Hansika Motwani-Sohael Khaturiya Wedding : ಹನ್ಸಿಕಾ ಸೊಹೈಲ್‌ ಕಥುರಿಯಾ ವಿವಾಹ ಸಂಭ್ರಮ : ದಂಪತಿಗಳ ಮೊದಲ ಫೋಟೋ ವೈರಲ್

ಬಿಂದಾಸ್‌ ಬೆಡಗಿ ಹನ್ಸಿಕಾ ಮೋಟ್ವಾನಿ (Hansika Motwani-Sohael Khaturiya Wedding) ಅವರ ಬಹುದಿನದ ಗೆಳೆಯ ಉದ್ಯಮಿ ಸೊಹೈಲ್‌ ಕಥುರಿಯಾ ಭಾನುವಾರ (ಡಿಸೆಂಬರ್ 4) ಜೈಪುರದ ಮುಂಡೋಟಾ ಕೋಟೆ ಮತ್ತು ಅರಮನೆಯಲ್ಲಿ ಅದ್ದೂರಿ ವಿವಾಹ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಜೋಡಿಯ ವಿವಾಹದ ಹಲವಾರು ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇವರ ವಿವಾಹ ಸಮಾರಂಭದಲ್ಲಿ ತಮ್ಮ ಕುಟುಂಬ ಸದಸ್ಯರು ಮತ್ತು ಆಪ್ತರು ಸೇರಿದಂತೆ ಅನೇಕರು ಭಾಗವಹಿಸಿದರು. ಇವರಿಬ್ಬರ ಮದುವೆ ಸಮಾರಂಭದ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗಿದೆ.

ಹನ್ಸಿಕಾ ವಧುವಿನ ಉಡುಗೆಯಲ್ಲಿ ಅಮೋಘವಾಗಿ ಕಾಣುತ್ತಿದ್ದು, ಉತ್ಸಾಹದಿಂದ ಕಾಣಿಸುತ್ತಿದ್ದರು. ನಟಿ ಹನ್ಸಿಕಾ ಸುಂದರವಾದ ಸಾಂಪ್ರದಾಯಿಕ ಕೆಂಪು ಲೆಹೆಂಗಾವನ್ನು ಧರಿಸಿದ್ದರು. ಹಾಗೆ ಅದಕ್ಕೆ ಹೊಂದಿಕೆ ಆಗುವಂತೆ ದಪ್ಪ ಆಭರಣಗಳು ಮತ್ತು ಕೆಂಪು ಬಳೆಗಳು ಧರಿಸಿದ್ದರು. ಸೊಹೈಲ್‌ ಸಂಪೂರ್ಣ ಕ್ರಿಮ್‌ ಹಾಗೂ ಚಿನ್ನದ ಬಣ್ಣದ ಡಿಸೈನ್‌ವುಳ್ಳ ಶೆರ್ವಾನಿ ಲುಕ್‌ನಲ್ಲಿ ಸುಂದರವಾಗಿ ಕಾಣುತ್ತಿದ್ದರು. ನಟಿ ಹನ್ಸಿಕಾ ತನ್ನ ವಧುವಾಗಿ ತನ್ನ ಸಂಗಡಿರೊಂದಿಗೆ ಪೋಟೋಗೆ ಪೋಸ್ ನೀಡಿದ್ದಾರೆ. ನಂತರ ಹನ್ಸಿಕಾ ಗುಲಾಬಿಗಳ ಕೆಳಗೆ ಹಜಾರದಲ್ಲಿ ನಡೆದರು. ಈ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸುವ ಮೂಲಕ ಸಮಾರಂಭದಲ್ಲಿ ದಂಪತಿಗಳು ಹಾರ ಬದಲಾಯಿಸಿಕೊಂಡರು.

ಡಿಸೆಂಬರ್ 2 ರಂದು ಜೈಪುರದಲ್ಲಿ ಹಂಸಿಕಾ ಮತ್ತು ಸೋಹೇಲ್ ವಿವಾಹದ ಪೂರ್ವಭಾವಿ ಕಾರ್ಯಕ್ರಮಗಳು ಪ್ರಾರಂಭವಾದವು. ಡಿಸೆಂಬರ್ 4 ರಂದು, ದಂಪತಿಗಳು ಹಳದಿ ಶಾಸ್ತ್ರವನ್ನು ಆಚರಿಸಿದರು. ಇವರ ಮದುವೆಯ ಪೂರ್ವ ಕಾರ್ಯಕ್ರಮದ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ಟ್ರೆಂಡಿಂಗ್ ಆಗಿದ್ದವು. ಹಳದಿ ಶಾಸ್ತ್ರದಲ್ಲಿ ವಧು-ವರರು ಸುಂದರವಾದ ಬಿಳಿ ಹೂವಿನ ಬಟ್ಟೆಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು.

