Crab Sukka Recipe:ಆಹಾ ರುಚಿಯಾದ ಏಡಿ ಸುಕ್ಕಾ (Crab Sukka ) ಒಮ್ಮೆ ಟ್ರೈ ಮಾಡಿ

(Crab Sukka Recipe)ರಜೆಯ ದಿನ ಬಂತೆಂದರೆ ಮಾಂಸಹಾರಿ ಪ್ರಿಯರು ರೆಸ್ಟೊರೆಂಟ್‌ ಗೆ ಹೊಗಿ ಚಿಕನ್‌ , ಮಠನ್‌, ಕ್ರಾಬ್‌ ನಲ್ಲಿ ಮಾಡುವಂತಹ ಸುಕ್ಕಾವನ್ನು ತಿನ್ನುತ್ತಾರೆ. ಸಾಮಾನ್ಯವಾಗಿ ಚಿಕನ್‌ , ಮಠನ್‌ ಸುಕ್ಕಾ ಮಾಡುವುದು ಎಲ್ಲರಿಗೂ ತಿಳಿದಿರುತ್ತದೆ ಆದರೆ ಕ್ರಾಬ್‌ ಸುಕ್ಕಾ ಹೇಗೆ ಮಾಡುವುದು ಎಂಬ ಮಾಹಿತಿ ಇರುವುದಿಲ್ಲ. ಕ್ರಾಬ್‌ ಸುಕ್ಕಾ ಮಾಡಲು ಯಾವೆಲ್ಲಾ ಪದಾರ್ಥಗಳನ್ನು ಬಳಸುತ್ತಾರೆ, ಇದನ್ನು ಹೇಗೆ ಮಾಡುವುದು ಎಂಬ ಮಾಹಿತಿಯ ಕುರಿತು ತಿಳಿದುಕೊಳ್ಳೋಣ.

(Crab Sukka Recipe)ಬೇಕಾಗುವ ಸಾಮಾಗ್ರಿಗಳು:

  • ಕ್ರಾಬ್ (ಏಡಿ)
  • ಕೊಬ್ಬರಿ ಎಣ್ಣೆ
  • ಬ್ಯಾಡಗಿ ಮೆಣಸು
  • ಕೊತ್ತಂಬರಿ ಬೀಜ
  • ಜೀರಿಗೆ
  • ಕಾಳು ಮೆಣಸು
  • ಮೆಂತ್ಯೆ
  • ಈರುಳ್ಳಿ
  • ಬೆಳ್ಳುಳ್ಳಿ
  • ಕಾಯಿತುರಿ
  • ಅರಿಶಿಣ
  • ಟೊಮೆಟೋ
  • ಹಸಿಮೆಣಸು
  • ಮಾಡುವ ವಿಧಾನ

