Priyanka Chopra Daughter: ಮೊದಲ ಬಾರಿಗೆ ಮುದ್ದು ಮಗಳ ಫೋಟೋ ಹಂಚಿಕೊಂಡ ನಟಿ ಪ್ರಿಯಾಂಕಾ ಛೋಪ್ರಾ; ಎಷ್ಟು ಮುದ್ದಾಗಿದೆ ಅಂದ್ರು ಅಭಿಮಾನಿಗಳು

ಮುಂಬೈ: Priyanka Chopra Daughter:ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ ಸದ್ಯ ತಾಯ್ತನವನ್ನು ಎಂಜಾಯ್ ಮಾಡುತ್ತಿದ್ದಾರೆ. ಮಗಳ ಲಾಲನೆ-ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಇದುವರೆಗೂ ಮೀಡಿಯಾ ಕಣ್ಣುಗಳಿಂದ ಕಂದಮ್ಮನನ್ನು ಬಚ್ಚಿಟ್ಟಿದ್ದ ಪ್ರಿಯಾಂಕಾ ಇದೀಗ ತಮ್ಮ ಮುದ್ದು ಮಗಳ ಫೋಟೋ ರಿವೀಲ್ ಮಾಡಿ ಅಭಿಮಾನಿಗಳನ್ನು ಖುಷಿಪಡಿಸಿದ್ದಾರೆ.

ಬಾಲಿವುಡ್ ಮಾತ್ರವಲ್ಲದೇ ಹಾಲಿವುಡ್ ಸಿನಿಮಾಗಳಲ್ಲೂ ಸೈ ಎನಿಸಿಕೊಂಡಿದ್ದ ಪ್ರಿಯಾಂಕ ಛೋಪ್ರಾ ಅಮೆರಿಕನ್ ಗಾಯಕ ನಿಕ್ ಜೋನಸ್ ಅವರನ್ನು ಮದುವೆ ಆಗಿ ಅಮೆರಿಕಾದಲ್ಲೇ ಸೆಟಲ್ ಆಗಿದ್ದಾರೆ. ಇತ್ತೀಚೆಗಷ್ಟೆ ಭಾರತಕ್ಕೆ ಬಂದಿದ್ದ ಪಿಗ್ಗಿ ಕೆಲ ದಿನಗಳಿದ್ದು ಮತ್ತೆ ಪತಿಯ ಮನೆಗೆ ತೆರಳಿದ್ದರು.

ಅಂದಹಾಗೆ ಈ ವರ್ಷದ ಆರಂಭದಲ್ಲಿ ಬಾಡಿಗೆ ತಾಯ್ತನದ ಮೂಲಕ ಪಿಗ್ಗಿ- ನಿಕ್ ಜೋನಸ್ ದಂಪತಿ ಹೆಣ್ಣು ಮಗುವನ್ನು ಪಡೆದಿದ್ದು, ಮಗಳಿಗೆ ಮಾಲ್ತಿ ಮೇರಿ ಚೋಪ್ರಾ ಜೋನಸ್ ಎಂದು ಹೆಸರಿಟ್ಟಿದ್ದಾರೆ. ಈ ಹಿಂದೆ ಮಗುವಿನ ಮುಖವನ್ನು ಬ್ಲರ್ ಮಾಡಿ ಫೋಟೋ ಶೇರ್ ಮಾಡುತ್ತಿದ್ದ ಪ್ರಿಯಾಂಕ ಇದೀಗ ಇನ್ ಸ್ಟಾಗ್ರಾಂನಲ್ಲಿ ಮಾಲ್ತಿ ಫೋಟೋ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Nandini Milk Price Hike : ನಂದಿನಿ ಹಾಲು, ಮೊಸರು ದರ 2 ರೂ ಹೆಚ್ಚಳ : ನಾಳೆಯಿಂದಲೇ ಪರಿಷ್ಕೃತ ದರ

ಸದ್ಯ ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಲಾದ ಫೋಟೋದಲ್ಲಿ ಮಗುವಿನ ತುಟಿ ಮಾತ್ರ ರಿವೀಲ್ ಆಗಿದ್ದು, ಕಣ್ಣು ಮತ್ತು ಹಣೆಯನ್ನು ಟೋಪಿಯಿಂದ ಮುಚ್ಚಲಾಗಿದೆ. ಫೋಟೋ ಅಪ್ ಲೋಡ್ ಆದ ಕ್ಷಣಾರ್ಧದಲ್ಲಿ ಎಲ್ಲೆಡೆ ವೈರಲ್ ಆಗಿದ್ದು, ಸಿಕ್ಕಾಪಟ್ಟೆ ಲೈಕ್ಸ್, ಕಾಮೆಂಟ್ ಗಳು ಹರಿದುಬರುತ್ತಿವೆ. ಕೆಲವರು ಮಗು ಅಪ್ಪನನ್ನು ಹೋಲುತ್ತದೆ ಎಂದರೆ ಇನ್ನು ಕೆಲವರು ಅಮ್ಮನನ್ನು ಹೋಲುತ್ತಿದೆ ಎಂದು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: Poisonous Mushroom : ಬೆಳ್ತಂಗಡಿ ಬಳಿ ವಿಷಪೂರಿತ ಅಣಬೆ ಸೇವಿಸಿ : ಅಪ್ಪ – ಮಗನ ಸಾವು

2018ರ ಡಿಸೆಂಬರ್ ನಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಅಮೆರಿಕನ್ ಗಾಯಕ, ತನಗಿಂತ 10 ವರ್ಷ ಚಿಕ್ಕವರಾದ ನಿಕ್ ಜೋನಸ್ ಅವರನ್ನು ಮದುವೆಯಾಗಿದ್ದರು. ಜೋಧ್ ಪುರದ ಉಮೈದ್ ಭವನ್ ಅರಮನೆಯಲ್ಲಿ ಅದ್ಧೂರಿ ವಿವಾಹ ನಡೆದಿತ್ತು. ಇತ್ತೀಚಿಗಷ್ಟೇ ಭಾರತಕ್ಕೆ ಬಂದು ಹೋಗಿದ್ದರು.

Priyanka Chopra Daughter: Actress Priyanka Chopra shares first glimpse of daughter Malti

Comments are closed.