International Women’s Day 2023 : ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ 2023; ಮಹಿಳೆಯರೇ‌, ನಿಮ್ಮ ಹೃದಯ ಆರೋಗ್ಯ ಕಾಪಾಡಿಕೊಳ್ಳಿ

ದಿನವಿಡೀ ಯಾವುದಾದರೊಂದು ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರು (Women) ತಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸುವುದು ಸ್ವಲ್ಪ ಕಡಿಮೆಯೇ. ಕಛೇರಿ ಹಾಗೂ ಮನೆಕೆಲಸಗಳನ್ನು ಸರಿದೂಗಿಸಿಕೊಂಡು ಹೋಗುವ ಸೂಪರ್‌ವುಮೆನ್‌ ಎಂದು ಕರೆಯಿಸಿಕೊಳ್ಳುವ ಮಹಿಳೆಯರೂ ಆರೋಗ್ಯವನ್ನು ಕಡೆಗಣಿಸುತ್ತಾರೆ. ಇತ್ತೀಚೆಗೆ ಭಾರತ ಸೇರಿದಂತೆ ವಿಶ್ವದಾದ್ಯಂತ ಮಹಿಳೆಯರಲ್ಲಿ ಹೃದಯಾಘಾತ ಮತ್ತು ಹೃದಯ ಸಂಬಂಧಿತ ಖಾಯಿಲೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಹೃದಯ ಖಾಯಿಲೆಗಳು ಪ್ರತಿ ವರ್ಷ 6 ಪಟ್ಟು ಹೆಚ್ಚಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಅಧಿಕ ರಕ್ತದೊತ್ತಡಕ್ಕೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆಯದೇ ಇರುವುದಾಗಿದೆ. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ (International Women’s Day 2023) ಸಂದರ್ಭದಲ್ಲಿ ಮಹಿಳೆಯರು ತಮ್ಮ ಹೃದಯದ ಆರೋಗ್ಯದ ಬಗ್ಗೆ ಕಾಳಜಿವಹಿಸುವುದು ಅತ್ಯಗತ್ಯವಾಗಿದೆ.

ವಯಸ್ಸಾದಂತೆ ಮಹಿಳೆಯರ ದೇಹದಲ್ಲಿ ಅನೇಕ ಬಗೆಯ ಬದಲಾವಣೆಗಳಾಗುತ್ತವೆ. ಅದು ಮೆನೋಪಾಸ್‌, PCOS, ಮಧುಮೇಹ, ಮತ್ತು ಪ್ರತಿಕೂಲ ಪರಿಸ್ಥತಿಯಲ್ಲಾಗುವ ಪ್ರಸವ ಇವು ಹೃದಯಾಘಾತವಾಗುವುದನ್ನು ಹೆಚ್ಚಿಸುತ್ತದೆ. ಅಧಿಕ ಕೊಲೆಸ್ಟ್ರಾಲ್‌, ಧೂಮಪಾನ, ಮಧುಮೇಹ, ಬೊಜ್ಜು, ಅನಾರೋಗ್ಯಕರ ಆಹಾರ, ವ್ಯಾಯಾಮ ಮಾಡದಿರುವುದು, ಒತ್ತಡ, ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳಂತಹ ಮಹಿಳೆಯರ ಜೀವನಶೈಲಿಯ ಆಯ್ಕೆಗಳು ಹೃದಯದ ಮೇಲೆ ಪರಿಣಾಮ ಬೀರಬಹುದು. ಮಹಿಳೆಯರು ತಮ್ಮ ಹೃದಯದ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು. ಹೇಗೆಂದರೆ ಇಲ್ಲಿ ಹೇಳಿರುವ ಕೆಲವು ಜೀವನಶೈಲಿಯ ಮಾರ್ಪಾಡುಗಳನ್ನು ಅಳವಡಿಸಿಕೊಳ್ಳುವುದರಿಂದ ಹೃದಯದ ಆರೋಗ್ಯ ಕಾಪಾಡಿಕೊಳ್ಳಬಹುದು.

  • ಪ್ರತಿದಿನ ವ್ಯಾಯಾಮ ಮಾಡಿ :
    ವ್ಯಾಯಾಮವು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳು ನಿಮಗೆ ಸಹಾಯ ಮಾಡುತ್ತದೆ. ಇದು ರಕ್ತದ ಹರಿವನ್ನು ಸುಧಾರಿಸುತ್ತದೆ. ಹೃದ್ರೋಗ ಹೆಚ್ಚಿಸುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ. ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ವಾರಕ್ಕೆ ಕನಿಷ್ಠ 150 ನಿಮಿಷಗಳ ಕಾಲ ಏರೋಬಿಕ್ ಅಥವಾ ಮಧ್ಯಮ ತೀವ್ರತೆಯ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಶಿಫಾರಸು ಮಾಡುತ್ತದೆ.

