Goa In December 2022 : ಡಿಸೆಂಬರ್‌ ಟೂರ್‌ ಪ್ಲಾನ್‌ಗೆ ಗೋವಾನೇ ಬೆಸ್ಟ್‌…

ಡಿಸೆಂಬರ್‌ (December) ಅಂದರೆ ಗೋವಾ (Goa) ಕ್ಕೆ ಹೊಸ ಚೈತನ್ಯ ಬಂದಂತೆ ಅನಿಸುತ್ತದೆ. ಏಕೆಂದರೆ ಗೋವಾಕ್ಕೂ, ಕ್ರಿಸ್‌ಮಸ್‌ (Christmas) ಹಬ್ಬಕ್ಕೂ ವಿಶೇಷವಾದ ಸಂಬಂಧವಿದೆ. ಚಳಿಗಾಲದ ಹಬ್ಬಗಳನ್ನು ಆಚರಿಸಲು ಗೋವಾ ಅದ್ಭುತ ತಾಣವಾಗಿದೆ (Goa In December 2022). ಇಡೀ ರಾಜ್ಯವೇ ಸಂತೋಷ, ಸಡಗರದಲ್ಲಿ ತೇಲುತ್ತದೆ. ಬೀಚ್‌ಗಳಿಂದ ಹಿಡಿದು, ಅದ್ಧೂರಿ ಪಾರ್ಟಿಗಳವರೆಗೆ ಗೋವಾ ಎಲ್ಲವನ್ನೂ ಹೊಂದಿದೆ. ಸುಂದರ ಕ್ರಿಸ್‌ಮಸ್‌ ಪಾರ್ಟಿ ಮತ್ತು ನ್ಯೂ ಇಯರ್‌ ಪಾರ್ಟಿಗಳು ಹೊಸ ಲೋಕವನ್ನೇ ಸೃಷ್ಟಿಸುತ್ತದೆ. ಕೇಕ್‌ ಮೇಲೆ ಐಸಿಂಗ್‌ ಅಲ್ಲಿ ಪ್ರಸಿದ್ಧಿಯನ್ನು ಪಡೆದುಕೊಂಡಿದೆ.

ತಂಪಾದ ಬೀಚ್‌ ಪಾರ್ಟಿಗಳಷ್ಟೇ ಅಲ್ಲ, ರೆಸಾರ್ಟ್‌ಗಳಲ್ಲಿನ ಸಂಗೀತ, ನೃತ್ಯ, ಮನರಂಜನೆಗಳು ಸಹ ಪ್ರಸಿದ್ಧಿಯನ್ನು ಪಡೆದುಕೊಂಡಿವೆ. ಗೋವಾ ಸ್ಥಳೀಯ ಕಲೆ, ಸಂಸ್ಕೃತಿಗೆ ಹೆಸರುವಾಸಿಯಾಗಿದೆ. ಅಲ್ಲಿನ ಹಬ್ಬಗಳಲ್ಲಿ ಅವುಗಳನ್ನು ಕಾಣಬಹುದಾಗಿದೆ. ಗೋವಾಕ್ಕೆ ನೀವು ಪ್ರವಾಸ ಹೋಗಬೇಕೆಂದುಕೊಂಡಿದ್ದರೆ ಇಲ್ಲಿ ಹೇಳಿರುವ ಸ್ಥಳಗಳನ್ನೂ ನೋಡಿ.

ಓಲ್ಡ್‌ ಗೋವಾ:
ಇದು ಕ್ರಿಸ್ಮಸ್ ಸಮಯದಲ್ಲಿ ಭೇಟಿ ನೀಡಲೇ ಬೇಕಾದ ಅತ್ಯಂತ ಜನಪ್ರಿಯ ಸ್ಥಳಗಳಲ್ಲಿ ಒಂದಾಗಿದೆ. ಪ್ರಪಂಚದಾದ್ಯಂತದ ಜನರು ಹಾರಿ ಸೇಂಟ್ ಚರ್ಚ್‌ಗೆ ಭೇಟಿ ನೀಡುತ್ತಾರೆ. ಅಸ್ಸಿಸಿಯ ಫ್ರಾನ್ಸಿಸ್ ಮತ್ತು ಪೋಪ್ ಅವರ ಮರಣದ ಅವಶೇಷಗಳನ್ನು ನೋಡಲು ಸಾಲಿನಲ್ಲಿ ನಿಂತಿರುತ್ತಾರೆ. ಇದು ಆಕರ್ಷಣೆಯ ತಾಣವಾಗಿದೆ. ಓಲ್ಡ್ ಗೋವಾದಲ್ಲಿ ನೋಡಬೇಕಾದ ಇತರ ಗಮನಾರ್ಹ ಕಟ್ಟಡವೆಂದರೆ ಸೇಂಟ್ ಚಾಪೆಲ್.

