Oscars Awards 2023 : ಆಸ್ಕರ್‌ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಕ್ಕೆ ನಿರೂಪಕರು ಯಾರಾರು ಇದ್ದಾರೆ ಗೊತ್ತಾ ?

ಜಗತ್ತಿನಾದ್ಯಂತ ಸಿನಿಕ್ಷೇತ್ರಕ್ಕೆ ಸಂಬಂಧಿಸಿದಂತೆ ಅತಿದೊಡ್ಡ ಹಾಗೂ ಪ್ರತಿಷ್ಠಿತ ಪ್ರಶಸ್ತಿ ಎಂದರೆ ಆಸ್ಕರ್‌ (Oscars Awards 2023) ಆಗಿರುತ್ತದೆ. ಇನ್ನು ಈ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಕ್ಕೆ ದಿನಗಣನೆ ಪ್ರಾರಂಭವಾಗಿದ್ದು, ಹಿಂದಿನ ವರ್ಷದ ಸಿನಿಮಾಗಳು ಹಾಗೂ ಅದರಲ್ಲಿ ಕೆಲಸ ಮಾಡಿರುವ ಉತ್ತಮ ಕೆಲಸವನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತದೆ. ಈ ಸಲ ನಡೆಯುವ ಆಸ್ಕರ್‌ ಆವಾರ್ಡ್‌ ಕಾರ್ಯಕ್ರಮವು, 95ನೇ ಅಕಾಡೆಮಿ ಅವಾರ್ಡ್ಸ್ ಆಗಿರುತ್ತದೆ. ಈ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ಲಾಸ್ ಏಂಜೆಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆಯುತ್ತದೆ. ಇನ್ನು ಈ ಕಾರ್ಯಕ್ರಮಕ್ಕೆ ನಿರೂಪಣೆ ಯಾರು ಮಾಡಲಿದ್ದಾರೆ ಎನ್ನುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದ್ದು, ಆಸ್ಕರ್‌ ಪ್ರಶಸ್ತಿಯ 16 ನಿರೂಪಕರ ಪಟ್ಟಿ ಕೂಡ ಹೊರಬಿದ್ದಿದೆ.

ಇದೇ ಬರುವ ಮಾರ್ಚ್ 12ರಂದು ಆಸ್ಕರ್‌ ಪ್ರಶಸ್ತಿ ಆವಾರ್ಡ್‌ ನಡೆಯಲಿದ್ದು, ಆ ದಿನದಂದು ಕಾರ್ಯಕ್ರಮವನ್ನು ಯಾರು ನಿರೂಪಣೆ ಮಾಡಲಿದ್ದಾರೆ ಎನ್ನುವುದನ್ನು ಅಕಾಡೆಮಿ ತಿಳಿದ್ದಾರೆ. ಈ ದೊಡ್ಡ ಕಾರ್ಯಕ್ರಮವನ್ನು ಸಾಮಾನ್ಯವಾಗಿ ಒಬ್ಬರು ಅಥವಾ ಇಬ್ಬರು ನಿರೂಪಣೆ ಮಾಡುವುದಿಲ್ಲ. ಹೀಗಾಗಿ ಆಸ್ಕರ್‌ ಅಕಾಡೆಮಿ ಅವಾರ್ಡ್ಸ್ ಪಂಕ್ಷನ್‌ನ್ನು ಬರೊಬ್ಬರಿ 16 ಕಲಾವಿದರು ನಿರೂಪಕರಾಗಿ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.