(Hansika Motwani-Sohael Khaturiya Wedding) ಇವರಿಬ್ಬರು ಮೆಹೆಂದಿ ಸಮಾರಂಭದಲ್ಲಿ ಹನ್ಸಿಕಾ ಕಿತ್ತಳೆ ಮತ್ತು ಹಳದಿ ಟೈ-ಡೈ ಶರಾರಾದಲ್ಲಿ ಅದ್ಭುತವಾಗಿ ಕಾಣುತ್ತಿದ್ದರು. ನಟಿ ಹನ್ಸಿಕಾ ತನ್ನ ಕುಟುಂಬ ಸದಸ್ಯರು ಮತ್ತು ಆಪ್ತರೊಂದಿಗೆ ಖುಷಿ ಖುಷಿಯಾಗಿ ಕಡಿಮೆ ಪೋನಿಟೇಲ್, ಸಿಲ್ವರ್ ಕಿವಿಯೋಲೆಗಳು ಹಾಗೂ ಈ ಉಡುಗೆಗೆ ಸರಿ ಹೊಂದುವ ಲಘು ಮೇಕಪ್‌ನೊಂದಿಗೆ ಕಾಣಿಸಿಕೊಂಡಿದ್ದರು. ಅವರ ಕೈಯು ಮದುವೆಯ ಗೋರಂಟಿಯೊಂದಿಗೆ ಕಾಣಿಸಿಕೊಂಡಿದ್ದು, ಸುಂದರವಾದ ಮಾದರಿಯು ಮೆಚ್ಚಬೇಕಾದ ಸಂಗತಿಯಾಗಿದೆ.

ಇದನ್ನೂ ಓದಿ : Kiccha Sudeep in Kateel: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಕಿಚ್ಚ ಸುದೀಪ್ ದಂಪತಿ

ಇದನ್ನೂ ಓದಿ : Shivamma movie: ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳನ್ನು ಬಾಚಿಕೊಂಡ ರಿಷಬ್ ಶೆಟ್ಟಿ ನಿರ್ಮಾಣದ ‘ಶಿವಮ್ಮ’ ಚಿತ್ರ..

ಇದನ್ನೂ ಓದಿ : Bad Manners Release Date : ಸೂರಿ‌ – ಅಭಿಷೇಕ್‌ ಕಾಂಬಿನೇಶನ್‌ “ಬ್ಯಾಡ್‌ ಮ್ಯಾನರ್ಸ್‌” ಶೂಟಿಂಗ್‌ ಕಂಪ್ಲೀಟ್‌ : ರಿಲೀಸ್‌ ಡೇಟ್‌ ಫಿಕ್ಸ್

ಸಿನಿರಂಗದಲ್ಲಿ ಹನ್ಸಿಕಾ ಮೋಟ್ವಾನಿ ಶಕ ಲಕಾ ಬೂಮ್ ಬೂಮ್, ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ ಮತ್ತು ಸೋನ್ ಪರಿಯಂತಹ ಟಿವಿ ಧಾರಾವಾಹಿಗಳಲ್ಲಿ ಬಾಲ ಕಲಾವಿದೆಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ಹೃತಿಕ್ ರೋಷನ್ ಅವರ ಹಿಟ್ ಸಿನಿಮಾ ಕೋಯಿ ಮಿಲ್ ಗಯಾದಲ್ಲಿ ಸಹ ನಟಿಸಿದ್ದಾರೆ. ಬಾಲಿವುಡ್‌ನಲ್ಲಿ ಅವರು ಆಪ್ ಕಾ ಸುರೂರ್, ಮನಿ ಹೈ ತೋ ಹನಿ ಹೈ ಮುಂತಾದ ಸಿನಿಮಾಗಳನ್ನು ಮಾಡಿದ್ದಾರೆ. ನಟಿ 50 ನೇ ಸಿನಿಮಾ ಈ ವರ್ಷದ ಆರಂಭದಲ್ಲಿ ಬಿಡುಗಡೆಯಾಗಿದೆ. ಮುಂದೆ ಅವರು ತಮಿಳು ಸಿನಿಮಾದಲ್ಲಿ ರೌಡಿ ಬೇಬಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Comments are closed.