲ ದೊಡ್ಡ ಉರಿಯಲ್ಲಿ ಕುದಿಸಬೇಕು. ನಂತರ ಗ್ಯಾಸ್‌ನ್ನು ಆಫ್‌ ಮಾಡಿದ ಮೇಲೆ ಅದಕ್ಕೆ ರೌಂಡ್‌ ಆಗಿ ಕಟ್‌ ಮಾಡಿ ಇಟ್ಟುಕೊಂಡ ಲಿಂಬೆಹಣ್ಣುನ್ನು ಅದಕ್ಕೆ ಹಾಕಬೇಕು. ಆಮೇಲೆ ಪಾತ್ರೆಯನ್ನು ಒಂದು ಪ್ಲೇಟ್‌ ಮೂಲಕ ಮುಚ್ಚಬೇಕು. ಬಿಸಿ ಆರಿದ ಮೇಲೆ ಲಿಂಬೆಹಣ್ಣನ್ನು ಚೆನ್ನಾಗಿ ಕಿವುಚಿಕೊಳ್ಳಬೇಕು.

ಕಿವುಚಿದ ಮಿಶ್ರಣವನ್ನು ಒಂದು ಲೋಟಕ್ಕೆ ಸೊಸಿಕೊಳ್ಳಬೇಕು. ಇದನ್ನು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ತಪ್ಪದೇ ಕುಡಿಯುವುದರಿಂದ ದೇಹದಲ್ಲಿರುವ ಬೇಡವಾದ ಕೊಬ್ಬನ್ನು ಯಾವುದೇ ಅಡ್ಡ ಪರಿಣಾಮವಿಲ್ಲದೇ ಸುಲಭವಾಗಿ ಕರಗಿಸುತ್ತದೆ. ಇದನ್ನು ಸತತವಾಗಿ 20 ದಿನಗಳವರೆಗೆ ಮಾಡಿದರೆ ಒಳ್ಳೆಯ ಫಲಿತಾಂಶವನ್ನು ಪಡೆಯಬಹುದಾಗಿದೆ. ನಮ್ಮ ದೇಹದಲ್ಲಿ ಕೊಬ್ಬನ್ನು ಕರಗಿಸುವುದಲ್ಲದೇ, ಜೀರ್ಣಕ್ರಿಯೆ ಉತ್ತಮಗೊಳಿಸುತ್ತದೆ. ಇದರ ಜೊತೆಯಲಿ ರಕ್ತವನ್ನು ಶುದ್ಧಿಕರಿಸುತ್ತದೆ.

ಇದನ್ನೂ ಓದಿ : Home Remedy for Cold Sore Throat : ಉರಿಶೀತ, ಗಂಟಲು ಕೆರೆತಕ್ಕೆ ಬಳಸಿ ಮೆಣಸಿನ ಗುಳಿಗೆ

ಇದನ್ನೂ ಓದಿ : Benefits Of Nutmeg : ಚಿಕ್ಕ ಕಾಯಿಯಾದರೂ ಅದ್ಭುತ ಪ್ರಯೋಜನವಿದೆ ಜಾಯಿಕಾಯಿಯಲ್ಲಿ…

ಇದನ್ನೂ ಓದಿ : Banana Shake Side Effects : ಮಕ್ಕಳಿಗೆ ಪ್ರತಿದಿನ ಬಾಳೆಹಣ್ಣಿನ ಮಿಲ್ಕ್‌ ಶೇಕ್‌ ಕೊಡುವ ಮೊದಲು ಇದನ್ನೊಮ್ಮೆ ಓದಿ…

ಇದನ್ನೂ ಓದಿ : Sugarcane Juice : ಮೂತ್ರಕೋಶದ ಸೋಂಕಿನಿಂದ ಬಳಲುತ್ತೀದಿರಾ ? ಹಾಗಾದರೆ ಬಳಸಿ ಕಬ್ಬಿನ ಜ್ಯೂಸ್‌

ನಮ್ಮ ದೇಹದಲ್ಲಿರುವ ಲಿವರ್‌ ಆರೋಗ್ಯವನ್ನು ಕಾಪಾಡುತ್ತದೆ. ಹಾಗೇ ನಮ್ಮ ದೇಹದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ನಮ್ಮ ದೇಹದಲ್ಲಿ ರೋಗ ನಿರೋಧಕಶಕ್ತಿಯನ್ನು ಕೂಡ ವೃದ್ಧಿಸುತ್ತದೆ. ಇದರಲಿ ಬಳಸಿರುವ ಜೀರಿಗೆ, ಶುಂಠಿ ಮತ್ತು ಲಿಂಬೆಹಣ್ಣು ನಮ್ಮ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್‌ನ್ನು ಕರಗಿಸಿ ತೂಕವನ್ನು ಸರಿದೂಗಿಸುವಲ್ಲಿ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ. ನಾವು ತಿನ್ನುವಂತಹ ಜಂಕ್‌ಪುಡ್‌ಗಳಿಂದ ಆಗುವ ಕೆಟ್ಟ ಪರಿಣಾಮವನ್ನು ಕೂಡ ಸರಿ ಮಾಡುತ್ತದೆ.

Healthy Weightloss Tips: Use this magical drink to melt body fat

Comments are closed.