Pathan Movie : ಒಂದೇ ಸಿನಿಮಾ ಎಂಟು ದೇಶದಲ್ಲಿ ಚಿತ್ರೀಕರಿಸಿದ ಶಾರುಖ್‌ : ಟೀಸರ್‌ ಶ್ರೀಘ್ರದಲ್ಲೇ

ಬಾಲಿವುಡ್‌ನ ಖ್ಯಾತ ನಟ ಶಾರುಖ್‌ ಖಾನ್‌ (Khan Pathan Movie ) ಸಿನಿಮಾದಿಂದ ದೂರ ಉಳಿದು ಸುಮಾರು ನಾಲ್ಕು ವರ್ಷಕ್ಕೂ ಹೆಚ್ಚಾಗಿದೆ. ಶಾರುಖ್‌ ಖಾನ್‌ ಹಿಟ್‌ ಸಿನಿಮಾ ನೀಡದೇ ಒಂಬತ್ತು ವರ್ಷ ಕಳೆದಿದೆ. ಆದರೂ ಅಭಿಮಾನಿಗಳಲ್ಲಿ ಶಾರುಖ್‌ ಬಗ್ಗೆ ಅಭಿಮಾನ ಇನ್ನೂ ಕಡಿಮೆ ಆಗಿಲ್ಲ.

ಸಿನಿರಂಗದಲ್ಲಿ ಸಾಕಷ್ಟು ಗ್ಯಾಪ್‌ ತೆಗೆದುಕೊಂಡ ಶಾರುಖ್‌ ಖಾನ್‌ ಈಗ ಭರ್ಜರಿ ಆಕ್ಷನ್‌ ಸಿನಿಮಾವೊಂದರ ಮೂಲಕ ಕಮ್‌ ಬ್ಯಾಕ್‌ ಮಾಡುತ್ತಿದ್ದಾರೆ. ಆ ಸಿನಿಮಾವನ್ನು ಬಾಲಿವುಡ್‌ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಯಶ್‌ರಾಜ್‌ ಫಿಲಮ್ಸ್‌ ಸಂಸ್ಥೆಯಡಿ ಮೂಡಿ ಬರಲಿದೆ. ಶಾರುಖ್‌ ಖಾನ್‌ ಅಭಿನಯದ “ಪಠಾಣ್‌” ಸಿನಿಮಾ ಶೀಘ್ರವೇ ಬಿಡುಗಡೆಯಾಗಲಿದೆ. ಇದೊಂದು ಅದ್ದೂರಿ ಆಕ್ಷನ್‌ ಸಿನಿಮಾವಾಗಿದ್ದು, ಈ ಸಿನಿಮಾದ ಚಿತ್ರೀಕರಣವನ್ನು ಎಂಟು ವಿವಿಧ ದೇಶಗಳಲ್ಲಿ ಮಾಡಲಾಗಿದೆ ಎಂದು ಸಿನಿಮಾ ನಿರ್ಮಾಪಕ ಆದಿತ್ಯ ಚೋಪ್ರಾ ಹೇಳಿಕೊಂಡಿದ್ದಾರೆ.

“ಪಠಾಣ್‌” ಸಿನಿಮಾ ಶಾರುಖ್‌ ಖಾನ್‌ಗೆ ಒಂದು ರೀತಿಯ ಬಿಗ ಕಮ್‌ಬ್ಯಾಕ್‌ ಸಿನಿಮಾ ಆಗಿದೆ. ಈ ಸಿನಿಮಾದಲ್ಲಿ ಶಾರುಖ್‌ ಖಾನ್‌ ಜೊತೆಯಲಿ ಜಾನ್‌ ಅಬ್ರಹಾಮ್‌, ದೀಪಿಕಾ ಪಡುಕೋಣೆ ನಟಿಸಲಿದ್ದಾರೆ. “ಪಠಾಣ್” ಸಿನಿಮಾವು ಗೂಢಚಾರಿಯ ಕಥಾಹಂದರವನ್ನು ಒಳಗೊಂಡಿದೆ. ಈ ಸಿನಿಮಾದಲ್ಲಿ ಭರ್ಜರಿ ಆಕ್ಷನ್ ದೃಶ್ಯಗಳು ನೋಡಬಹುದಾಗಿದೆ. ಸಿನಿಮಾದ ದೃಶ್ಯವನ್ನು ಬೇರೆ ಬೇರೆ ದೇಶಗಳಲ್ಲಿ ಸೆರೆ ಹಿಡಿಯಲಾಗಿದೆ. ಹಾಲಿವುಡ್‌ನ ‘ಮಿಷನ್ ಇಂಪಾಸಿಬಲ್’ ಮಾದರಿಯಲ್ಲಿಯೇ ಸಿನಿಮಾದ ಕತೆ ಹಾಗೂ ಸಾಹಸ ದೃಶ್ಯಗಳು ಈ ಸಿನಿಮಾದಲ್ಲಿ ಇದೆ.

