Ricky Ponting: ‘ನನ್ನ ಜೀವನದ ಅತ್ಯಂತ ಭಯಾನಕ ಕ್ಷಣ’; ಎದೆನೋವಿನಿಂದ ಚೇತರಿಸಿಕೊಂಡ ಬಳಿಕ ರಿಕಿ ಪಾಂಟಿಂಗ್ ಅನುಭವ ಬಿಚ್ಚಿಟ್ಟಿದ್ದು ಹೀಗೆ ..

ಪರ್ತ್: Ricky Ponting: ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಅಸ್ವಸ್ಥಗೊಂಡಿದ್ದ ಆಸೀಸ್ ಕ್ರಿಕೆಟ್ ದಿಗ್ಗಜ ರಿಕಿ ಪಾಂಟಿಂಗ್ ಚೇತರಿಸಿಕೊಂಡಿದ್ದು, ಇಂದು ಹೊಸ ಹುರುಪಿನೊಂದಿಗೆ ಕಾಮೆಂಟರಿ ಬೂತ್ ಗೆ ಮರಳಿದ್ದಾರೆ.

ನಿನ್ನೆ ಆಸ್ಟ್ರೇಲಿಯಾದ ಪರ್ತ್ ಕ್ರೀಡಾಂಗಣದಲ್ಲಿ ಪಂದ್ಯದ ವೀಕ್ಷಕ ವಿವರಣೆಯಲ್ಲಿ ತೊಡಗಿದ್ದ ವೇಳೆ ರಿಕಿ ಪಾಂಟಿಂಗ್ ಅಸ್ವಸ್ಥಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಘಟನೆಯಿಂದ ಪಾಂಟಿಂಗ್ ಅಭಿಮಾನಿಗಳು ತುಂಬಾ ಆತಂಕಗೊಂಡಿದ್ದರು. ಆದರೆ ಇಂದು ಮತ್ತೆ ಕರ್ತವ್ಯಕ್ಕೆ ಮರಳುವ ಮೂಲಕ ರಿಕಿ ಪಾಂಟಿಂಗ್ ಅಭಿಮಾನಿಗಳ ಆತಂಕವನ್ನು ದೂರಮಾಡಿದ್ದಾರೆ.

ಇದನ್ನೂ ಓದಿ: Sundar Pichai: ಗೂಗಲ್‌ ಸಿಇಒ ಸುಂದರ್‌ ಪಿಚೈಗೆ ಪದ್ಮಭೂಷಣ ಗರಿ

ಇಂದು ಕಾಮೆಂಟರಿ ಬೂತ್ ಗೆ ಮರಳಿ ಮಾಧ್ಯಮಗಳ ಜೊತೆ ಮಾತನಾಡಿ, ಸದ್ಯ ತಾನು ಆರೋಗ್ಯದಿಂದಿದ್ದೇನೆ. ಹೊಸ ಹುರುಪು, ಉತ್ಸಾಹದಿಂದ ಕರ್ತವ್ಯಕ್ಕೆ ಮರಳಿದ್ದೇನೆ. ನಿನ್ನೆ ಬಹಳಷ್ಟು ಜನರನ್ನು ಆತಂಕಗೊಳ್ಳುವಂತೆ ಮಾಡಿದ್ದೆ. ಆದರೆ ನಿಜವಾಗಿ ಹೇಳಬೇಕೆಂದರೆ ನನಗೂ ಭಯವಾಗಿತ್ತು ಎಂದರು.

ವೀಕ್ಷಕ ವಿವರಣೆಯನ್ನು ನೀಡುತ್ತಿದ್ದ ವೇಳೆ ನನ್ನ ಎದೆಭಾಗದಲ್ಲಿ ಅಲ್ಪ ಪ್ರಮಾಣದ ನೋವು ಕಾಣಿಸಿಕೊಂಡಿತ್ತು. ಅದನ್ನು ನಿಯಂತ್ರಿಸಲು ಪ್ರಯತ್ನಿಸಿದೆ. ಕಾಮೆಂಟರಿ ಬೂತ್ ನಿಂದ ಹೊರಬಂದು ಸ್ವಲ್ಪ ಹೊತ್ತು ನಡೆದಾಡಿದೆ. ಆದರೆ ಅಲ್ಲೇ ತಲೆ ಸುತ್ತು ಬಂದಂತಾಗಿ ಪಕ್ಕದಲ್ಲಿದ್ದ ಕುರ್ಚಿಯನ್ನು ಹಿಡಿದುನಿಂತೆ. ಆದರೂ ನೋವು ಕಡಿಮೆ ಆಗುವ ಲಕ್ಷಣಗಳು ಕಾಣಿಸಲಿಲ್ಲ. ಹೀಗಾಗಿ ಅಲ್ಲೇ ವೀಕ್ಷಕ ವಿವರಣೆಯಲ್ಲಿ ತೊಡಗಿದ್ದ ಜಸ್ಟೀನ್ ಲ್ಯಾಂಗರ್ ಅವರಿಗೆ ವಿಷಯ ತಿಳಿಸಿದೆ. ಅವರು ನನ್ನನ್ನು ಆಸ್ಪತ್ರೆಗೆ ದಾಖಲಿಸಿದರು ಎಂದು ರಿಕಿ ಪಾಂಟಿಂಗ್ ತಮಗಾದ ಅನುಭವವನ್ನು ವಿವರಿಸಿದರು.

ಇದನ್ನೂ ಓದಿ: Employees Provident Fund : ನೌಕರರ ವೇತನ ಮಿತಿ 21000ಕ್ಕೆ ಹೆಚ್ಚಿಸಲು ಕೇಂದ್ರ ನಿರ್ಧಾರ

ಶ್ರೇಷ್ಠ ಕ್ರಿಕೆಟರ್ ಎನಿಸಿಕೊಂಡಿರುವ ರಿಕಿ ಪಾಂಟಿಂಗ್ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಆಸೀಸ್ ತಂಡದ ಪರವಾಗಿ 168 ಟೆಸ್ಟ್ ಗಳಲ್ಲಿ ಆಡಿರುವ ರಿಕಿ ಪಾಂಟಿಂಗ್ 51.85 ಸರಾಸರಿಯಲ್ಲಿ 13.378 ರನ್ ಗಳನ್ನು ಗಳಿಸಿದ್ದಾರೆ. ಇದರಲ್ಲಿ 41 ಶತಕ ಮತ್ತು 62 ಅರ್ಧಶತಕಗಳನ್ನು ಗಳಿಸಿದ್ದರು. 375 ಏಕದಿನ ಪಂದ್ಯಗಳನ್ನು ಆಡಿದ್ದ ಅವರು 30 ಶತಕಗಳು ಮತ್ತು 82 ಅರ್ಧಶತಕಗಳೊಂದಿಗೆ 42.03 ಸರಾಸರಿಯಲ್ಲಿ 13,704 ರನ್ ಗಳಿಸಿದ್ದಾರೆ. ಅದೇ ರೀತಿ 17 ಟೀ-20 ಪಂದ್ಯಗಳಲ್ಲಿ 28.64ರ ಸರಾಸರಿಯಲ್ಲಿ 401 ರನ್ ಗಳಿಸಿದ್ದು, ಅದರಲ್ಲಿ 2 ಅರ್ಧಶತಕಗಳನ್ನು ಗಳಿಸಿದ್ದರು.

Ricky Ponting: ‘The scariest moment of my life’; This is how Ricky Ponting revealed his experience after recovering from chest pain.

Comments are closed.