ಕ್ರಾಬ್‌ (ಏಡಿ) ಅನ್ನು ಕಟ್‌ ಮಾಡಿಕೊಂಡು ಕ್ಲಿನ್‌ ಮಾಡಿ ಚೆನ್ನಾಗಿ ನೀರಲ್ಲಿ ತೊಳೆದು ಪಾತ್ರೆಯಲ್ಲಿ ಹಾಕಿ ಇಟ್ಟುಕೊಳ್ಳಿ. ಬಾಣಲೆಯಲ್ಲಿ ಎರಡು ಚಮಚ ಕೊಬ್ಬರಿ ಎಣ್ಣೆ , ಇಪ್ಪತ್ತು ಬ್ಯಾಡಗಿ ಮೆಣಸು ಹಾಕಿ ಹುರಿದು ತಟ್ಟೆಯಲ್ಲಿ ಹಾಕಿ ಇಟ್ಟುಕೊಳ್ಳಬೇಕು. ಅದೇ ಬಾಣಲೆಯಲ್ಲಿ ಐದು ಚಮಚ ಕೊತ್ತಂಬರಿ ಬೀಜ, ಒಂದು ಚಮಚ ಜೀರಿಗೆ, ಅರ್ಧ ಚಮಚ ಕಾಳು ಮೆಣಸು, ಕಾಲು ಚಮಚ ಮೆಂತ್ಯೆ ಹುರಿದು ತಟ್ಟೆಗೆ ಹಾಕಬೇಕು. ನಂತರ ಬಾಣಲೆಗೆ ಹೆಚ್ಚಿಕೊಂಡ ಒಂದು ಈರುಳ್ಳಿ, ಎಂಟು ಎಸಳು ಬೆಳ್ಳುಳ್ಳಿ, ಸ್ವಲ್ಪ ಕರಿಬೇವು ಹಾಕಿ ಹುರಿದು ತಟ್ಟೆಗೆ ಹಾಕಿಕೊಳ್ಳಬೇಕು. ಅನಂತರ ಅರ್ಧಕಪ್‌ ಕಾಯಿತುರಿ ಮತ್ತು ಅರಿಶಿಣ ಹಾಕಿ ಹುರಿದುಕೊಳ್ಳಬೇಕು. ಹುರಿದುಕೊಂಡ ಪದಾರ್ಥವನ್ನು ಮಿಕ್ಸಿ ಜಾರಿಯಲ್ಲಿ ಹಾಕಿ ಸ್ವಲ್ಪ ಹುಳಿ ಬೇರೆಸಿಕೊಂಡು ರುಬ್ಬಿಕೊಂಡು ಮಸಾಲೆ ತಯಾರಿಸಿಕೊಳ್ಳಬೇಕು. ಕಾಯಿತುರಿಯನ್ನು ಮಿಕ್ಸಿ ಜಾರಿಗೆ ಹಾಕಿ ತರಿತರಿಯಾಗಿ ರುಬ್ಬಿಕೊಂಡು ಬೌಲ್‌ ಗೆ ಹಾಕಿ ಬದಿಯಲ್ಲಿ ಇಡಬೇಕು.

ಇದನ್ನೂ ಓದಿ:Cup Cake Recipe: ಓವನ್, ಮೊಟ್ಟೆ ಬಳಸದೆ ತಯಾರಿಸಿ ಕಪ್ ಕೇಕ್

ಇದನ್ನೂ ಓದಿ:Beetroot Cutlet: ವಿಶಿಷ್ಟ ಬಣ್ಣದ, ಗರಿಗರಿಯಾದ ಬೀಟ್‌ರೂಟ್‌ ಕಟ್ಲೆಟ್‌ ಸವಿದಿದ್ದೀರಾ; ಇದು ತೂಕ ಇಳಿಕೆಗೂ ಉತ್ತಮವಾಗಿದೆ

ಬಾಣಲೆಗೆ ಒಂದು ಚಮಚ ಕೊಬ್ಬರಿ ಎಣ್ಣೆ ,ಕರಿಬೇವು, ಹೆಚ್ಚಿಕೊಂಡ ಒಂದು ಈರುಳ್ಳಿ, ಹೆಚ್ಚಿಕೊಂಡ ಟೊಮೆಟೋ ,ಎರಡು ಹಸಿಮೆಣಸು , ಒಂದು ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್‌ ಹಾಕಿ ಕ್ಲಿನ್‌ ಮಾಡಿ ಕಟ್‌ ಮಾಡಿಟ್ಟುಕೊಂಡ ಕ್ರಾಬ್ (ಏಡಿ) ಹಾಕಿ ಹತ್ತು ನಿಮಿಷ ಬೇಯಿಸಿಕೊಳ್ಳಬೇಕು. ನಂತರ ರುಚಿಗೆ ತಕ್ಕಷ್ಟು ಉಪ್ಪು, ಕಾಲುಲೋಟ ನೀರು ಹಾಕಿ ಮುಚ್ಚಳ ಮುಚ್ಚಿ ಹತ್ತು ನಿಮಿಷ ಬೆಯಿಸಬೇಕು. ಅನಂತರ ಇದಕ್ಕೆ ರುಬ್ಬಿಕೊಂಡ ಮಸಾಲೆಯನ್ನು ಹಾಕಿ ಮಿಶ್ರಣ ಮಾಡಿ ಐದು ನಿಮಿಷ ಬೆಯಿಸಿಕೊಂಡು ಕಾಯಿತುರಿಯನ್ನು ಹಾಕಿ ಸೌಟನ್ನು ಆಡಿಸಬೇಕು. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಯಾದ ಕ್ರಾಬ್‌ ಸುಕ್ಕ ಸವಿಯಲು ರೆಡಿ.

Crab Sukka Recipe eat the delicious Crab Sukkah

Comments are closed.