Praveen Nettaru : ಪ್ರವೀಣ್​ ನೆಟ್ಟಾರು ಕೊಲೆ ಪ್ರಕರಣದಲ್ಲಿ ಮುಂದುವರಿದ ಎನ್​ಐಎ ದಾಳಿ : ಎಸ್​ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ​ ಪರಂಗಿಪೇಟೆ ನಿವಾಸದಲ್ಲಿ ತಲಾಶ್​

ಮಂಗಳೂರು : Praveen Nettaru NIA raids SDPI : ಹಿಂದೂ ಕಾರ್ಯಕರ್ತ ಹಾಗೂ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್​ ನೆಟ್ಟಾರು ಹತ್ಯೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ನಿನ್ನೆಯಷ್ಟೇ ಎನ್​ಐಎ ಅಧಿಕಾರಿಗಳು ಪುತ್ತೂರು ಹಾಗೂ ಸುಳ್ಯ ತಾಲೂಕುಗಳಲ್ಲಿ ದಾಳಿಯನ್ನು ನಡೆಸಿದ್ದರು. ಇದೀಗ ಬಂಟ್ವಾಳ ತಾಲೂಕಿನಲ್ಲಿಯೂ ಎನ್​ಐಎ ತನ್ನ ದಾಳಿಯನ್ನು ಮುಂದುವರಿಸಿದೆ. ಬಿಜೆಪಿ ಮುಖಂಡನ ಹತ್ಯೆ ಪ್ರಕರಣದಲ್ಲಿ ಎಸ್​​ಡಿಪಿಐ ಪಾತ್ರ ಇರುವುದು ಮೇಲ್ನೋಟಕ್ಕೆ ಅತ್ಯಂತ ಬಲವಾಗಿ ಗೋಚರಿಸುತ್ತಿರುವ ಹಿನ್ನೆಲೆಯಲ್ಲಿ ಎನ್​ಐಎ ಅಧಿಕಾರಿಗಳ ತಂಡ ಎಸ್​ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಜ್​ ಪರಂಗಿಪೇಟೆ ಮನೆ ಮೇಲೆ ದಾಳಿ ನಡೆಸಿದೆ.

ಇಂದು ಬೆಳಗ್ಗೆಯೇ ರಿಯಾಜ್​ ಪರಂಗಿಪೇಟೆಗೆ ಶಾಕ್​ ನೀಡಿದ ಎನ್​ಐಎ ಅಧಿಕಾರಿಗಳು ರಿಯಾಜ್​ ಮನೆಗೆ ತೆರಳಿ ಮೊಬೈಲ್​ ವಶಕ್ಕೆ ಪಡೆದಿದ್ದು ಮನೆಯ ಇಂಚಿಂಚನ್ನೂ ಪರಿಶೀಲಿಸುತ್ತಿದ್ದಾರೆ. ರಿಯಾಜ್​​ ನಿವಾಸದ ಮೇಲೆ ಎನ್​ಐಎ ಅಧಿಕಾರಿಗಳಿಂದ ದಾಳಿ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಕೆರಳಿದ ಎಸ್​ಡಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು ಗೋ ಬ್ಯಾಕ್​ ಎನ್​ಐಎ ಎಂದು ಘೋಷಣೆ ಕೂಗುತ್ತಿದ್ದಾರೆ.

ಪ್ರವೀಣ್​ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಎನ್​​ಐಎ ಅಧಿಕಾರಿಗಳು ನಿನ್ನೆ ಸುಳ್ಯ ಹಾಗೂ ಪುತ್ತೂರು ತಾಲೂಕುಗಳಲ್ಲಿ ಒಟ್ಟು 32 ಕಡೆಗಳಲ್ಲಿ ದಾಳಿ ನಡೆಸಿದ್ದರು. ಇಂದು ಬಿ.ಸಿ ರೋಡ್​ನಲ್ಲಿರುವ ರಿಯಾಜ್​ ಪರಂಗಿಪೇಟೆ ನಿವಾಸದಲ್ಲಿ ಬಂಟ್ವಾಳ ಪೊಲೀಸರ ಭದ್ರತೆಯೊಂದಿಗೆ ಎನ್​ಐಎ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದ ಸಮೀಪದ ನೆಟ್ಟಾರೆ ಎಂಬ ಕುಗ್ರಾಮದವರಾದ ಪ್ರವೀಣ್​​ ಬೆಳ್ಳಾರೆ ಗ್ರಾಮದಲ್ಲಿ ಚಿಕನ್​ ಅಂಗಡಿ ನಡೆಸುತ್ತಿದ್ದರು. ಜುಲೈ 26ರ ರಾತ್ರಿ ಸಮಯದಲ್ಲಿ ತಮ್ಮ ಕೋಳಿ ಅಂಗಡಿಯನ್ನು ಬಂದ್​ ಮಾಡಿ ಮನೆಗೆ ವಾಪಸ್ಸಾಗಲು ಮುಂದಾಗುತ್ತಿದ್ದ ಸಂದರ್ಭದಲ್ಲಿ ಬೈಕ್​ನಲ್ಲಿ ಬಂದಿದ್ದ ದುಷ್ಕರ್ಮಿಗಳು ಪ್ರವೀಣ್​ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಪ್ರವೀಣ್​​ರನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಲಾಗಿತ್ತಾದರೂ ಸಹ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದರು. ಈ ಪ್ರಕರಣ ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿದ್ದು ಮಾತ್ರವಲ್ಲದೇ ಬಿಜೆಪಿ ಭದ್ರಕೋಟೆಯಾದ ಕರಾವಳಿ ಭಾಗದಲ್ಲಿಯೇ ಜನರು ಕೇಸರಿ ಪಾಳಯದ ವಿರುದ್ಧ ಸಿಡಿದೇಳುವಂತೆ ಮಾಡಿತ್ತು.

ಇದನ್ನು ಓದಿ : Angry Afghanistan Fans: ಪಾಕ್ ವಿರುದ್ಧ ಪಂದ್ಯ ಸೋತ ಸಿಟ್ಟಿಗೆ ಶಾರ್ಜಾ ಕ್ರೀಡಾಂಗಣವನ್ನೇ ಚಿಂದಿ ಉಡಾಯಿಸಿದ ಆಫ್ಘನ್ ಕ್ರಿಕೆಟ್ ಫ್ಯಾನ್ಸ್

ಇದನ್ನೂ ಓದಿ : BBMP’s work in rain damage : ರಾಜ್ಯ ರಾಜಧಾನಿಯಲ್ಲಿ ವರುಣನ ಅವಾಂತರ : ನೆರೆ ಸಂತ್ರಸ್ತರ ಕರೆಗಿಲ್ಲ ಬಿಬಿಎಂಪಿ ಸ್ಪಂದನೆ

Praveen Nettaru murder case NIA raids SDPI national secretary Riyaz Farangipete house

Comments are closed.