ಇದನ್ನೂ ಓದಿ : Belly Fat : ಈ ವ್ಯಾಯಾಮಗಳನ್ನು ಮಾಡಿ, ಹೊಟ್ಟೆಯ ಭಾಗದ ಕೊಬ್ಬನ್ನು ಕರಗಿಸಿ

  • ಒತ್ತಡ ಕಡಿಮೆ ಮಾಡಿಕೊಳ್ಳಿ:
    ಒತ್ತಡವು ನೇರವಾಗಿ ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ಯೋಗ, ಧ್ಯಾನ ಮತ್ತು ವಿಶ್ರಾಂತಿ ಒತ್ತಡ ಕಡಿಮೆ ಮಾಡಿಕೊಳ್ಳಲು ಉತ್ತಮ ಅಭ್ಯಾಸಗಳಾಗಿವೆ.
  • ಸಂತುಲಿತ ಆಹಾರ ಸೇವಿಸಿ:
    ಫೈಬರ್ ಅಂಶ ಇರುವ ಆಹಾರ, ತಾಜಾ ಉತ್ಪನ್ನಗಳು, ಧಾನ್ಯ ಮತ್ತು ಸಿರಿಧಾನ್ಯಗಳು ಸಮೃದ್ಧವಾಗಿರುವ ಆಹಾರವನ್ನು ಸೇವಿಸುವ ಮೂಲಕ ಮತ್ತು ಸ್ಯಾಚುರೇಟೆಡ್ ಮತ್ತು ಕಡಿಮೆ ಕೊಬ್ಬು ಇರುವ ಆಹಾರಗಳ ಮೂಲಕ ಹೃದ್ರೋಗದ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡಿಕೊಳ್ಳಬಹುದು.
  • ದೀರ್ಘಕಾಲದ ಖಾಯಿಲೆಗಳಿಗೆ ಚಿಕಿತ್ಸೆ ಪಡೆದುಕೊಳ್ಳಿ:
    ಮಧುಮೇಹ, ಅಧಿಕ ರಕ್ತದೊತ್ತಡ ಅಥವಾ ಅಧಿಕ ಕೊಲೆಸ್ಟ್ರಾಲ್‌ ನಂತಹ ದೀರ್ಘಕಾಲದ ಖಾಯಿಲೆಗಳು ಮಹಿಳೆಯರಲ್ಲಿ ಹೃದ್ರೋಗವು ಹೆಚ್ಚು ಪರಿಣಾಮ ಬೀರುವಂತೆ ಮಾಡುತ್ತದೆ. ಈ ಕಾಯಿಲೆಗಳ ನಿರ್ವಹಣೆಗೆ ಔಷಧಿ, ಆಹಾರದ ಬದಲಾವಣೆಗಳು ಮತ್ತು ನಿಯಮಿತ ತಪಾಸಣೆ ಅಗತ್ಯವಿದೆ.
  • ಮಧ್ಯಪಾನದಿಂದ ದೂರವಿರಿ:
    ಲಿವರ್‌ ಸಂಬಂಧಿ ಖಾಯಿಲೆಗಳು, ಅಧಿಕ ರಕ್ತದೊತ್ತಡ, ಮತ್ತು ಹಲವಾರು ಮಾರಣಾಂತಿಕ ಅಪಾಯಗಳಂತಹ ಅನೇಕ ಆರೋಗ್ಯ ಸಮಸ್ಯೆಗಳು ಆಲ್ಕೊಹಾಲ್ ಸೇವನೆಯಿಂದ ಬರಬಹುದು. ಆರೋಗ್ಯವಂತರಾಗಿರಲು ಮಧ್ಯಪಾನದಿಂದ ದೂರವಿರಬೇಕು.
  • ಧೂಮಪಾನ ಬಿಟ್ಟುಬಿಡಿ:
    ಧೂಮಪಾನವು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ಧೂಮಪಾನವನ್ನು ತ್ಯಜಿಸುವುದರಿಂದ ಮಹಿಳೆಯ ಸಾಮಾನ್ಯ ಆರೋಗ್ಯ ಸುಧಾರಿಸುತ್ತದೆ ಮತ್ತು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ :150 Minutes Workout in a Week : ನಿಮಗೆ ಪ್ರತಿದಿನ ವರ್ಕ್‌ಔಟ್‌ ಮಾಡ್ಲಿಕ್ಕೆ ಆಗ್ತಾ ಇಲ್ವಾ? ಹಾಗಾದ್ರೆ ಇಷ್ಟು ಮಾಡಿ ಸಾಕು ಅಂತ ಹೇಳ್ತಾ ಇದೆ ಅಧ್ಯಯನ

ಇದನ್ನೂ ಓದಿ : Protein Diet : ನಿಮಗಿದು ಗೊತ್ತಾ; ದೇಸಿ ಡಯಟ್‌ನಲ್ಲಿ ಯಾವ ರೀತಿ ಪ್ರೋಟೀನ್‌ ಆಹಾರಗಳನ್ನು ಸೇರಿಸಿಕೊಳ್ಳಬೇಕು ಎಂದು…

(International Women’s Day 2023. Make some changes in your lifestyle and avoid heart attack)

Comments are closed.