ಕೊರೋನಾ ಎಫೆಕ್ಟ್….! ಬರ್ತಡೆ ಸೆಲೆಬ್ರೇಶನ್ ನಿಂದ ದೂರ ಉಳಿದ‌ ದರ್ಶನ್…!!

ಕೊರೋನಾ ಎಲ್ಲರ ಬದುಕನ್ನು ಡಿಸ್ಟರ್ಬ್ ಮಾಡಿದೆ.‌ಇದಕ್ಕೆ ಸಿನಿಮಾ ನಟರು ಹೊರತಲ್ಲ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಕೊರೋನಾ ಎಫೆಕ್ಟ್ ಗೆ ಹೆದರಿದ್ದು ಹುಟ್ಟುಹಬ್ಬ ಆಚರಿಸದಿರಲು ನಿರ್ಧರಿಸಿದ್ದು, ದುಡ್ಡು ಖರ್ಚು ಮಾಡಿಕೊಂಡು ಬರಬೇಡಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

ಸೋಷಿಯಲ್ ಮೀಡಿಯಾ ಲೈವ್ ನಲ್ಲಿ ಈ ಬಗ್ಗೆ ಮಾತನಾಡಿರುವ ದರ್ಶನ್, ನಾನು ಈ  ವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದೇನೆ. ಹೀಗಾಗಿ ನೀವು ದೂರ ದೂರದ ಊರುಗಳಿಂದ ದುಡ್ಡು ಖರ್ಚು ಮಾಡಿಕೊಂಡು ನನ್ನನ್ನು ನೋಡಲು ಬರಬೇಡಿ ಎಂದಿದ್ದಾರೆ.

ಕೊರೋನಾದಿಂದ ಎಲ್ಲರೂ ಸಂಕಷ್ಟದಲ್ಲಿದ್ದಾರೆ. ಕೆಲಸ ಇಲ್ಲದೇ, ಜನರು ಊಟಕ್ಕೂ ತತ್ವಾರದ ಸ್ಥಿತಿಯಲ್ಲಿ ಇದ್ದಾರೆ. ಈ ಸಂದರ್ಭದಲ್ಲಿ ನೀವೆಲ್ಲ ದುಡ್ಡು ಖರ್ಚು ಮಾಡಿಕೊಂಡು ನನ್ನನ್ನು ನೋಡಲು ಬರಬೇಡಿ.

ನಿಮಗೆಲ್ಲ ಕಷ್ಟವಾದರೇ  ನನಗೂ ನೋವಾಗುತ್ತದೆ. ಹೀಗಾಗಿ ನೀವೆಲ್ಲ ಇದ್ದಲ್ಲಿಂದಲೇ ನನಗೆ ಶುಭ ಹಾರೈಸಿ ಎಂದು ಮನವಿ ಮಾಡಿದ್ದಾರೆ.

ಇದು ಸಂಕಷ್ಟದ ವರ್ಷ ಹೀಗಾಗಿ  ಅನಗತ್ಯ ದುಂದುವೆಚ್ಚ ಬೇಡ‌. ಎಲ್ಲರೂ ಆರೋಗ್ಯ ಕಾಪಾಡಿಕೊಳ್ಳೋಣ 2022 ರಲ್ಲಿ ಎಲ್ಲರೂ ಸೇರಿ ಹುಟ್ಟುಹಬ್ಬ ಆಚರಿಸೋಣ ಎಂದು ಮನವಿ ಮಾಡಿದ್ದಾರೆ.

ಮೊನ್ನೆ ರಾಕಿಂಗ್ ಸ್ಟಾರ್ ಯಶ್ ಕೂಡ ಸರಳವಾಗಿ ಕುಟುಂಬದ ಜೊತೆ ಹುಟ್ಟುಹಬ್ಬ ಆಚರಿಸಿದ್ದು, ಎಲ್ಲ ಸ್ಟಾರ್ ಗಳು ಕೊರೋನಾದಿಂದ ಅದ್ದೂರಿ ಸೆಲಿಬ್ರೇಶನ್ ನಿಂದ ದೂರ ಉಳಿದಿದ್ದಾರೆ

Comments are closed.