ಪೊಗರು ಮೂವಿಗೆ ಸಿಕ್ತು ಪವರ್ ಫುಲ್ ವಿಶ್….! ಚಿಕ್ಕಪ್ಪನ ಚಿತ್ರಕ್ಕೆ ಜ್ಯೂನಿಯರ್ ಕ್ಯೂಟ್ ಕೊಡುಗೆ…!!

ಸರ್ಜಾ ಕುಟುಂಬದ ಆಕ್ಷ್ಯನ್ ಪ್ರಿನ್ಸ್ ಧ್ರುವ್ ಸರ್ಜಾ ಅಭಿನಯದ ಬಹುನೀರಿಕ್ಷಿತ ಚಿತ್ರ ಪೊಗರು ರಿಲೀಸ್ ಗೆ ದಿನಗಣನೆ ನಡೆದಿದೆ. ಎಲ್ಲೆಡೆ ಪೊಗರು ಹವಾ ಜೋರಾಗಿರುವಾಗ ಜ್ಯೂನಿಯರ್ ಚಿರು ನಾನೇನು ಕಡಿಮೆ ಅಂತ ಚಿಕ್ಕಪ್ಪನ ಚಿತ್ರಕ್ಕೆ ಶುಭಹಾರೈಸಿದ್ದಾನೆ.

ಧ್ರುವ್ ಸಖತ್ ನೀರಿಕ್ಷೆ ಮೂಡಿಸಿರುವ ಪೊಗರು ಸಿನಿಮಾಗೆ ಸ್ಯಾಂಡಲ್ ವುಡ್ ಕಾತರರತೆಯಿಂದ ಕಾಯ್ತಾ ಇದೆ. ಫೆ.14 ಪ್ರೇಮಿಗಳ ದಿನದಂದೇ ಚಿತ್ರದ ಆಡಿಯೋ ರಿಲೀಸ್ ಕೂಡ ನಡೆದಿದ್ದು ನೀರಿಕ್ಷೆ ದುಪ್ಪಟ್ಟಾಗಿದೆ.

ಪೊಗರು ಸಿನಿಮಾ ಕೇವಲ ಇಂಡಸ್ಟ್ರಿ ಯಲ್ಲಿ ಮಾತ್ರವಲ್ಲ ಸೋಷಿಯಲ್ ಮೀಡಿಯಾದಲ್ಲಿ ತನ್ನ ಖದರ್ ತೋರಿಸಿದೆ. ಹೀಗಾಗಿ ಎಲ್ಲೆಡೆ ಪೊಗರು ಇಮೋಜಿಗಳು ಫೇಮಸ್ ಆಗಿದೆ. ಈ ಮಧ್ಯೆ ಪ್ರೇಮಿಗಳ ದಿನಾಚರಣೆಯಂದೇ ಅಭಿಮಾನಿಗಳಿಗೆ ಮುಖದರ್ಶನ ಕೊಟ್ಟ ಜ್ಯೂನಿಯರ್ ಚಿರು ಸಿಂಬಾ ಕೂಡ ಡಿಫರಂಟಾಗಿ ಚಿಕ್ಕಪ್ಪ ನ ಸಿನಿಮಾಗೆ ಶುಭಹಾರೈಸಿದ್ದಾನೆ.

ಪೊಗರು ಇಮೋಜಿಯ ಚಸ್ಮಾ ಧರಿಸಿರುವ ಜ್ಯೂನಿಯರ್ ಚಿರು ಫೆ.19 ರಂದು ಸಿನಿಮಾ ನೋಡುವಂತೆ ಮನವಿ ಮಾಡಿದ್ದಾನೆ ಎಂದಿರುವ ಮೇಘನಾ ರಾಜ್ ಈ ವಿಡಿಯೋ ಹಂಚಿಕೊಂಡಿದ್ದಾರೆ.

ನಿನ್ನೆಯಷ್ಟೇ ಮೇಘನಾರಾಜ್ ತಮ್ಮ ಮುದ್ದುಮಗನ ಪೋಟೋ ಹಂಚಿಕೊಂಡು ಎಲ್ಲರೂ ಆಶೀರ್ವದಿಸುವಂತೆ ಕೋರಿದ್ದರು. ಈಗ ಪುಟ್ಟ ಚಿರು ಚಿಕ್ಕಪ್ಪನ ಸಿನಿಮಾಗೆ ಶುಭಹಾರೈಸಿದ ವಿಡಿಯೋ ಹಂಚಿಕೊಂಡಿದ್ದಾರೆ.

ಅಣ್ಣನೊಂದಿಗೆ ಭಾವನಾತ್ಮಕ ನಂಟು ಹೊಂದಿರೋ ಧ್ರುವ್ ಈ ವಿಡಿಯೋ ನೋಡಿ ಫುಲ್ ಖುಷಿಯಾಗಿದ್ದು ಸಿನಿಮಾ ಗೆಲುವಿಗೆ ಇದಕ್ಕಿಂತ ಹಾರೈಕೆ ಬೇಕೆ ಎಂದಿದ್ದಾರೆ. ಅಭಿಮಾನಿಗಳು ಕೂಡ ಜ್ಯೂನಿಯರ್ ಚಿರು ತುಂಟಾಟ ನೋಡಿ ಸಂಭ್ರಮಿಸುತ್ತಿದ್ದಾರೆ.

Comments are closed.