ಬಾಗಾ ಬೀಚ್‌ :
ಇದು ರಾತ್ರಿ ಪಾರ್ಟಿಗೆ ಹೆಸರುವಾಸಿಯಾಗಿದೆ. ಕ್ರಿಸ್‌ಮಸ್‌ ಮತ್ತು ಹೊಸ ವರ್ಷದ ಮುನ್ನಾದಿನ ಇಲ್ಲಿ ಆಚರಣೆ ಹೆಚ್ಚಾಗಿರುತ್ತದೆ. ಮಧ್ಯರಾತ್ರಿಯಲ್ಲಿ ಸಿಡಿಸುವ ಪಟಾಕಿಗಳನ್ನು ನೋಡುವುದರ ಸಲುವಾಗಿಯೇ ಕೆಲವರು ಭೇಟಿ ನೀಡುತ್ತಾರೆ. ಇದಲ್ಲದೇ ದಕ್ಷಿಣ ಗೋವಾದಲ್ಲಿರುವ ಕ್ಯಾಲಂಗುಟ್‌, ಕೊಲ್ವಾ ಮತ್ತು ಬೊಗ್ಮಾಲೊ ಬೀಚ್‌ಗಳು ಸಹ ಪ್ರಸಿದ್ಧವಾಗಿವೆ.

ಅಂಜುನಾ ಬೀಚ್‌ :
ಉತ್ತರ ಗೋವಾದಲ್ಲಿ ಹೆಸರುವಾಸಿಯಾಗಿರುವ ಬೀಚ್‌ ಎಂದರೆ ಅಂಜುನಾ ಬೀಚ್‌. ಇದು ಕ್ರಿಸ್‌ಮಸ್‌ ಸಂದರ್ಭದಲ್ಲಿ ಭೇಟಿ ನೀಡಬಹುದಾದ ಗೋವಾದ ಪ್ರಮುಖ ಸ್ಥಳಗಳಲ್ಲಿ ಒಂದು ಎಂದು ಹೇಳಬಹುದು.

ಚರ್ಚ್‌ಗಳು :
ಹಲವಾರು ಚರ್ಚುಗಳಿಗೆ ಭೇಟಿ ನೀಡಲು ಕ್ರಿಸ್ಮಸ್ ಉತ್ತಮ ಸಮಯ. ಕ್ರಿಸ್ಮಸ್ ಸಮಯದಲ್ಲಿ, ಚರ್ಚುಗಳನ್ನು ಸುಂದರವಾಗಿ ಅಲಂಕರಿಸುತ್ತಾರೆ. ಅಲ್ಲಿನ ಆತಿಥ್ಯವೂ ವಿಶೇಷವಾಗಿರುತ್ತದೆ. ಗೋವಾದಲ್ಲಿರುವ ಎರಡು ಪ್ರಧಾನ ಚರ್ಚುಗಳೆಂದರೆ ದಿ ಬೆಸಿಲಿಕಾ ಆಫ್ ಬೊಮ್ ಜೀಸಸ್ ಮತ್ತು ಇಮ್ಯಾಕ್ಯುಲೇಟ್ ಕಾನ್ಸೆಪ್ಶನ್ ಚರ್ಚ್‌. ಇದು ಕ್ರಿಸ್‌ಮಸ್ ಆಚರಣೆಗೆ ಭೇಟಿ ನೀಡಲು ಅತ್ಯುತ್ತಮ ಸ್ಥಳಗಳಾಗಿದೆ. ಇಷ್ಟೇ ಅಲ್ಲದೇ ಇನ್ನೂ ಕೆಲವು ಚರ್ಚ್‌ಗಳಲ್ಲಿಯೂ ಕ್ರಿಸ್‌ಮಸ್ ಹಬ್ಬವನ್ನು ಸುಂದರವಾಗಿ ಆಚರಿಸುತ್ತಾರೆ. ಗೋವಾದ ಕೆಲವು ಪ್ರಸಿದ್ಧ ಚರ್ಚ್‌ಗಳೆಂದರೆ ತ್ರೀ ಕಿಂಗ್ಸ್ ಚರ್ಚ್, ಮೇ ಡಿ ಡ್ಯೂಸ್ ಚರ್ಚ್, ಅವರ್ ಲೇಡಿ ಆಫ್ ಹೆಲ್ಪ್ ಚರ್ಚ್.

ಇದನ್ನೂ ಓದಿ : Sabarimala Yatra 2022 : ಶಬರಿಮಲೆ ಭಕ್ತಾದಿಗಳಿಗಾಗಿ 2 ತಿಂಗಳು ವಿಶೇಷ ರೈಲು

ಇದನ್ನೂ ಓದಿ : Mussoorie Winterline : ಮಸ್ಸೂರಿ ವಿಂಟರ್‌ಲೈನ್‌ ಉತ್ಸವ; ಪ್ರಕೃತಿ ಸೌಂದರ್ಯದ ಸೊಬಗು

(Goa In December 2022 things to not miss while celebrating Christmas in goa)

Comments are closed.