ಮತ್ತೆ ಶುರುವಾಗಲಿದೆ ಕರ್ನಾಟಕ ಪ್ರೀಮಿಯರ್ ಲೀಗ್… ಹೊಸ ಟಿ20 ಲೀಗ್‌ನ ಹೆಸರೇನು ಗೊತ್ತಾ ?

ಬೆಂಗಳೂರು: (KSCA T20 League ) ಮತ್ತೆ ಶುರುವಾಗಲಿದೆ ಕರ್ನಾಟಕ ಪ್ರೀಮಿಯರ್ ಲೀಗ್… ಹೊಸ ಟಿ20 ಲೀಗ್‌ನ ಹೆಸರೇನು ಗೊತ್ತಾ ?ಕರ್ನಾಟಕ ಪ್ರೀಮಿಯರ್ ಲೀಗ್ (Karnataka Premier League- KPL) ಕರುನಾಡ ಕ್ರಿಕೆಟ್ ಹಬ್ಬ ಎಂದೇ ಕರೆಸಿಕೊಂಡಿದ್ದ ಟೂರ್ನಿ. ಕೆಪಿಎಲ್ ಮೂಲಕ ಹಲವಾರು ಸ್ಥಳೀಯ ಪ್ರತಿಭೆಗಳು ಬೆಳಕಿಗೆ ಬಂದಿದ್ದಾರೆ. ಕೆಪಿಎಲ್ ಟೂರ್ನಿಯಲ್ಲಿ ಆಡಿದ ಒಂದಷ್ಟು ಮಂದಿ ಆಟಗಾರರಿಗೆ ಐಪಿಎಲ್’ನಲ್ಲೂ ಆಡುವ ಅವಕಾಶ ಸಿಕ್ಕಿದೆ.

ಆದರೆ ಕೆಪಿಎಲ್ ಟೂರ್ನಿಯಲ್ಲಿ ಮ್ಯಾಚ್ ಫಿಕ್ಸಿಂಗ್ ಹಾಗೂ ಸ್ಪಾಟ್ ಫಿಕ್ಸಿಂಗ್ ಆರೋಪ ಕೇಳಿ ಬಂದ ಕಾರಣ ಕಳೆದ ಮೂರು ವರ್ಷಗಿಂದ ಟೂರ್ನಿ ನಡೆದಿಲ್ಲ. ಕೆಪಿಎಲ್ ಫಿಕ್ಸಿಂಗ್ ಆರೋಪದಲ್ಲಿ ರಾಜ್ಯ ತಂಡದ ಮಾಜಿ ನಾಯಕ ಸಿ.ಎಂ ಗೌತಮ್, ಮಾಜಿ ರಣಜಿ ಆಟಗಾರ ಅಬ್ರಾರ್ ಖಾಜಿ, ಮಾಜಿ ಕ್ರಿಕೆಟಿಗ ಹಾಗೂ ಹಾಲಿ KSCA ಆಡಳಿತ ಮಂಡಳಿ ಸದಸ್ಯ ಸುಧೀಂದ್ರ ಶಿಂಧೆ ಅವರನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಅರೆಸ್ಟ್ ಕೂಡ ಮಾಡಿದ್ದರು.

ಫಿಕ್ಸಿಂಗ್ ಕಾರಣದಿಂದ ಸ್ಥಗಿತಗೊಂಡಿದ್ದ ಕೆಪಿಎಲ್ ಟೂರ್ನಿಯನ್ನು ಮತ್ತೆ ಆರಂಭಿಸಲು ರಾಜ್ಯ ಕ್ರಿಕೆಟ್ ಸಂಸ್ಥೆ (Karnataka State Cricket Association) ಮುಂದಾಗಿದೆ. ಆದರೆ ಕೆಪಿಎಲ್ ಬದಲಾಗಿ ಕೆಎಸ್’ಸಿಎ ಟಿ20 ಲೀಗ್ (KSCA T20 League) ಎಂಬ ಹೆಸರಿನಲ್ಲಿ ಟೂರ್ನಿ ನಡೆಯಲಿದ್ದು, ಆರು ವಲಯಗಳ ತಂಡಗಳ ಮಾಲೀಕತ್ವಕ್ಕೆ ರಾಜ್ಯ ಕ್ರಿಕೆಟ್ ಸಂಸ್ಥೆ ಅರ್ಜಿ ಆಹ್ವಾನಿಸಿದೆ.

KSCA ಟಿ20 ಲೀಗ್ (KSCA T20 League) : ಹೊಸ ತಂಡಗಳು

  1. ಬೆಂಗಳೂರು ನಗರ
  2. ಮೈಸೂರು
  3. ಶಿವಮೊಗ್ಗ
  4. ಹುಬ್ಬಳ್ಳಿ/ಧಾರವಾಡ
  5. ರಾಯಚೂರು
  6. ಮಂಗಳೂರು

ಈ ಆರು ವಲಯಗಳ ತಂಡಗಳ ಮಾಲೀಕತ್ವಕ್ಕಾಗಿ ಕಾರ್ಪೊರೆಟ್ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು 11,800 ರೂ. ಪಾವತಿಸಿ ಆರ್ಜಿ ಸ್ವೀಕರಿಸಬಹುದು ಎಂದು ರಾಜ್ಯ ಕ್ರಿಕೆಟ್ ಸಂಸ್ಥೆಯ ವಕ್ತಾರ ವಿನಯ್ ಮೃತ್ಯುಂಜಯ ತಿಳಿಸಿದ್ದಾರೆ. ಈ ಟೂರ್ನಿಯ ಪಂದ್ಯಗಳು ಆಗಸ್ಟ್ 15ರಿಂದ 31ರವರೆಗೆ ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿಯಲ್ಲಿ ನಡೆಯಲಿವೆ.

ಇದನ್ನೂ ಓದಿ : Roger Binny Outrage Against Manish Pandey : ಮನೀಶ್ ಪಾಂಡೆ ವಿರುದ್ಧ ಕೆಎಸ್‌ಸಿಎ ಅಧ್ಯಕ್ಷ ಬಿನ್ನಿ ಕೆಂಡಾಮಂಡಲ

ಇದನ್ನೂ ಓದಿ : India Vs England test : ರೋಹಿತ್ ಶರ್ಮಾ ಔಟ್, ಟೀಮ್ ಇಂಡಿಯಾಗೆ ಬುಮ್ರಾ ಕ್ಯಾಪ್ಟನ್

KSCA T20 League : Karnataka Premier League is about to start again Do you know the name of the new T20 league ?

Comments are closed.