Nivedita Shivarajkumar : ಶಿವರಾಜ್‌ಕುಮಾರ್‌ ಪುತ್ರಿ ನಿವೇದಿತಾಯಿಂದ 5 ವೆಬ್‌ ಸಿರೀಸ್‌ : ಅಪ್ಪನ ಬರ್ತಡೇಗೆ ಬಿಗ್‌ ಸರ್ಪ್ರೈಸ್

ಶಿವರಾಜ್‌ಕುಮಾರ್‌ ಅಭಿನಯದ 125ನೇ ಸಿನಿಮಾ “ವೇದ” ಬಿಡುಗಡೆಗೆ ಸಜ್ಜಾಗಿದೆ. ಮುಂದಿನ ವಾರದಲ್ಲಿ ಸಿನಿಮಾ ತೆರೆ ಕಾಣಲಿದ್ದು, ಅಭಿಮಾನಿಗಳಿಗೆ ಎಲ್ಲಿಲ್ಲದ ಸಂಭ್ರಮ. ಈಗಾಗಲೇ ಸಿನಿಮಾದ ಹಾಡು ಹಾಗೂ ಟೀಸರ್‌ಗಳನ್ನು ಸಿನಿಪ್ರಿಯರ ಮನಗೆದ್ದು ಕುತೂಹಲವನ್ನು ಹುಟ್ಟು (Nivedita Shivarajkumar) ಹಾಕಿದೆ. “ವೇದ” ಸಿನಿಮಾ ಇವರದೇ ನಿರ್ಮಾಣ ಸಂಸ್ಥೆಯಾದ “ಗೀತಾ ಪಿಕ್ಚರ್ಸ್‌” ಬ್ಯಾನರ್ ಅಡಿಯಲ್ಲಿ ಮೂಡಿ ಬರುತ್ತಿರುವ ಮೊದಲ ಸಿನಿಮಾವಾಗಿದೆ. ಹಾಗಾಗಿ ಈ ಸಿನಿಮಾದ ಬಗ್ಗೆ ಶಿವಣ್ಣ ಹಾಗೂ ಗೀತಾ ಶಿವರಾಜ್‌ಕುಮಾರ್‌ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.

“ವೇದ” ಸಿನಿಮಾ ಮೂಲಕ ಗೀತಾ ಶಿವರಾಜ್‌ಕುಮಾರ್‌ ನಿರ್ಮಾಪಕಿಯಾದರೆ, ಚಿಕ್ಕ ಮಗಳು ನಿವೇದಿತಾ ಕೂಡ ವೆಬ್‌ ಸಿರೀಸ್‌ ನಿರ್ಮಾಣದಲ್ಲಿ ತೊಡಗಿದ್ದಾರೆ. ಈಗಾಗಲೇ ವೆಬ್‌ ಸಿರೀಸ್‌ ನಿರ್ಮಾಣ ಮಾಡಿ ಅನುಭವವಿರುವ ನಿವೇದೀತಾ ತಂದೆಯ ಅಭಿಮಾನಿಗಳಿಗೆ ಸರ್ಪ್ರೈಸ್‌ ನೀಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. “ಗೀತಾ ಪಿಕ್ಚರ್ಸ್‌” ಕೇವಲ ಶಿವಣ್ಣ ಮಾತ್ರ ಸಿನಿಮಾ ಮಾಡವುದಲ್ಲದೇ ಹೊಸಬರಿಗೂ ಸಿನಮಾ ನಿರ್ಮಾಣ ಮಾಡುವುದಾಗಿ ತಿಳಿಸಿದ್ದಾರೆ.

ಇನ್ನೂ ನಿವೇದಿತಾ ನನ್ನ ಚಿಕ್ಕ ಮಗಳು ಶ್ರೀ ಮತ್ತು ಸಂಸ್ಥೆಯಿಂದ ವೆಬ್‌ ಸಿರೀಸ್‌ ಮಾಡುತ್ತಿದ್ದಾರೆ. ಈಗ ಮತ್ತೆ ವೆಬ್‌ ಸಿರೀಸ್‌ ಅವಕಾಶಗಳು ಬರುತ್ತಿದ್ದು, ಕನ್ನಡ ಸಿನಿರಂಗ ಈಗ ಮುಂದುವರೆದಿದ್ದು, ವೆಬ್‌ ಸಿರೀಸ್‌ಗೂ ಅವಕಾಶಗಳನ್ನು ಕೊಡುತ್ತಿದ್ದಾರೆ. ಹಾಗಾಗಿ ನನ್ನ ಮಗಳು ವೆಬ್‌ ಸಿರೀಶ್‌ ಕೇಳಿ ಈಗಾಗಲೇ ಆರೇಳು ಕಥೆಗಳನ್ನು ರೆಡಿ ಮಾಡಿ ಇಟ್ಟುಕೊಂಡಿದ್ದಾಳೆ ಎಂದು ಶಿವರಾಜ್‌ಕುಮಾರ್‌ ತನ್ನ ಚಿಕ್ಕ ಮಗಳ ಸಿನಿಮಾ ನಡೆ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ.

