ಟಾಲಿವುಡ್ ಪ್ರಭಾಸ್ ಬಾಲಿವುಡ್ ಸೂಪರ್ ಸ್ಟಾರ್ ಹೃತಿಕ್ ರೋಷನ್ ಕಾಂಬಿಷೇಷನ್ ನಲ್ಲಿ ಆನಂದ್‌ ಸಿನಿಮಾ

ಪ್ಯಾನ್ ಇಂಡಿಯಾ ಸಿನಿಮಾಗಳ ಅಬ್ಬರ ಶುರುವಾದ ಬಳಿಕ ದಕ್ಷಿಣ ಭಾರತ ಸಿನಿರಂಗ, ಬಾಲಿವುಡ್ ಎಂಬ ಪ್ರತ್ಯೇಕತೆ ಅಳಿಸಿ ಹೋಗಿದೆ. ಈಗೇನಿದ್ದರೂ ‘ಭಾರತೀಯ ಸಿನಿರಂಗ’ ಎನ್ನುವುದು ಮಾತ್ರ ಇದೆ. ದಕ್ಷಿಣ ಭಾರತದ ಸಿನಿಮಾಗಳಲ್ಲಿ ಬಾಲಿವುಡ್‌ನ ನಟರು, ಬಾಲಿವುಡ್ ಸಿನಿಮಾಗಳಲ್ಲಿ ದಕ್ಷಿಣದ ನಟರು ನಟಿಸುತ್ತಿರುವುದು ಇತ್ತೀಚೆಗೆ ಹೆಚ್ಚಾಗುತ್ತಿದೆ. ಸಂಜಯ್ ದತ್, ‘ಕೆಜಿಎಫ್ 2’ ನಲ್ಲಿ ವಿಲನ್ ಆಗಿ, ಆಲಿಯಾ ಭಟ್ ‘ಆರ್‌ಆರ್‌ಆರ್’ ನಲ್ಲಿ ನಾಯಕಿಯಾಗಿ, ಇಲ್ಲಿನ ರಶ್ಮಿಕಾ ಮಂದಣ್ಣ, ಸಮಂತಾ ಬಾಲಿವುಡ್ ಸಿನಿಮಾಗಳ ನಾಯಕಿಯಾಗಿ ನಟಿಸಿದ್ದಾರೆ. ಆದರೆ ಎರಡೂ ಸಿನಿರಂಗದ ದೊಡ್ಡ ಸ್ಟಾರ್‌ ನಟರು (Prabhas – Hrithik Roshan) ಒಟ್ಟಿಗೆ ಸಮಾನವಾಗಿ ತೆರೆ ಹಂಚಿಕೊಂಡಿರುವ ಸಿನಿಮಾ ಇಲ್ಲಿವರೆಗೂ ಬಂದಿರುವುದಿಲ್ಲ.

ಆದರೆ ಇದೀಗ ಅಂಥಹದ್ದೊಂದು ಸಾಹಸಕ್ಕೆ ಬಾಲಿವುಡ್‌ನ ಸಾಹಸ ಸಿನಿಮಾಗಳ ನಿರ್ದೇಶಕ ಸಿದ್ಧಾರ್ಥ್ ಆನಂದ್ ಮಾಡಲು ಮುಂದಾಗಿದ್ದಾರೆ. ದಕ್ಷಿಣದ ಸ್ಟಾರ್ ನಟ ಹಾಗೂ ಬಾಲಿವುಡ್ ಸ್ಟಾರ್ ನಟರನ್ನು ಒಟ್ಟಿಗೆ ಸೇರಿಸಿ ಸಿನಿಮಾ ಮಾಡಲು ತಯಾರಿ ನಡೆಸಿದ್ದಾರೆ. ‘ವಾರ್’, ‘ಪಠಾಣ್’, ‘ಬ್ಯಾಂಗ್ ಬ್ಯಾಂಗ್’, ‘ಬಚ್ನಾ ಏ ಹಸೀನೋ’, ‘ಅಂಜಾನಾ ಅಂಜಾನಿ’, ‘ಸಲಾಂ ನಮಸ್ತೆ’, ‘ತಾ ರಾ ರಂ ಪಂ’ ಇನ್ನಿತರೆ ಸಿನಿಮಾಗಳನ್ನು ನಿರ್ದೇಶಿಸಿರುವ ಸಿದ್ಧಾರ್ಥ್ ಆನಂದ್ ಭರ್ಜರಿ ಆಕ್ಷನ್ ಸಿನಿಮಾ ಒಂದಕ್ಕಾಗಿ ಕತೆಯೊಂದನ್ನು ತಯಾರು ಮಾಡಿಟ್ಟುಕೊಂಡಿದ್ದು ಬಾಲಿವುಡ್ ಸ್ಟಾರ್ ನಟ ಹೃತಿಕ್ ರೋಷನ್ ಹಾಗೂ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅವರನ್ನು ಒಟ್ಟಿಗೆ ತೆರೆ ಮೇಲೆ ತರಲು ಸಕಲ ರೀತಿಯಲ್ಲೂ ಸಜ್ಜಾಗಿದ್ದಾರೆ.