ಸದ್ಯ ಆಸ್ಕರ್‌ ಅಕಾಡೆಮಿ 16 ಕಲಾವಿದರಲ್ಲಿ ಯಾರು ಯಾರು ನಿರೂಪಣೆ ಮಾಡಲಿದ್ದಾರೆ ಎನ್ನುವುದನ್ನು ತಿಳಿಸಿದ್ದು, ಈ ಪಟ್ಟಿಯಲ್ಲಿ ಬಾಲಿವುಡ್ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಹೆಸರೂ ಕೂಡ ಸೇರಿಕೊಂಡಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನಟಿ ದೀಪಿಕಾ ಪಡುಕೋಣೆ ಆಸ್ಕರ್ ವೇದಿಕೆಯಲ್ಲಿ ತಾನು ನಿರೂಪಣೆ ಮಾಡಲಿರುವುದರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಂತಸವನ್ನು ಹಂಚಿಕೊಂಡಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ದೀಪಿಕಾ ಪಡುಕೋಣೆ ಜತೆಗೆ ರಿಜ್ ಅಹ್ಮದ್, ಎಮಿಲಿ ಬ್ಲಂಟ್, ಗ್ಲೆನ್ ಕ್ಲೋಸ್, ಜೆನ್ನಿಫರ್ ಕೊನ್ನೆಲ್ಲಿ, ಏರಿಯಾನಾ ಡಿಬೋಸ್, ಸ್ಯಾಮುವೆಲ್ ಎಲ್ ಜ್ಯಾಕ್‌ಸನ್, ಡ್ವೇನ್ ಜಾನ್‌ಸನ್, ಮೈಕೆಲ್ ಬಿ ಜಾರ್ಡನ್, ಟ್ರಾಯ್ ಕಾಟ್‌ಸರ್, ಜೋನಾಥನ್ ಮೇಜರ್ಸ್, ಮೆಲಿಸ್ಸಾ ಮೆಕ್‌ಕಾರ್ತಿ, ಜೇನೆಲ್ಲ್ ಮೋನೆ, ಕ್ವೆಸ್ಟ್‌ಲವ್, ಜೋ ಸಲ್ಡಾನಾ ಹಾಗೂ ಡೊನ್ನಿ ಎನ್ ಈ ಬಾರಿಯ ಆಸ್ಕರ್ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ.

ಇದನ್ನೂ ಓದಿ : ನಟ ಶಾರೂಖ್ ಖಾನ್ ಮನೆಗೆ ಅಕ್ರಮ ಪ್ರವೇಶ : ಗುಜರಾತ್ ಮೂಲದ ಇಬ್ಬರ ಬಂಧನ

ಇದನ್ನೂ ಓದಿ : ನಟಿ ಸುಶ್ಮಿತಾ ಸೇನ್‌ಗೆ ಹೃದಯಾಘಾತ ! ಇನ್‌ಸ್ಟಾಗ್ರಾಮ್‌ನಲ್ಲಿ ಫೋಸ್ಟ್‌

ಇದನ್ನೂ ಓದಿ : ನಟ ದರ್ಶನ್‌, ಪುನೀತ್‌ ರಾಜ್‌ಕುಮಾರ್‌ ನಡುವೆ ಫ್ಯಾನ್ಸ್‌ ವಾರ್‌ : ಸಿಸಿಟಿವಿ ವಿಡಿಯೋ ಆಯ್ತು ವೈರಲ್‌

ಆಸ್ಕರ್ ಪ್ರಶಸ್ತಿಯನ್ನು ನೀಡಿದ ಮೊದಲ ಭಾರತೀಯ ಯಾರು?
ಅರಿವಿಲ್ಲದವರಿಗೆ, ಪರ್ಸಿಸ್ ಖಂಬಟ್ಟಾ ಅಕಾಡೆಮಿ ಪ್ರಶಸ್ತಿಗಳಲ್ಲಿ ಪ್ರಸ್ತುತಪಡಿಸಿದ ಮೊದಲ ಭಾರತೀಯ ವ್ಯಕ್ತಿಯಾಗುವ ಮೂಲಕ ಇತಿಹಾಸವನ್ನು ನಿರ್ಮಿಸಿದರು. ಅವರು 1980 ರಲ್ಲಿ ಪ್ರತಿಷ್ಠಿತ ಪ್ರಶಸ್ತಿ ಸಮಾರಂಭದಲ್ಲಿ ವೇದಿಕೆಯಲ್ಲಿ ಕಾಣಿಸಿಕೊಂಡರು. ಪರ್ಸಿಸ್ ನಂತರ, ಪ್ರಿಯಾಂಕಾ ಚೋಪ್ರಾ ಅವರು 2016 ರಲ್ಲಿ 88 ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಗೌರವವನ್ನು ಪಡೆದರು. ಅವರು ಸ್ಟೀವ್ ಕ್ಯಾರೆಲ್, ಜೇರೆಡ್ ಲೆಟೊ, ಜೂಲಿಯಾನ್ನೆ ಮೂರ್, ಒಲಿವಿಯಾ ಮುನ್, ಮಾರ್ಗೋಟ್ ರಾಬಿ, ಜೇಸನ್ ಸೆಗೆಲ್, ಆಂಡಿ ಸೆರ್ಕಿಸ್, ಕೆರ್ರಿ ಅವರೊಂದಿಗೆ ಸಮಾರಂಭದಲ್ಲಿ ನಿರೂಪಕರಾಗಿದ್ದರು. ವಾಷಿಂಗ್ಟನ್ ಮತ್ತು ರೀಸ್ ವಿದರ್ಸ್ಪೂನ್.

Oscars Awards 2023: Do you know who will host the main event of the Oscars?

Comments are closed.