RCB ಆಟಗಾರ ಮೊಹಮ್ಮದ್ ಸಿರಾಜ್ ವಿಶ್ವದ ನಂ 1 ಬೌಲರ್

ಟೀಂ ಇಂಡಿಯಾ ಬಲಗೈ ವೇಗಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಆಟಗಾರ ಮೊಹಮ್ಮದ್ ಸಿರಾಜ್ ಇದೀಗ ವಿಶ್ವದ ನಂ.1 (Mohammed Siraj World No 1 bowler) ಆಟಗಾರನಾಗಿ ಹೊರಹೊಮ್ಮಿದ್ದಾರೆ. ನ್ಯೂಜಿಲೆಂಡ್ ವಿರುದ್ದದ ಮೂರು ಪಂದ್ಯಗಳ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಮೊಹಮ್ಮದ್ ಸಿರಾಜ್ ಐಸಿಸಿ ಬಿಡುಗಡೆ ಮಾಡಿರುವ ಏಕದಿನ ಕ್ರಮಾಂಕದಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ.

ತವರಿನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ದ ಮೂರು ಪಂದ್ಯಗಳ ಸರಣಿಯನ್ನು ಭಾರತ ಕ್ಲೀನ್ ಸ್ವೀಪ್ ಮಾಡುವಲ್ಲಿ ಮೊಹಮ್ಮದ್ ಸಿರಾಜ್ ಮಹತ್ದದ ಪಾತ್ರವಹಿಸಿದ್ದರು. ಸಿರಾಜ್ ನ್ಯೂಜಿಲೆಂಡ್ ವಿರುದ್ಧದ ಎರಡು ಪಂದ್ಯಗಳಿಂದ ಐದು ವಿಕೆಟ್‌ಗಳನ್ನು ಗಳಿಸಿದರು, ಇದರಲ್ಲಿ ನಾಲ್ಕು ವಿಕೆಟ್‌ಗಳು ಸೇರಿದಂತೆ ಹೈದರಾಬಾದ್‌ನಲ್ಲಿ ಅವರ ತವರು ನೆಲದಲ್ಲಿ. ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಅವರು ಒಂಬತ್ತು ವಿಕೆಟ್‌ ಪಡೆದುಕೊಂಡಿದ್ದರು.

ಕಳೆದ ಬಾರಿಯ ಐಪಿಎಲ್ ಪಂದ್ಯಾವಳಿಗೂ ಮುನ್ನ ಆರ್ ಸಿಬಿ ತಂಡ ವಿರಾಟ್‌ ಕೊಹ್ಲಿ ಹಾಗೂ ಮೊಹಮ್ಮದ್ ಸಿರಾಜ್‌ ಅವರನ್ನು ಉಳಿಸಿಕೊಂಡಿತ್ತು. ಅಲ್ಲದೇ ಕಳೆದ ಮೂರು ಐಪಿಎಲ್ ಋತುವಿನಲ್ಲಿಯೂ ಮೊಹಮ್ಮದ್ ಸಿರಾಜ್‌ ಉತ್ತಮ ಬೌಲಿಂಗ್‌ ಪ್ರದರ್ಶನ ನೀಡಿದ್ದಾರೆ. ಸದ್ಯ ಟೀಂ ಇಂಡಿಯಾದ ಹಲವು ಸರಣಿಗಳಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಏಕದಿನ ಕ್ರಿಕೆಟ್ ನಲ್ಲಿ ಐಸಿಸಿ ಅಗ್ರಸ್ಥಾನ ಪಡೆಯುವ ಮೂಲಕ ಮೊಹಮ್ಮದ್ ಸಿರಾಜ್ ಇದೀಗ ಕಪಿಲ್ ದೇವ್, ಮಣಿಂದರ್ ಸಿಂಗ್, ಅನಿಲ್ ಕುಂಬ್ಳೆ, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ ನಂಬರ್ 1 ಬೌಲರ್ ಸ್ಥಾನವನ್ನು ಪಡೆದುಕೊಂಡಿದ್ದರು.

ಎಡಗೈ ಮಣಿಕಟ್ಟಿನ ಸ್ಪಿನ್ನರ್ ಕುಲದೀಪ್ ಯಾದವ್ ಮತ್ತು ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ನ್ಯೂಜಿಲೆಂಡ್ ಸರಣಿಯಲ್ಲಿ ತಲಾ ಆರು ವಿಕೆಟ್‌ ಪಡೆದುಕೊಂಡಿದ್ದರು. ಇನ್ನು ಸ್ಪಿನ್ನರ್ ಕುಲದೀಪ್ ಯಾದವ್ 19ನೇ ಸ್ಥಾನದಲ್ಲಿದ್ದರೆ, ಶಾರ್ದೂಲ್ ಠಾಕೂರ್ ಐದು ಸ್ಥಾನ ಪ್ರಗತಿ ಸಾಧಿಸಿ 35ನೇ ಸ್ಥಾನ ಪಡೆದಿದ್ದಾರೆ. ಜಿಂಬಾಬ್ವೆಯಲ್ಲಿ ನಡೆದ ಏಕದಿನ ಸರಣಿಯಲ್ಲಿ ಐರ್ಲೆಂಡ್‌ನ ಸೀಮ್ ಬೌಲರ್‌ಗಳಾದ ಜೋಶುವಾ ಲಿಟಲ್ ಮತ್ತು ಮಾರ್ಕ್ ಅಡೈರ್ ತಲಾ ಐದು ವಿಕೆಟ್‌ಗಳನ್ನು ಗಳಿಸಿ ಮುನ್ನಡೆದಿದ್ದಾರೆ.

ಇದನ್ನೂ ಓದಿ : India Split Captaincy: ವಿಶ್ವಕಪ್ ನಂತರ ರೋಹಿತ್ ಶರ್ಮಾ ನಿವೃತ್ತಿ, ಭಾರತಕ್ಕೆ ಇಬ್ಬರು ಕ್ಯಾಪ್ಟನ್ಸ್; ಬಿಸಿಸಿಐ ಮೆಗಾ ಪ್ಲಾನ್

ಇದನ್ನೂ ಓದಿ : ಪ್ರಿನ್ಸ್ ಶುಭಮನ್ ಗಿಲ್’ಗೆ ದುಬಾರಿ ವಾಚ್ ಗಿಫ್ಟ್ ಕೊಟ್ಟ ಕಿಂಗ್ ಕೊಹ್ಲಿ

RCB player Mohammed Siraj Becomes World No 1 bowler

Comments are closed.