Pathaan Controversy : ಪಠಾಣ್‌ ಸಿನಿಮಾದ ಕೆಲವು ದೃಶ್ಯ, ಹಾಡಿನಲ್ಲಿ ಬದಲಾವಣೆ ಮಾಡಲು ಸಲಹೆ ನೀಡಿದ ಸೆನ್ಸಾರ್‌ ಮಂಡಳಿ

ನಟ ಶಾರುಖ್‌ ಖಾನ್‌ ಅಭಿನಯದ “ಪಠಾಣ್‌” ಸಿನಿಮಾದ ಬೇಷರಂಗ ಸಾಂಗ್‌ ಬಿಡುಗಡೆಯಾದ ಸ್ವಲ್ಪ ಸಮಯದಲ್ಲೇ ಸಾಕಷ್ಟು ವಿವಾದವನ್ನು (Pathaan Controversy) ಹುಟ್ಟು ಹಾಕಿದೆ. ಈಗ ಸಿಬಿಎಫ್‌ಸಿ (ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್) ಅಧ್ಯಕ್ಷ ಪ್ರಸೂನ್ ಜೋಶಿ ಗುರುವಾರ, ಬೇಷ್‌ರಂ ರಂಗ ಹಾಡಿನಲ್ಲಿ ಕೆಲವು ಬದಲಾವಣೆಗಳನ್ನು ಮಾಡುವಂತೆ ಮಂಡಳಿಯು ಪಠಾಣ್ ಸಿನಿತಂಡಕ್ಕೆ ಸಲಹೆ ನೀಡಿದೆ ಎಂದು ಹೇಳಿದರು.

ಸಿನಿಮಾದ ಬೇಷರಂ ರಂಗ್ ಹಾಡಿನಲ್ಲಿ ದೀಪಿಕಾ ಪಡುಕೋಣೆ ಅವರ ಬಿಕಿನಿ ಬಣ್ಣವನ್ನು ಹಲವಾರು ಫ್ರಿಂಜ್ ಗುಂಪುಗಳು ಮತ್ತು ರಾಜಕಾರಣಿಗಳು ಆಕ್ಷೇಪಿಸಿದ ನಂತರ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಿದ್ದಾರೆ.ಹಾಡುಗಳನ್ನು ಒಳಗೊಂಡಂತೆ ಸಿನಿಮಾದಲ್ಲಿ ಬದಲಾವಣೆಗಳನ್ನು ಅಳವಡಿಸಲು ಮತ್ತು ಥಿಯೇಟರಿಕಲ್‌ ಬಟಿಡುಗಡೆಗೆ ಮೊದಲು ಪರಿಷ್ಕೃತ ಆವೃತ್ತಿಯನ್ನು ಸಲ್ಲಿಸಲು ಸಮಿತಿಯು ತಯಾರಕರಿಗೆ ಮಾರ್ಗದರ್ಶನ ನೀಡಿದೆ. ಸೃಜನಾತ್ಮಕ ಅಭಿವ್ಯಕ್ತಿ ಮತ್ತು ಪ್ರೇಕ್ಷಕರ ಸಂವೇದನೆಯ ನಡುವೆ ಸರಿಯಾದ ಸಮತೋಲನವನ್ನು ಇರಿಸಲು ಸಿಬಿಎಫ್‌ಸಿ ಯಾವಾಗಲೂ ಬದ್ಧವಾಗಿದೆ ಎಂದು ಜೋಶಿ ಹೇಳಿದರು.

ಇದನ್ನೂ ಓದಿ : Kangana Ranaut: ತನ್ನ ಪ್ರೇಮಕಥೆಯಲ್ಲಿ ‘ಪ್ರೀತಿ’ಯೇ ಇರಲಿಲ್ಲ ಅನ್ನೋದನ್ನು ಯಾವ ಹೆಣ್ಣು ಕೂಡಾ ಸಹಿಸಲ್ಲ; ನಟಿ ಕಂಗನಾ ಹೀಗಂದಿದ್ಯಾಕೆ..?

ಇದನ್ನೂ ಓದಿ : Vallabhaneni Janardhan: ತೆಲುಗು ಚಿತ್ರರಂಗದ ಹಿರಿಯ ಕಲಾವಿದ ವಲ್ಲಭನೇನಿ ಜನಾರ್ಧನ್‌ ಇನ್ನಿಲ್ಲ

ಇದನ್ನೂ ಓದಿ : Shree Balaji Photo Studio Movie : ಸ್ಯಾಂಡಲ್‌ವುಡ್‌ ನಲ್ಲಿ ಸದ್ದು ಮಾಡುತ್ತಿದೆ “ಶ್ರೀ ಬಾಲಾಜಿ ಸ್ಟುಡಿಯೋ” ಅನ್ನೋ ಪೋಟೋಗ್ರಾಫರ್‌ ಕಥೆಯ ಸಿನಿಮಾ

ಇದನ್ನೂ ಓದಿ : Actor Siddharth: ಏರ್ ಪೋರ್ಟ್ ನಲ್ಲಿ ನಟ ಸಿದ್ದಾರ್ಥ್ ಹೆತ್ತವರು ಪಟ್ಟ ಪಾಡೇನು..?; ಹಿಂದಿ ಹೇರಿಕೆ ಬಗ್ಗೆ ಗುಡುಗಿದ ತಮಿಳು ನಟ

ಪಠಾನ್‌ ಸಿನಿಮಾದಲ್ಲಿ ಶಾರುಖ್ ಆಕ್ಷನ್-ಥ್ರಿಲ್ಲರ್ ಪಾತ್ರದಲ್ಲಿ ಕೊಲ್ಲಲು ಪರವಾನಗಿ ಹೊಂದಿರುವ ಬಂದೂಕು ಹಿಡಿದ ಗೂಢಚಾರನಾಗಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ದೇಶದ ದೊಡ್ಡ ಸೂಪರ್‌ಸ್ಟಾರ್‌ಗಳಾದ ಸಲ್ಮಾನ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಇದ್ದಾರೆ. ಈ ಸಿನಿಮಾವನ್ನು ಸಿದ್ಧಾರ್ಥ್‌ ಆನಂದ ನಿರ್ದೇಶಿಸಿದ್ದಾರೆ. ಪಠಾಣ್‌ ಸಿನಿಮಾವು ಜನವರಿ 25, 2023 ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

Pathaan Controversy: Censor board suggested to change some scene, song of Pathaan movie

Comments are closed.