ವಿಶೇಷವೆಂದರೆ ಈ ಮೆಗಾ ಪ್ರಾಜೆಕ್ಟ್ ಅನ್ನು ದಕ್ಷಿಣದ ಜನಪ್ರಿಯ ಸಿನಿಮಾ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡುತ್ತಿದ್ದು, ಟಾಕ್ ಶೋ ಒಂದರಲ್ಲಿ ತಾವು ಶಾರುಖ್ ಖಾನ್‌ರ ನಿರ್ದೇಶಕರೊಟ್ಟಿಗೆ ಭರ್ಜರಿ ಆಕ್ಷನ್ ಹಿಂದಿ ಸಿನಿಮಾ ಒಂದಕ್ಕಾಗಿ ಒಪ್ಪಂದ ಮಾಡಿಕೊಂಡಿದ್ದೀವಿ ಎಂದು ಹೇಳಿದ್ದಾರೆ. ಇದೇ ಸಿನಿಮಾದಲ್ಲಿ ನಟ ಪ್ರಭಾಸ್ ಸಹ ಇರಲಿದ್ದಾರೆ ಎಂಬ ಸುದ್ದಿ ಜೋರಾಗಿಯೇ ಹರಿದಾಡುತ್ತಿದೆ. ಭಾರಿ ಬಜೆಟ್ ಆಕ್ಷನ್ ಸಿನಿಮಾಗಳನ್ನು ನಿರ್ದೇಶನ ಮಾಡುವಲ್ಲಿ ಸಿದ್ಧಾರ್ಥ್ ಯಾವಗಲೂ ಎತ್ತಿದ ಕೈ. ಈಗಾಗಲೇ ಹೃತಿಕ್ ರೋಷನ್ ನಟನೆಯ ‘ಬ್ಯಾಂಗ್-ಬ್ಯಾಂಗ್’, ಹೃತಿಕ್-ಟೈಗರ್ ಶ್ರಾಫ್ ನಟನೆಯ ‘ವಾರ್’ ಸಿನಿಮಾಗಳನ್ನು ಸಿದ್ಧಾರ್ಥ್ ನಿರ್ದೇಶಿಸಿದ್ದಾರೆ.

ಇದನ್ನೂ ಓದಿ : ಟಾಲಿವುಡ್‌ ನಟ ವಿಕ್ಟರಿ ವೆಂಕಟೇಶ್ 75ನೇ ಸಿನಿಮಾದ ಫಸ್ಟ್ ಲುಕ್ ಟೀಸರ್ ರಿಲೀಸ್

ಇದನ್ನೂ ಓದಿ : ಅಡ್ವಾನ್ಸ್ ಬುಕಿಂಗ್‌ನಲ್ಲಿ ಕೆಜಿಎಫ್ ಚಾಪ್ಟರ್ 2 ದಾಖಲೆ ಮುರಿದ ಶಾರುಖ್ ಖಾನ್ “ಪಠಾಣ್”

ಇದನ್ನೂ ಓದಿ : ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ‘ವಿಕ್ರಮ್’ ಬೆಡಗಿ ಧಾರವಾಡದ ಸ್ವತಿಷ್ಠ ಕೃಷ್ಣನ್

ಇದೀಗ ಹೃತಿಕ್‌ ಗಾಗಿಯೇ ‘ಫೈಟರ್’ ಹೆಸರಿನ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಆ ಸಿನಿಮಾದ ಬಳಿಕ ನಟ ಪ್ರಭಾಸ್ ಹಾಗೂ ನಟ ಹೃತಿಕ್‌ರ ಅಭಿನಯದ ಹೊಸ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ. ಇನ್ನು ಪ್ರಭಾಸ್ ಸಾಲು ಸಾಲು ಸಿನಿಮಾಗಳಲ್ಲಿ ಹೆಚ್ಚು ಬ್ಯುಸಿಯಾಗಿದ್ದು, ಪ್ರಭಾಸ್ ನಟಿಸಿರುವ ‘ಆದಿಪುರುಷ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಅದರ ಬೆನ್ನಲ್ಲೆ ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಸಿನಿಮಾ ಸಹ ಬಿಡುಗಡೆ ಆಗಲಿದೆ. ಅದರ ಬಳಿಕ ನಾಗ್ ಅಶ್ವಿನ್ ನಿರ್ದೇಶನದ ಇನ್ನೂ ಹೆಸರಿಡದ ಸಿನಿಮಾ ಬಿಡುಗಡೆ ಆಗಲಿದೆ. ಇವುಗಳ ಜೊತೆಗೆ ಮಾರುತಿ ನಿರ್ದೇಶನದ ಸಿನಿಮಾ ಒಂದನ್ನು ಪ್ರಭಾಸ್ ಒಪ್ಪಿಕೊಂಡಿದ್ದಾರೆ. ಇವೆಲ್ಲಾ ಸಿನಿಮಾಗಳ ಬಳಿಕವಷ್ಟೆ ಪ್ರಭಾಸ್ ಹಾಗೂ ಹೃತಿಕ್ ರೋಷನ್ ಸಿನಿಮಾ ಸೆಟ್ಟೇರಲಿದೆ.

Prabhas – Hrithik Roshan : Tollywood Prabhas Bollywood Superstar Hrithik Roshan Combination in Anand Cinema

Comments are closed.