ವೀಕೆಂಡ್‌ ವಿತ್‌ ರಮೇಶ ಸೀಸನ್‌ 5 : ಮೋಡಿ ಮಾಡಲು ಬರುತ್ತಿದ್ದಾರೆ ಭಾರತದ ಮೈಕಲ್‌ ಜಾಕ್ಸನ್‌

ಕಿರುತೆರೆಯ ಬಹುಬೇಡಿಕೆ ಶೋ ಎಂದರೆ ಅದು ವೀಕೆಂಡ್‌ ವಿತ್‌ ರಮೇಶ್‌ (Weekend with Ramesh Season 5) ಎಂದರೆ ತಪ್ಪಾಗಲ್ಲ. ಯಾಕೆಂದರೆ ಕಳೆದ ಹಲವು ವರ್ಷಗಳಿಂದ ಕನ್ನಡದ ಕಿರುತೆರೆಯಲ್ಲಿ ಸೀರಿಯಲ್‌ಗಳಿಗಿಂತ ಹೆಚ್ಚಾಗಿ ರಿಯಾಲಿಟಿ ಶೋಗಳು ಹೆಚ್ಚು ಜನರ ಮನಸ್ಸನ್ನು ರಂಜಿಸಿದೆ. ಅದರಲ್ಲೂ ಇತ್ತೀಚೆಗೆ ಹೆಚ್ಚು ಪ್ರಚಲಿತದಲ್ಲಿರುವ ಗಿಚ್ಚಿ ಗಿಲಿಗಿಲಿ, ನಮ್ಮ ಅಮ್ಮ ಸೂಪರ್‌ ಸ್ಟಾರ್‌, ಬಿಗ್‌ ಬಾಸ್‌, ರಾಜಾ ರಾಣಿ, ಜೋಡಿ ನಂ.1, ಸೂಪರ್‌ ಕ್ವೀನ್‌, ಇಸ್ಮಾರ್ಟ್ ಜೋಡಿ, ಸರಿಗಮಪ ಹೀಗೆ ಎಲ್ಲಾ ಚಾನೆಲ್​ಗಳಲ್ಲಿಯೂ ಒಂದಿಲ್ಲೊಂದು ರಿಯಾಲಿಟಿ ಶೋಗಳು ನಡೆಸುತ್ತಾ ಬಂದಿದ್ದಾರೆ. ಅದರಲ್ಲೂ ಇದೀಗ ಕರುನಾಡಿನಲ್ಲಿ ಮನೆ ಮಾತಾಗಿದ್ದ ವೀಕೆಂಡ್​ ವಿತ್​ ರಮೇಶ್​ ಕಾರ್ಯಕ್ರಮ ಒಂದು ವಾರದ ಎಪಿಸೋಡ್‌ನ್ನು ಮುಗಿಸಿದ್ದು, ಮೊದಲು ಸಾಧಕರ ಸೀಟಿನಲ್ಲಿ ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ ಬಂದಿದ್ದಾರೆ. ಇದೀಗ ವೀಕೆಂಡ್​ ವಿತ್​ ರಮೇಶ್ ಸೀಸನ್‌ 5 ಎರಡನೇ ಗೆಸ್ಟ್‌ ಆಗಿ ಭಾರತದ ಮೈಕಲ್‌ ಜಾಕ್ಸನ್‌ ಎಂದೇ ಪ್ರಖ್ಯಾತಿ ಪಡೆದಿರುವ ಪ್ರಭುದೇವ (Prabhu Deva) ಬರಲಿದ್ದಾರೆ ಎಂದು ಜೀ ವಾಹಿನಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ.

ಪ್ರೊಮೋ ವಿಡಿಯೋದಲ್ಲಿ, ” ಸಾಧಕರ ಕುರ್ಚಿಯಲ್ಲಿ ಮೋಡಿ ಮಾಡೋಕೆ ಈ ವೀಕೆಂಡ್‌ ಬರ್ತಿದ್ದಾರೆ ಭಾರತದ ಮೈಕಲ್‌ ಜಾಕ್ಸನ್‌! ” ಎಂದು ಪೋಸ್ಟ್‌ ಮಾಡಿದ್ದಾರೆ. ಹೀಗಾಗಿ ಈ ವೀಕೆಂಡ್‌ನಲ್ಲಿ ಪ್ರಭುದೇವ ಡ್ಯಾನ್ಸ್‌ನ್ನು ಈ ಮನೆಯಲ್ಲೇ ಕೂತು ನೀವು ನೋಡಬಹುದಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರನ್ನು ಸಾಧಕರ ಕುರ್ಚಿಯಲ್ಲಿ ಕುಳ್ಳಿರಿಸಿ ಅವರು ನಡೆದು ಬಂದ ಹಾದಿ, ಸವೆಸಿದ ಕಷ್ಟಗಳು, ಅವಮಾನ, ಅಪಮಾನ, ಸಾಧನೆ, ಸನ್ಮಾನ ಹೀಗೆ ಪ್ರತಿಯೊಂದು ವಿಚಾರಗಳ ಬಗ್ಗೆಯೂ ಮಾತನಾಡುವ ಈ ಶೋ ಸಾಕಷ್ಟು ಪ್ರತೀತಿಯನ್ನು ಗಳಿಸಿದೆ. ಈ ಕಾರ್ಯಕ್ರಮದ ಮೂಲಕ ಯುವ ಜನಕ್ಕೆ ಸ್ಪೂರ್ತಿಯನ್ನು ತುಂಬುವ ಚಂದನವನದ ನಟ ರಮೇಶ್​ ಇದೀಗ ಮತ್ತೊಮ್ಮೆ ವೀಕೆಂಟ್​ ಟೆಂಟ್​ಗೆ ರೀ ಎಂಟ್ರಿ ಕೊಟ್ಟಿದ್ದಾರೆ.

