pavitra lokesh : ಸೋಶಿಯಲ್​ ಮೀಡಿಯಾದಲ್ಲಿ ಅವಹೇಳನಕಾರಿ ಪೋಸ್ಟ್​ ಹಾಕಿದವರ ವಿರುದ್ಧ ನಟಿ ಪವಿತ್ರಾ ಲೋಕೇಶ್​ ದೂರು

ಮೈಸೂರು : pavitra lokesh : ಖ್ಯಾತ ನಟ ಮೈಸೂರು ಲೋಕೇಶ್​ರ ಪುತ್ರಿ ಹಾಗೂ ನಟಿ ಪವಿತ್ರಾ ಲೋಕೇಶ್​ ತಮ್ಮ ಮೂರನೇ ಮದುವೆಯ ವಿಚಾರವಾಗಿ ಸೋಶಿಯಲ್​ ಮೀಡಿಯಾಗಳಲ್ಲಿ ಸಧ್ಯ ಭಾರೀ ಚರ್ಚೆಯಲ್ಲಿದ್ದಾರೆ. ತಮ್ಮ ಎರಡನೇ ಪತಿ ಸುಚೇಂದ್ರ ಕುಮಾರ್​ರಿಂದ ದೂರಾಗಿರುವ ನಟಿ ಪವಿತ್ರಾ ಲೋಕೇಶ್​ ಕೋಟ್ಯಾಧಿಪತಿ ನರೇಶ್​ರನ್ನು ವರಿಸಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಕಾಡ್ಗಿಚ್ಚಿನಂತೆ ಹರಡುತ್ತಿದೆ. ಈ ಎಲ್ಲದರ ನಡುವೆ ಇದೀಗ ತಮ್ಮ ವಿರುದ್ಧ ಸೋಶಿಯಲ್​ ಮೀಡಿಯಾದಲ್ಲಿ ನಡೆಯುತ್ತಿರುವ ಚರ್ಚೆಗಳ ವಿರುದ್ಧ ನಟಿ ಪವಿತ್ರಾ ಲೋಕೇಶ್​ ಕಾನೂನು ಸಮರಕ್ಕಿಳಿದಿದ್ದಾರೆ.


ತಮ್ಮ ಹೆಸರಿನಲ್ಲಿ ನಕಲಿ ಫೇಸ್​ಬುಕ್​ ಖಾತೆಗಳನ್ನು ತೆರೆದು ಅಶ್ಲೀಲ ಸಂದೇಶಗಳನ್ನು ಕಳಿಸಲಾಗುತ್ತಿದೆ ಎಂದು ಆರೋಪಿಸಿ ನಟಿ ಪವಿತ್ರಾ ಲೋಕೇಶ್​ ಮೈಸೂರಿನ ಸೈಬರ್​ ಕ್ರೈಂ ಠಾಣೆಯಲ್ಲಿ ದೂರನ್ನು ನೀಡಿದ್ದಾರೆ. ಈ ರೀತಿಯ ಕೃತ್ಯಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ನನ್ನ ತೇಜೋವಧೆ ನಡೆಯುತ್ತಿದೆ. ಹೀಗಾಗಿ ಇಂತವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ನಟಿ ಪವಿತ್ರಾ ಲೋಕೇಶ್​ ದೂರನ್ನು ನೀಡಿದ್ದಾರೆ. ಈ ಸಂಬಂಧ ಎಫ್​ಐಆರ್​ ದಾಖಲಿಸಿರುವ ಮೈಸೂರಿನ ಸೈಬರ್​ ಕ್ರೈಂ ಠಾಣಾ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.


ಕನ್ನಡ ಹಾಗೂ ತೆಲುಗು ಚಿತ್ರರಂಗಳಲ್ಲಿ ಪೋಷಕ ನಟಿ ಪಾತ್ರದಲ್ಲಿ ಸೈ ಎನಿಸಿರುವ ನಟಿ ಪವಿತ್ರಾ ಲೋಕೇಶ್​ ಸುಚೇಂದ್ರ ಕುಮಾರ್​ ಜೊತೆಯಲ್ಲಿ 2ನೇ ವಿವಾಹವಾಗಿದ್ದರು. ಇದು ಇಬ್ಬರಿಗೂ ಎರಡನೇ ವಿವಾಹವಾಗಿತ್ತು. ಇಬ್ಬರ ದಾಂಪತ್ಯದ ಫಲವಾಗಿ ಇಬ್ಬರು ಮಕ್ಕಳು ಕೂಡ ಇದ್ದಾರೆ. ಆದರೆ ಕಳೆದ ಕೆಲವು ವರ್ಷಗಳಿಂದ ನಟಿ ಪವಿತ್ರಾ ಲೋಕೇಶ್​ ಪತಿಯಿಂದ ದೂರಾಗಿ ವಾಸಿಸುತ್ತಿದ್ದಾರೆ ಎನ್ನಲಾಗಿದೆ. ಇತ್ತೀಚಿಗೆ ಬಂದಿರುವ ಸುದ್ದಿಯ ಪ್ರಕಾರ ನಟಿ ಪವಿತ್ರಾ ಲೋಕೇಶ್​ ಮಹೇಶ್​ ಬಾಬು ಸಹೋದರ 62 ವರ್ಷದ ನರೇಶ್​ರನ್ನು ವಿವಾಹವಾಗಿದ್ದಾರೆ ಎನ್ನಲಾಗಿತ್ತು. ಕೋಟ್ಯಾಧಿಪತಿಯಾಗಿರುವ ನರೇಶ್​​​ ಜೊತೆ ಪವಿತ್ರ ಲೋಕೇಶ್​ ವಿವಾಹವಾಗಿದೆ ಎಂಬ ಸುದ್ದಿ ಹರಿದಾಡುತ್ತಿದ್ದಂತೆಯೇ ಸೋಶಿಯಲ್​ ಮೀಡಿಯಾಗಳಲ್ಲಿ ಪವಿತ್ರ ಲೋಕೇಶ್​ ವಿರುದ್ಧ ಭಾರೀ ಮಾತುಗಳು ಕೇಳಿ ಬಂದಿದ್ದವು. ಆದರೆ ಈ ವಿಚಾರವಾಗಿ ನಟಿ ಪವಿತ್ರಾ ಲೋಕೇಶ್​ ಈವರೆಗೆ ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ.

ಇದನ್ನು ಓದಿ : Rohit Sharma’s daughter : ಕ್ಯೂಟ್ ಕ್ಯೂಟ್ ಆಗಿ ತಂದೆಯ ಹೆಲ್ತ್ ರಿಪೋರ್ಟ್ ಕೊಟ್ಟ ರೋಹಿತ್ ಶರ್ಮಾ ಮಗಳು

ಇದನ್ನೂ ಓದಿ : India Vs New Zealand : ನವೆಂಬರ್‌ನಲ್ಲಿ ನ್ಯೂಜಿಲೆಂಡ್ ಟೂರ್: ಕಿವೀಸ್ ವಿರುದ್ಧ ಟಿ20, ಏಕದಿನ ಸರಣಿ ಆಡಲಿದೆ ಟೀಮ್ ಇಂಡಿಯಾ

pavitra lokesh files complaint in mysore cyber crime police station against derogatory post about her on social media

Comments are closed.