“ಪಠಾಣ್‌” ಸಿನಿಮಾದ ಚಿತ್ರೀಕರಣವನ್ನು ಭಾರತ, ಇಟಲಿ, ಯುಎಇ, ಫ್ರಾನ್ಸ್‌, ಟರ್ಕಿ, ಸ್ಪೇನ್‌, ರಷ್ಯಾ ಹಾಗೂ ಅಫ್ಘನಿಸ್ತಾನಗಳಲ್ಲಿ ನಡೆಸಲಾಗಿದೆ. ಸಿನಿಮಾದ ಕಥೆ ಬಗ್ಗೆ ನಿರ್ಮಾಪಕ ಆದಿತ್ಯ ಚೋಪ್ರಾ ಹಂಚಿಕೊಂಡಿದ್ದು, ಇದೊಂದು ಭರ್ಜರಿ ಆಕ್ಷನ್‌ ಸಿನಿಮಾ ಆಗಿದ್ದು ಹಲವು ಮೈನವಿರೇಳಿಸುವ ದೃಶ್ಯಗಳು ಸಿನಿಮಾದಲ್ಲಿ ಇದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : Kantara Varaha Roopam Song : ವರಾಹ ರೂಪಂ ಹಾಡಿನ‌ ವಿವಾದಕ್ಕೆ ತೆರೆ : ಕೇಸ್ ಗೆದ್ದ ಕಾಂತಾರ ತಂಡ

ಇದನ್ನೂ ಓದಿ : Kantara Rishabh Shetty: ಸಿದ್ದಶ್ರೀ ಪ್ರಶಸ್ತಿ ಮುಡಿಗೇರಿಸಿಕೊಂಡ ಕಾಂತಾರ ಹೀರೋ ರಿಷಬ್‌ ಶೆಟ್ಟಿ

ಇದನ್ನೂ ಓದಿ : Ayra Yash : ಐರಾ ಯಶ್‌ಗೆ 4ನೇ ವರ್ಷದ ಹುಟ್ಟುಹಬ್ಬ : ಐರಾಗೆ ಸ್ಪೆಷಲ್ ವಿಶ್ ಮಾಡಿದ ಅಮ್ಮ ರಾಧಿಕಾ ಪಂಡಿತ್

“ಪಠಾಣ್‌” ಸಿನಿಮಾದ ಬಳಿಕ ಶಾರುಖ್‌ ಖಾನ್‌ರ “ಡಂಕಿ” ಸಿನಿಮಾಬಿಡುಗಡೆ ಆಗಲಿದೆ. ಭಾರತದ ಅತ್ಯುತ್ತಮ ನಿರ್ದೇಶಕ ರಾಜ್‌ಕುಮಾರ್‌ ಹಿರಾನಿ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. “ಡಂಕಿ” ಸಿನಿಮಾದಲ್ಲಿ ಶಾರುಖ್‌ ಖಾನ್ಗೆ ನಾಯಕಿಯಾಗಿ ತಾಪ್ಸಿ ಪನ್ನು ನಾಯಕಿಯಾಗಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ “ಡಂಕಿ” ಸಿನಿಮಾದ ಚಿತ್ರೀಕರಣ ದುಬೈನಲ್ಲಿ ಮುಗಿದಿದ್ದು, ಮುಂದಿನ ಚಿತ್ರೀಕರಣ ಶೀಘ್ರದಲ್ಲಿಯೇ ಪ್ರಾರಂಭವಾಗಲಿದೆ. ಇತ್ತೀಚೆಗಷ್ಟೇ ಬಿಡುಗಡೆಯಾದ “ಬ್ರಹ್ಮಾಸ್ತ್ರ” ಸಿನಿಮಾದಲ್ಲಿ ಶಾರುಖ್‌ ಖಾನ್‌ ಅತಿಥಿ ಪಾತ್ರದಲ್ಲಿ ನಟಿಸಿದ್ದು, ಆ ಪಾತ್ರಕ್ಕೆ ಬಹಳಷ್ಟು ಪ್ರಶಂಸೆ ವ್ಯಕ್ತವಾಗಿದೆ.

Pathan Movie : One movie was shot in eight countries

Comments are closed.