2019ರ ಜುಲೈ ತಿಂಗಳಲ್ಲಿ ವೀಕೆಂಡ್​ ವಿತ್​ ರಮೇಶ್​ ಕಾರ್ಯಕ್ರಮ ಕೊನೆಗೊಂಡಿತ್ತು. ಇದಾದ ಬಳಿಕ 3 ವರ್ಷಗಳೇ ಕಳೆದರೂ ಹೊಸ ಸೀಸನ್​ ಮಾತ್ರ ಆರಂಭಗೊಂಡಿರಲಿಲ್ಲ. ಪ್ರೇಕ್ಷಕರು ಜೀ ಕನ್ನಡ ವಾಹಿನಿಯ ಬಳಿಯಲ್ಲಿ ಈ ಕಾರ್ಯಕ್ರಮವನ್ನು ಮತ್ತೊಮ್ಮೆ ಆರಂಭಿಸಿ ಎಂದು ಅನೇಕ ಬಾರಿ ಕೇಳಿಕೊಂಡಿದ್ದರು ಕೂಡ. ಇದೀಗ ಜೀ ಕನ್ನಡ ವಾಹಿನಿಯ ಬ್ಯುಸಿನೆಸ್​ ಹೆಡ್​ ರಾಘವೇಂದ್ರ ಹುಣಸೂರು ಮತ್ತೊಮ್ಮೆ ವೀಕೆಂಡ್​ ವಿತ್​ ರಮೇಶ್​ ಕಾರ್ಯಕ್ರಮವನ್ನು ಶುರು ಮಾಡಿದ್ದಾರೆ.

ಇದನ್ನೂ ಓದಿ : Actress Priyanka Chopra : ಬಾಲಿವುಡ್‌ ತೊರೆಯಲು ಕಾರಣ ಬಿಚ್ಚಿಟ್ಟ ನಟಿ ಪ್ರಿಯಾಂಕಾ ಛೋಪ್ರಾ

ಇದನ್ನೂ ಓದಿ : ಇಂದು ನಟ ಡಾ. ಅಂಬರೀಶ್‌ ಸ್ಮಾರಕ ಅನಾವರಣ: ಸಿಎಂ ಸೇರಿ ಹಲವು ಗಣ್ಯರು ಭಾಗಿ

ಈ ಕಾರ್ಯಕ್ರಮ ಸದ್ಯದಲ್ಲೇ ಶುರುವಾಗಲಿದೆ ಎನ್ನುವ ವಿಷಯ ತಿಳಿದ ನೆಟ್ಟಿಗರಿಗೆ ಈ ಬಾರಿಯ ಸಾಧಕರನ್ನು ಆಯ್ಕೆ ಮಾಡುವ ಅವಕಾಶ ನೀಡಿದ್ದೇ ತಡ ಅನೇಕರ ಹೆಸರನ್ನು ಕಮೆಂಟ್​ ಬಾಕ್ಸಿನಲ್ಲಿ ಬರೆಯಲಾಗಿದೆ. ಗವಿ ಮಠದ ಸ್ವಾಮೀಜಿಗಳು , ರಾಹುಲ್​ ದ್ರಾವಿಡ್​, ಬೈರಪ್ಪ, ಯಡಿಯೂರಪ್ಪ, ತಾರಾ, ಹಂಸಲೇಖ, ರಿಷಬ್‌ ಶೆಟ್ಟಿ, ಪ್ರಭುದೇವ ಹೀಗೆ ನೆಟ್ಟಿಗರ ಬೇಡಿಕೆಯ ಪಟ್ಟಿ ಬೆಳೆಯುತ್ತಲೇ ಇತ್ತು. ಕೊನೆಗೂ ಸಾಧಕರ ಸೀಟಿಗೆ ಈ ಸೀಸನ್‌ನ ಎರಡನೇ ಗೆಸ್ಟ್‌ ಆಗಿ ಪ್ರಭುದೇವ ಕೂರಲಿದ್ದಾರೆ.

Prabhu Deva: Weekend with Ramesh Season 5: India’s Michael Jackson comes to charm

Comments are closed.