Prabhas in Adam Film : ಆದಿಪುರುಷ ಅವತಾರದಲ್ಲಿ ಪ್ರಭಾಸ್

ಮುಂದಿನ ವರ್ಷ (Next year) ಬಿಡುಗಡೆಯಾಗಲಿರುವ ಬಿಗ್‌ಬಜೆಟ್‌   ಹಾಗೂ ಹೆಚ್ಚು ನಿರೀಕ್ಷೆ ಹುಟ್ಟಿಸಿರುವ ಸಿನಿಮಾಗಳಲ್ಲಿ ಒಂದಾದ ಆದಿಪುರುಷ( Prabhas in Adam Film). ಇದೇ ಮೊದಲ ಬಾರಿಗೆ ಪ್ರಭಾಸ್ ಮತ್ತು ಕೃತಿ ಸನನ್( Prabhas and Kriti Sanon)ಕೊಟ್ಟಿಗೆ ಸೇರಿ ನಟಿಸುತ್ತಿರುವ ಸಿನಿಮಾ. ಈ ಚಿತ್ರವನ್ನು ಓಂ ರಾವುತ್ ನಿರ್ದೇಶಿಸುತ್ತಿದ್ದಾರೆ.

ಬಾಹುಬಲಿ’ ಸಿನಿಮಾ ಬಳಿಕ ಪ್ಯಾನ್ ಇಂಡಿಯಾ ನಾಯಕನಾಗಿ ಮಿಂಚುತ್ತಿರುವ ಪ್ರಭಾಸ್ ಗೆ ಬೇಡಿಕೆ ಹೆಚ್ಚಾಗಿದೆ. ತೆಲುಗು ಮಾತ್ರವಲ್ಲದೆ ಹಿಂದಿಯಲ್ಲಿಯೂ ಪ್ರಭಾಸ್ ಗೆ ಸಿನಿಮಾ ಮಾಡಲು ನಿರ್ಮಾಪಕರು, ನಿರ್ದೇಶಕರು ತುದಿಗಾಲಿನಲ್ಲಿ ನಿಂತಿದ್ದಾರೆ. ಕೃತಿ ಮತ್ತು ಪ್ರಭಾಸ್ ಅವರಂತಹ ದೊಡ್ಡ ಸ್ಟಾರ್ ನಟರು ಒಟ್ಟಿಗೆ ಪರದೆಯನ್ನು ಹಂಚಿಕೊಳ್ಳುವುದು ಖಂಡಿತವಾಗಿಯೂ ಎಲ್ಲಾ ಅಭಿಮಾನಿಗಳಿಗೆ ಸಂತೋಷದ ವಿಚಾರ. ಈ ಖುಷಿಯ ವಿಚಾರವನ್ನು ಚಿತ್ರತಂಡದ ಮೂಲಗಳು ತಿಳಿಸಿದೆ.

ಚಿತ್ರದ ಕೆಲವು ತುಣುಕುಗಳನ್ನು ನೋಡಿದ ಆಪ್ತ ಮೂಲಗಳಿಗೆ , ಹಂಚಿಕೊಂಡಿದ್ದಾರೆ,“ಕಳೆದ ವಾರ, ಇಡೀ ಚಿತ್ರತಂಡ ಮತ್ತು  ನಿರ್ದೇಶಕ ಓಂ ರಾವುತ್ ಅವರ ಮನೆಯಲ್ಲಿ ಒಟ್ಟುಗೂಡಿ ತಾವು ಇಲ್ಲಿಯವರೆಗೆ ಸಾಧಿಸಿದ್ದನ್ನು ಆಚರಿಸಲು ಮತ್ತು ಚಿತ್ರ ಹೇಗೆ ಎಂದು ನೋಡಲು ಸೇರಿತ್ತು.ಅವರು ಕೃತಿ ಮತ್ತು ಪ್ರಭಾಸ್ ಅವರ ಕೆಲವು ದೃಶ್ಯಗಳನ್ನು ನೋಡಿ,  ಚೆನ್ನಾಗಿ ಮೂಡಿಬಂದಿದೆ. ಅವರ ನಡುವಿನ ಕೆಮಿಸ್ಟ್ರಿ ತುಂಬ ಚೆನ್ನಾಗಿ ಮೂಡಿಬರುತ್ತಿದೆ.  ಖಂಡಿತವಾಗಿ ಮುಂದಿನ ದಿನಗಳಲ್ಲಿ ಇವರ ಜೋಡಿಸೂಪರ್ ಹಿಟ್ ಆಗಿದೆ ಅಂತ ಅಭಿಪ್ರಾಯಪಟ್ಟಿದ್ದಾರೆ”.

ಈ ಶೆಡ್ಯೂಲ್‌ನಲ್ಲಿ ಕೆಲವು ಹೈ ಆಕ್ಟೇನ್‌ ಆ್ಯಕ್ಷನ್ ಸನ್ನಿವೇಶಗಳನ್ನು ಚಿತ್ರೀಕರಿಸಲು ಹೊರಟಿದ್ದರಿಂದ ಸೈಫ್ ಮತ್ತು ಪ್ರಭಾಸ್ ಇಬ್ಬರೂ ಸಾಕಷ್ಟು ದೈಹಿಕ ರೂಪಾಂತರಕ್ಕೆ ಒಳಗಾಗಿದ್ದಾರೆ. ಇಬ್ಬರು ನಟರಿಗೂ ಬಾಡಿ ಬಿಲ್ಡ್​ ಮಾಡಲು ಹೇಳಲಾಗಿತ್ತು ಮತ್ತು ಸ್ನಾಯುವಿನ ನೋಟವನ್ನು ಹೊಂದಿರ ಬೇಕು ಎಂದು ಸೂಚನೆ ನೀಡಲಾಗಿದೆಯಂತೆ. ಒಟ್ಟಾರೆಯಾಗಿ ಈಗ ಬಂದಿರುವ ಮೂಲ ಮಾಹಿತಿ ಪ್ರಕಾರ ಕೃತಿ ಮತ್ತು ಪ್ರಭಾಸ್  ಜೋಡಿ ಸಕ್ಕತ್ ಹಿಟ್ ಆಗಲಿದೆ ಎನ್ನಲಾಗಿದೆ.

ಇದನ್ನೂ ಓದಿ : kannadathi serial : ಭಾರಿ ದೊಡ್ಡ ಟ್ವಿಸ್ಟ್​ಗೆ ನಾಂದಿ ಹಾಡಿದೆ ಹರ್ಷ – ಭುವಿ ಕಲ್ಯಾಣ

ಇದನ್ನೂ ಓದಿ : Atal Bihari Vajpayee : ಅಟಲ್​ ಬಿಹಾರಿ ವಾಜಪೇಯಿ ಜೀವನಾಧಾರಿತ ಸಿನಿಮಾ ನಿರ್ಮಾಣಕ್ಕೆ ಬಾಲಿವುಡ್​ ತಯಾರಿ

Prabhas in Adam Film

Comments are closed.