Puneet Raj Kumar : ಶಿವರಾಜ್‌ ಕುಮಾರ್ ವೇದ ಸಿನಿಮಾದಲ್ಲಿ ಪವರ್ ಸ್ಟಾರ್ ಪುನೀತ್

ಕರುನಾಡಿನ ಮನೆಮಗ, ಪವರ್ ಸ್ಟಾರ್, ರಾಜ ಕುಮಾರ ಪುನೀತ್ (‌ Puneet Raj Kumar) ಅಭಿನಯದ ಕೊನೆ ಸಿನಿಮಾ ರಿಲೀಸ್ ಗೆ ಸಿದ್ಧವಾಗಿದೆ. ಜೇಮ್ಸ್ ಜಾತ್ರೆಯ ರೂಪದಲ್ಲಿ ಮಾರ್ಚ್ 17 ರಂದು ತೆರೆಗೆ ಬರಲಿದೆ. ಆದರೆ ಇದೇ ಹೊತ್ತಲ್ಲಿ ಜೇಮ್ಸ್ ಪುನೀತ್ ನಟನೆಯ ಕೊನೆ ಸಿನಿಮಾವಲ್ಲ. ಬದಲಾಗಿ ಶಿವಣ್ಣ (Shiva Rajkumar) ಜೊತೆಗಿನ ವೇದ ( Veda Cinema )ಸಿನಿಮಾದಲ್ಲೂ ಪುನೀತ್ ನಟಿಸಲಿದ್ದಾರಂತೆ. ಇಂತಹದೊಂದು ಅಪರೂಪದ ಸಂಗತಿಯನ್ನು ಸ್ವತಃ ಶಿವಣ್ಣ ರಿವೀಲ್‌ಮಾಡಿದ್ದಾರೆ.

ಜೇಮ್ಸ್ ಸಿನಿಮಾ ರಿಲೀಸ್ ಗೆ ದಿನಗಣನೆ ನಡೆದಿದೆ. ಜೇಮ್ಸ್ ಪ್ರಚಾರಕ್ಕಾಗಿ ಅದ್ದೂರಿ ಫ್ರೀ ರಿಲೀಸ್ ಇವೆಂಟ್ ಕೂಡ ನಡೆಯಲಿದೆ. ಆದರೆ ಅಪ್ಪು ನಟನೆಯ ಜೇಮ್ಸ್ ಪುನೀತ್ ರನ್ನು ತೆರೆ ಮೇಲೆ ನೋಡುವ ಕೊನೆ ಸಿನಿಮಾ ಅನ್ನೋ ಬೇಸರದಲ್ಲಿದ್ದ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಕ್ಕಿದೆ. ಶಿವರಾಜ್ ಕುಮಾರ್ ನಟಿಸುತ್ತಿರುವ 126 ನೇ ಸಿನಿಮಾ ವೇದದಲ್ಲಿ ನಟ ಪುನೀತ್ ರಾಜ್ ಕುಮಾರ್ ಕೂಡ ನಟಿಸಲಿದ್ದಾರಂತೆ. ಈಗಾಗಲೇ ಪುನೀತ್ ರಾಜ್ ಕುಮಾರ್ ನಮ್ಮನ್ನು ಅಗಲಿ 4 ತಿಂಗಳು ಕಳೆದಿದೆ. ಹೀಗಿರುವಾಗ ಪುನೀತ್ ರಾಜ್ ಕುಮಾರ್ ಹೇಗೆ ಶಿವಣ್ಣ ಸಿನಿಮಾದಲ್ಲಿ ನಟಿಸುತ್ತಾರೆ ಎಂಬ ಕುತೂಹಲ ಅಭಿಮಾನಿಗಳನ್ನು ಕಾಡುತ್ತಿದೆ.

