Random corona test: ರಾಜ್ಯದಲ್ಲಿ ಕೊರೊನಾ ಭೀತಿ: ಯಾದೃಚ್ಛಿಕ ಪರೀಕ್ಷೆ ಪ್ರಮಾಣ ಹೆಚ್ಚಿಸುವಂತೆ ತಜ್ಞರ ಮನವಿ

ಬೆಂಗಳೂರು: (Random corona test) ವಿದೇಶಗಳಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ದೇಶದಲ್ಲೂ ಕೂಡ ದಿನೇ ದಿನೇ ವಿದೇಶಿ ಪ್ರಯಾಣಿಕರಿಂದ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಪ್ರತಿದಿನ ವಿದೇಶಿ ಪ್ರಯಾಣಿಕರಲ್ಲಿ ಕೋವಿಡ್‌ ಸೋಂಕು ಇರುವುದು ದೃಢಪಟ್ಟಿದ್ದು, ಯಾದೃಚ್ಛಿಕ ಪರೀಕ್ಷೆಯ ಪ್ರಮಾಣವನ್ನು ಹೆಚ್ಚಿಸುವಂತೆ ತಜ್ಞರು ಸರಕಾರಕ್ಕೆ ಮನವಿ ಮಾಡಿದ್ದಾರೆ.

ದಿನೇ ದಿನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ವಿದೇಶಿ ಪ್ರಯಾಣಿಕರಲ್ಲಿ ಪಾಸಿಟಿವ್‌ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕೊರೊನಾ ಆತಂಕ ಕೂಡ ಹೆಚ್ಚಾಗುತ್ತಿದೆ. ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ವಿದೇಶದಿಂದ ಬರುವ ಪ್ರತಿಯೊಬ್ಬ ಪ್ರಯಾಣಿಕರ ಮೇಲೂ ಅಧಿಕಾರಿಗಳು ಕಣ್ಣಿರಿಸಿದ್ದು, ಕೊರೊನಾ ನಿಯಂತ್ರಣಕ್ಕೆ ತೀವ್ರ ನಿಗಾ ವಹಿಸಲಾಗಿದೆ. ವಿದೇಶದಿಂದ ಬರುವ ಶೇಕಡಾ ಎರಡರಷ್ಟು ಪ್ರಯಾಣಿಕರಿಗೆ ಯಾದೃಚ್ಛಿಕ ಪರೀಕ್ಷೆ(Random corona test)ಯನ್ನು ನಡೆಸಲಾಗುತ್ತಿದೆ. ಕೊರೊನಾ ನಿಯಂತ್ರಣಕ್ಕೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡರೂ ಕೂಡ ಪ್ರತಿದಿನ ವಿದೇಶದಿಂದ ಬರುವ ಪ್ರಯಾಣಿಕರ ಸಂಖ್ಯೆ ಜಾಸ್ತಿಯಾಗುತ್ತಿದ್ದು, ಇದರ ಜೊತೆಗೆ ಕೊರೊನಾ ಸೋಂಕು ಕೂಡ ಜಾಸ್ತಿಯಾಗುವ ಆತಂಕ ಹೆಚ್ಚಾಗುತ್ತಿದೆ.

ಈ ಹಿನ್ನಲೆಯಲ್ಲಿ ಈಗಿರುವ ಶೇಕಡಾ ಎರಡರಷ್ಟು ಪ್ರಯಾಣಿಕರ ಯಾದೃಚ್ಛಿಕ ಪರೀಕ್ಷೆಯ ಪ್ರಮಾಣವನ್ನು ಹೆಚ್ಚಿಸಲು ತಜ್ಞರು ಸರಕಾರಕ್ಕೆ ಮನವಿ ಮಾಡಿದ್ದಾರೆ. ಶೇಕಡಾ ಎರಡರಷ್ಟಿರುವ ಯಾದೃಚ್ಛಿಕ ಪರೀಕ್ಷೆಯ ಪ್ರಮಾಣವನ್ನು ಶೇಕಡಾ ಹತ್ತಕ್ಕೆ ಏರಿಸಲು ಮನವಿ ಮಾಡಲಾಗಿದೆ. ಈ ನಿಟ್ಟಿನಲ್ಲಾದರೂ ಕೊರೊನಾ ನಿಯಂತ್ರಣಕ್ಕೆ ತರಬಹುದು ಎಂಬ ಆಲೋಚನೆಯ ಮೇರೆಗೆ ತಜ್ಞರು ಸರಕಾರಕ್ಕೆ ಮನವಿ ಇಟ್ಟಿದ್ದಾರೆ.ಅಲ್ಲದೇ ವಿದೇಶದಿಂದ ಬರುವ ಪ್ರತಿಯೊಬ್ಬ ಪ್ರಯಾಣಿಕರು ಯಾದೃಚ್ಛಿಕ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಇದನ್ನೂ ಓದಿ : Corona tough rules: ಕೊರೊನಾ ಆತಂಕ: ಕೆಂಪೇಗೌಡ ಏರ್‌ ಪೋರ್ಟ್‌ ನಲ್ಲಿ ತೀವ್ರ ತಪಾಸಣೆ

ಇದನ್ನೂ ಓದಿ : Restriction for surya rashmi: ಕೊರೊನಾ ಆತಂಕದ ಹಿನ್ನಲೆ: ಸೂರ್ಯರಶ್ಮಿ ಗೋಚರಕ್ಕೆ ಭಕ್ತರಿಗೆ ನಿರ್ಬಂಧ

ಇದನ್ನೂ ಓದಿ : Udupi mask compulsory: ಉಡುಪಿಯ ಚಿತ್ರಮಂದಿರ, ಮಾಲ್‌ ಹೋಟೆಲ್‌ ಗಳಲ್ಲಿ ಮಾಸ್ಕ್‌ ಕಡ್ಡಾಯ

ಇದನ್ನೂ ಓದಿ : Negetive RT-PCR test: ವಿದೇಶಿ ಪ್ರಯಾಣಿಕರಿಗೆ ಋಣಾತ್ಮಕ ಆರ್‌ಟಿ-ಪಿಸಿಆರ್ ಪರೀಕ್ಷೆ ಕಡ್ಡಾಯ

Experts have requested the government to increase the rate of random testing as Covid infection is confirmed among foreign travelers every day.

Comments are closed.