ಇದನ್ನೂ ಓದಿ : Shah Rukh Khan – Yash : ಬಾಲಿವುಡ್‌ ಸ್ಟಾರ್‌ ನಟನಿಂದ ಯಶ್‌ಗೆ ಶಹಬ್ಬಾಸ್‌ಗಿರಿ : ಇದಕ್ಕಿಂತ ಇನ್ನೇನು ಬೇಕು ಎಂದ ಫ್ಯಾನ್ಸ್‌

ಇದನ್ನೂ ಓದಿ : Jodern: ಕೌಟುಂಬಿಕ ಕಥಾಹಂದರವನ್ನು ಒಳಗೊಂಡ “ಜೋಡರ್ನ್‌” ಚಿತ್ರದ ಟ್ರೇಲರ್‌ ಬಿಡುಗಡೆ

ಇದನ್ನೂ ಓದಿ : Malenadu Film Festival: ಮಲೆನಾಡಿನ ಸಿನಿಹಬ್ಬಕ್ಕೆ ಜೊತೆಯಾದ ಸತ್ಯ ಪಿಕ್ಚರ್ಸ್ ಹಾಗೂ ಅನ್ಲಾಕ್ ರಾಘವ ಚಿತ್ರತಂಡ

ಸೆಂಚುರಿ ಸ್ಟಾರ್‌ ಶಿವಣ್ಣನ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಬಿಗ್‌ ಸರ್ಪ್ರೈಸ್‌ ನೀಡುವುದಕ್ಕೆ ನಿರ್ಧರಿಸಿದ್ದಾರೆ. “ಗೀತಾ ಪಿಕ್ಚರ್ಸ್‌” ಸಂಸ್ಥೆಯಿಂದ ಕಮ್ಮಿ ಅಂದ್ರೂ ಐದು ವೆಬ್‌ ಸಿರೀಸ್‌ ಹಾಗೂ ಐದು ಸ್ಮಾಲ್‌ ಬಜೆಟ್‌ ಸಿನಿಮಾಗಳನ್ನು ನೀಡುವ ಉತ್ಸಾಹದಲ್ಲಿ ಶಿವಣ್ಣ ನಿಂತಿದ್ದಾರೆ. “2023ಜನವರಿಯಲ್ಲಿ ಐದು ವೆಬ್‌ ಸಿರೀಸ್‌ ಅನೌನ್ಸ್‌ ಮಾಡುತ್ತೇವೆ. ನನ್ನ ಹುಟ್ಟುಹಬ್ಬದ ಒಳಗೆ ಐದು ವೆಬ್‌ ಸಿರೀಸ್‌ ಹಾಗೂ ಐದು ಸ್ಮಾಲ್‌ ಬಜೆಟ್‌ ಕೊಡಬೇಕು ಅನ್ನೋ ಆಸೆಯಿದೆ” ಎಂದು ಶಿವಣ್ಣ ಹೇಳಿದ್ದಾರೆ. ಕಾಲ ಬದಲಾದಂತೆ ನಾವು ಬದಲಾಗಬೇಕು ಎಂದು ತಮ್ಮ ತಂದೆ ನಟಿಸಿದ “ಬಹದ್ದೂರ್‌ ಗಂಡು” ಸಿನಿಮಾವನ್ನು ನೆನಪಿಸಿಕೊಂಡಿದ್ದು, ನಾವು ಕಾಲಕ್ಕೆ ತಕ್ಕಂತೆ ನಡೆಯಬೇಕು, ಹಾಗೆ ಕಾಲಕ್ಕೆ ತಕ್ಕಂತೆ ಕುಣಿಯಬೇಕು ಎಂದು ನಮ್ಮ ತಂದೆ ಹೇಳಿದ್ದಾರೆ. ಅದರಂತೆ ನಾವು ಕಾಲಕ್ಕೆ ತಕ್ಕಂತೆ ಅಪ್‌ಡೇಟ್‌ ಆಗಬೇಕು ಎಂದು ಶಿವಣ್ಣ ಹೇಳಿದ್ದಾರೆ.

Nivedita Shivarajkumar: 5 web series by Shivarajkumar’s daughter Nivedita: Big surprise for father’s birthday

Comments are closed.