ವೇದ (Veda) ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ರನ್ನು ಗ್ರಾಫಿಕ್ ರೀತಿಯಲ್ಲಿ ಬಳಸಿಕೊಳ್ಳುವ ಸಾಧ್ಯತೆ ಇದೆ. ಆದರೆ ಹೇಗೆ ಪುನೀತ್ ರನ್ನು ಸಿನಿಮಾದಲ್ಲಿ ತೋರಿಸಲಾಗುತ್ತೆ ಅನ್ನೋದನ್ನು ಶಿವಣ್ಣ ಸಸ್ಪೆನ್ಸ್ ಆಗಿಯೇ ಉಳಿಸಿಕೊಂಡಿದ್ದು, ವೇದದಲ್ಲಿ ಪುನೀತ್ ಹೇಗಿರುತ್ತಾರೆ ಕಾದು ನೋಡಿ ಎಂದಿದ್ದಾರೆ. ಎ.ಹರ್ಷ ಮತ್ತು ಶಿವರಾಜ್ ಕುಮಾರ್ ಕಾಂಬಿನೇಶನ್ ನಲ್ಲಿ ಮೂಡಿ ಬರ್ತಿರೋ ಬಹುನೀರಿಕ್ಷಿತ ವೇದ ಸಿನಿಮಾದಲ್ಲಿ ಶಿವಣ್ಣ ವಿಭಿನ್ನವಾಗಿ ಕಾಣಿಸಿಕೊಳ್ಳಲಿದ್ದು, ಗೀತಾ ಶಿವರಾಜ್ ಕುಮಾರ್ ಶಿವಣ್ಣನ ಹೋಂ ಬ್ಯಾನರ್ ನಲ್ಲಿ ಈ ಸಿನಿಮಾ ನಿರ್ಮಿಸುತ್ತಿದ್ದಾರೆ.

ಪುನೀತ್ ರಾಜ್ ಕುಮಾರ್ ಬದುಕಿದ್ದಾಗ ಶಿವಣ್ಣ ಜೊತೆ ಒಂದು ಸಿನಿಮಾದಲ್ಲಾದರೂ ನಡೆಸಬೇಕೆಂಬ ಆಸೆ ಹೊಂದಿದ್ದರಂತೆ.‌ಮಾತ್ರವಲ್ಲ ಶಿವಣ್ಣನಿಗಾಗಿ ಸಿನಿಮಾ ವೊಂದನ್ನು ನಿರ್ದೇಶಿಸುವ ಕನಸು ಹೊಂದಿದ್ದರಂತೆ. ಆದರೆ ಈ ಆಸೆ‌ ಈಡೇರುವ ಮುನ್ನವೇ ಪುನೀತ್ ರಾಜ್ ಕುಮಾರ್ ಎಲ್ಲರನ್ನೂ ಅಗಲಿ ಹೋಗಿದ್ದಾರೆ. ಜೇಮ್ಸ್ ಪುನೀತ್ ಕೊನೆಯ ಸಿನಿಮಾ ದಲ್ಲೂ ಶಿವಣ್ಣ ಹಾಗೂ ರಾಘಣ್ಣ ನಟಿಸಿದ್ದು, ಜೇಮ್ಸ್ ನ ಪುನೀತ್ ಪಾತ್ರಕ್ಕೆ ಶಿವಣ್ಣ ಡಬ್ ಮಾಡುವ ಮೂಲಕ ಜೀವ ತುಂಬಿದ್ದಾರೆ.

ಇದನ್ನೂ ಓದಿ : Bhavana Menon : ಟಗರು ಬೆಡಗಿ ಭಾವನಾ ಕಣ್ಣೀರ ಕತೆ ಇದು : ಡಿಗ್ನಿಟಿಗಾಗಿ ಹೋರಾಡುತ್ತಿದ್ದೇನೆ ಎಂದ ನಟಿ

ಇದನ್ನೂ ಓದಿ : Inamdar : ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡುತ್ತಿದೆ ಇನಾಮ್ದಾರ್‌

( Power Star Puneet Raj Kumar in Shiva Rajkumar Veda Cinema)

Comments are closed.