ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ 2020 ರಲ್ಲಿ ಪಿಂಗಾರ ಸಿನಿಮಾಕ್ಕೆ ವಿಶೇಷ ಪುರಸ್ಕಾರ ದೊರೆತಿದ್ದು, ಕನ್ನಡ ಮತ್ತು ತುಳು ಭಾಷೆಯ ಹೆಮ್ಮೆಯ ಸಿನಿಮಾವೆನಿಸಿಕೊಂಡಿದೆ. ಪ್ರೀತಮ್ ಶೆಟ್ಟಿ ಆಕ್ಷನ್ ಕಟ್ ಹೇಳಿ, ಅವಿನಾಶ್ ಶೆಟ್ಟಿ ನಿರ್ಮಾಣ ಮಾಡಿರೋ ಪಿಂಗಾರ ಸಿನಿಮಾ ತುಳುನಾಡಿನ ಸಂಸ್ಕೃತಿ, ಆ ಪ್ರದೇಶದ ಸೊಗಡು ಇವೆಲ್ಲವನ್ನೂ ಗಮನಿಸಿ ಚಿತ್ರೋತ್ಸವದಲ್ಲಿ ಈ ಸಿನಿಮಾಕ್ಕೆ “NETPAC INTERNATIONAL JURY PRIZE” ವಿಶೇಷ ಗೌರವಕ್ಕೆ ಭಾಜನವಾಗಿದೆ.

ಕಿರುತೆರೆಯಲ್ಲಿ ಸಾಕಷ್ಟು ಧಾರಾವಾಹಿಗಳನ್ನು ನಿರ್ದೇಶಿಸಿರೋ ಪ್ರೀತಮ್ ಶೆಟ್ಟಿಯವರು ಈ ಸಿನಿಮಾಕ್ಕೆ ಈ ಗೌರವ ಬಂದಿರೋದಕ್ಕೆ ಸಂತಸ ವ್ಯಕ್ತಪಡಿಸಿದ್ದು, ಮತ್ತಷ್ಟು ಒಳ್ಳೆ ಪ್ರಯತ್ನಗಳಿಗೆ ಪುಷ್ಟಿಕೊಟ್ಟಿದೆ ಅನ್ನುತ್ತಾರೆ. ಚಿತ್ರಕ್ಕೆ ಕ್ಯಾಮೆರಾ ಕೈಚಳಕ ತೋರಿರೋ ಪವನ್ ಕುಮಾರ್ ಅವರ ಕೆಲಸ ಪ್ರತಿ ಪ್ರೇಮ್ ಗೋಚರಿಸುತ್ತೆ. ಕ್ಯಾಮರಾ ವರ್ಕ್ ಚಂದನವನದಲ್ಲಿ ಮತ್ತಷ್ಟು ಅವಕಾಶಗಳನ್ನು ಒದಗಿಸಿಕೊಡೊದ್ರಲ್ಲಿ ಯಾವುದೇ ಸಂಶಯವಿಲ್ಲ.

ಕರಾವಳಿಯ ಭೂತಾರಾಧನೆ ಮತ್ತು ತುಳು ಸಂಸ್ಕೃತಿಯ ಮೂಲ ಕಥೆ ಹೊಂದಿರೋ ಈ ಸಿನಿಮಾದಲ್ಲಿ, ನೀಮಾರೇ , ಶರಣ್ ಶೆಟ್ಟಿ, ಉಷಾ ಭಂಡಾರಿ, ಗುರು ಹೆಗ್ಡೆ, ಸಿಂಚನಾ ಚಂದ್ರಮೋಹನ್, ಸುನಿಲ್ ನೆಲ್ಲಿಗುಡ್ಡೆ ಮತ್ತು ಪ್ರಶಾಂತ್ ಸಿಕೆ ಹೀಗೆ ಅನೇಕ ಕಲಾವಿದರು ಅಭಿನಯಿಸಿದ್ದಾರೆ. ಅಂತರಾಷ್ಟ್ರೀಯ ಸ್ಪೆಷಲ್ ಜ್ಯೂರಿ ಅವಾರ್ಡ್ ದೊರಕಿರೋದು ಎಲ್ರಿಗೂ ಖುಷಿ ತಂದಿದೆ.