E-mail Bomb threat: ಬೆಂಗಳೂರಿನ ಖಾಸಗಿ ಶಾಲೆಯೊಂದಕ್ಕೆ‌ ಹುಸಿ ಬಾಂಬ್ ಬೆದರಿಕೆ: ಸುರಕ್ಷಿತ ಸ್ಥಳಕ್ಕೆ ವಿದ್ಯಾರ್ಥಿಗಳು ಶಿಫ್ಟ್

ಬೆಂಗಳೂರು: (E-mail Bomb threat) ಬೆಂಗಳೂರಿನ ಖಾಸಗಿ ಶಾಲೆಯೊಂದಕ್ಕೆ ಬಾಂಬ್‌ ಬೆದರಿಕೆಯ ಇ-ಮೇಲ್‌ ಬಂದಿದ್ದು, ಆತಂಕ ಗೊಂಡ ಶಾಲಾ ಮಂಡಳಿ ಕೂಡಲೇ ಮಕ್ಕಳನ್ನು ಸುರಕ್ಷಿತ ಸ್ಥಳಕ್ಕೆ ವರ್ಗಾವಣೆ ಮಾಡಲಾಗಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ರಾಜಾಜಿನಗರದ ಎನ್‌ ಪಿ ಎಸ್‌ ಶಾಲೆಗೆ ಇಂದು ಬೆಳಿಗ್ಗೆ ಬಾಂಬ್‌ ಬೆದರಿಕೆ ಬಂದಿದೆ.

ಬಾಂಬ್‌ ಬೆದರಿಕೆ(E-mail Bomb threat) ಯ ಇ-ಮೇಲ್‌ ಬಂದಿದ್ದು, ಶಾಲೆ ಆವರಣದಲ್ಲಿ ನಾಲ್ಕು ಜಿಲೆಟಿನ್‌ ಕಡ್ಡಿ ಇಟ್ಟಿರುವುದಾಗಿ ಇ-ಮೇಲ್‌ ಬಂದಿದೆ. ಇ-ಮೇಲ್‌ ಬಂದಿದ್ದ ಕೂಡಲೆ ಶಾಲೆಯ ಸಿಬ್ಬಂದಿ ಬಸವೇಶ್ವನಗರದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ, ಸ್ಥಳಕ್ಕೆ ಬಸವೇಶ್ವರನಗರ, ರಾಜಾಜಿನಗರ ಠಾಣೆ ಪೊಲೀಸರ ಜೊತೆಗೆ ಬಾಂಬ್‌ ಪತ್ತೆ ದಳ, ಹಾಗೂ ಶ್ವಾನ ದಳ ಭೇಟಿ ನೀಡಿದ್ದು, ಶಾಲೆಯಲ್ಲಿ ಪರಿಶೀಲನೆ ನಡೆಸಿದ್ದಾರೆ. ತನಿಖೆಯ ನಂತರ ಇ-ಮೇಲ್‌ ಮೂಲಕ ಬಂದಿರುವುದು ಹುಸಿ ಬೆದರಿಕೆ ಎಂದು ತಿಳಿದುಬಂದಿದ್ದು, ಈ ಸಂಬಂಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೆಂಗಳೂರಿನ ಖಾಸಗಿ ಶಾಲೆಗೆ ಬಾಂಬ್‌ ಬೆದರಿಕೆ ಬಂದಿರುವುದು ಇದು ಮೊದಲ ಬಾರಿಗೆ ಅಲ್ಲ. ಈ ಮೊದಲಿ ಡಿಕೆ ಶಿವಕುಮಾರ್‌ ಅವರ ಮಾಲಿಕತ್ವದ ಖಾಸಗಿ ಶಾಲೆಗೆ ಇ-ಮೇಲ್‌ ಮೂಲಕ ಬೆದರಿಕೆ ಬಂದಿತ್ತು. ತನಿಖೆ ನಡೆಸಿದ ಬಳಿಕ ಅದೇ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ಬೆದರಿಕೆ ಮೇಲ್‌ ಕಳುಹಿಸಿದ್ದು ಎಂಬ ಬಗ್ಗೆ ಗೊತ್ತಾಗಿದೆ. ಈಗಲೂ ಕೂಡ ಅದೇ ರೀತಿಯಾಗಿ ನಡೆದಿರಬಹುದು ಎಂದು ಅಂದಾಜಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

ಇದನ್ನೂ ಓದಿ : Pregnant women set fire: ಪತಿಯನ್ನು ಹೆದರಿಸಲು ಬೆಂಕಿ ಹಚ್ಚಿಕೊಂಡ 7 ತಿಂಗಳ ಗರ್ಭಿಣಿ: ಸತ್ತಿದ್ದು ಮಾತ್ರ ಹೊಟ್ಟೆಯೊಳಗಿದ್ದ ಮಗು

ಇನ್ನೂ ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಪೊಲೀಸ್‌ ಆಧಿಕಾರಿ, “ಬಸವೇಶ್ವರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಜಿಲೆಟಿನ್‌ ಕಡ್ಡಿ ಇಟ್ಟು ಬ್ಲಾಸ್ಟ್‌ ಮಾಡುವುದಾಗಿ ಇ-ಮೇಲ್‌ ಬಂದಿದೆ. ತಕ್ಷಣ ನಮಗೆ ಮಾಹಿತಿ ಬಂದಿದ್ದು, ಕೂಡಲೇ ಬಂದು ಇ-ಮೇಲ್‌ ಪರಿಶೀಲಿಸಿದ್ದೇವೆ. ಮಕ್ಕಳನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಿದ್ದೇವೆ. ಇದೊಂದು ಹುಸಿ ಬಾಂಬ್‌ ಬೆದರಿಕೆ” ಎಂದಿದ್ದಾರೆ.

ಇದನ್ನೂ ಓದಿ : Kundapura fraud case: ನಕಲಿ ದಾಖಲೆ ಸೃಷ್ಟಿಸಿ ಸಾಲ ಪಡೆದು ಸಹಕಾರ ಸಂಘಕ್ಕೆ ವಂಚನೆ : ದೂರು ದಾಖಲು

ಇದನ್ನೂ ಓದಿ : Mandya KSRTC Bus accident: ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಕೆ.ಎಸ್.ಆರ್.ಟಿ.ಸಿ ಬಸ್

Fake bomb threat to a private school in Bengaluru: Students shift to a safe place

Comments are closed.