ಧರ್ಮಸ್ಥಳ ಬಳಿ ಭೀಕರ ರಸ್ತೆ ಅಪಘಾತ : ಓರ್ವ ಸಾವು, 7 ಮಂದಿ ಗಂಭೀರ

ಬೆಳ್ತಂಗಡಿ : (dharmasthala accident) ಕೆಎಸ್ಆರ್ ಟಿಸಿ ಬಸ್ ಹಾಗೂ ಬೊಲೆರೋ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಸಾವನ್ನಪ್ಪಿದ್ದು, ಏಳು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಸಮೀಪದ ನಿಡ್ಲೆ ಗ್ರಾಮದ ಕುದ್ರಾಯ ಎಂಬಲ್ಲಿ ನಡೆದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ.

ಮಂಡ್ಯ ಜಿಲ್ಲೆಯಿಂದ ಕುಟುಂಬ ಸಮೇತರಾಗಿ ಬೊಲೇರೋ ವಾಹನದಲ್ಲಿ ಧರ್ಮಸ್ಥಳಕ್ಕೆ ಆಗಮಿಸುತ್ತಿದ್ದರು. ಧರ್ಮಸ್ಥಳ ಸಮೀಪದ ಕುದ್ರಾಯ ಎಂಬಲ್ಲಿ ಬರುತ್ತಿದ್ದಂತೆಯೇ ಹತ್ತು ಮಂದಿ ಪ್ರಯಾಣಿಸುತ್ತಿದ್ದ ಬೊಲೆರೋ ವಾಹನಕ್ಕೆ ಧರ್ಮಸ್ಥಳದಿಂದ ಮೈಸೂರಿಗೆ ತೆರಳುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ಢಿಕ್ಕಿ ಹೊಡೆದಿದೆ.

ಅಪಘಾತದಲ್ಲಿ ಮಹಾದೇವ ( 63 ವರ್ಷ) ಎಂಬವರು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಐವರು ಮಹಿಳೆಯರು, ಒಂದು ಮಗು ಸೇರಿದಂತೆ ಒಟ್ಟು ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿದ್ದಾರೆ. ಅಲ್ಲದೇ ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ : Poisonous Mushroom : ಬೆಳ್ತಂಗಡಿ ಬಳಿ ವಿಷಪೂರಿತ ಅಣಬೆ ಸೇವಿಸಿ : ಅಪ್ಪ – ಮಗನ ಸಾವು

ಇದನ್ನೂ ಓದಿ : Nandini Milk Price Hike : ನಂದಿನಿ ಹಾಲು, ಮೊಸರು ದರ 2 ರೂ ಹೆಚ್ಚಳ : ನಾಳೆಯಿಂದಲೇ ಪರಿಷ್ಕೃತ ದರ

ಒಂದೇ ಕುಟುಂಬದ ನಾಲ್ವರ ಇರಿದು ಕೊಂದ ಮಾದಕ ವ್ಯಸನಿ

ದೆಹಲಿ : ಮಾದಕ ವ್ಯಸನಿಯೋರ್ವ ಒಂದೇ ಕುಟುಂಬದ ನಾಲ್ವರನ್ನು ಇರಿದು ಕೊಲೆ (Delhi Murder Case) ಮಾಡಿರುವ ಘಟನೆ ದೆಹಲಿಯ ಪಾಲಂ ಪ್ರದೇಶದಲ್ಲಿರುವ ಮನೆಯೊಂದರಲ್ಲಿ ನಡೆದಿದೆ. ಇಬ್ಬರು ಸಹೋದರಿಯರು ಹಾಗೂ ಅವರ ತಂದೆ ಮತ್ತು ಅಜ್ಜಿಯನ್ನು ಇರಿದು ಕೊಲೆ ಮಾಡಲಾಗಿದೆ.

ದಿನೇಶ್ ಕುಮಾರ್ (42 ವರ್ಷ ), ದರ್ಶನ್ ಸೈನಿ (40 ವರ್ಷ), ಊರ್ವಶಿ (22 ವರ್ಷ) ಮತ್ತು ದೀವಾನೋ ದೇವಿ (75 ವರ್ಷ) ಮೃತಪಟ್ಟವರು. ಆರೋಪಿಯನ್ನು ಕೇಶವ್ (25 ವರ್ಷ) ಎಂದು ಗುರುತಿಸಲಾಗಿದೆ.ಮಂಗಳವಾರ ರಾತ್ರಿ 10.30ರ ಸುಮಾರಿಗೆ ಮನೆಗೆ ಬಂದ ಕೇಶವ್ ಮನೆಯಲ್ಲಿದ್ದವರನ್ನು ಚಾಕುವಿನಿಂದ ಕತ್ತುಸೀಳಿ ಕೊಲೆ ಮಾಡಿದ್ದಾನೆ.

ದೀಪಾವಳಿಯ ಸಮಯದಿಂದಲೂ ನಿರುದ್ಯೋಗಿಯಾಗಿರುವ ಕೇಶವ್ ಮಾದಕ ಸೇವನೆ ಮಾಡಿ ಕೊಲೆ ಮಾಡಿದ್ದಾರೆ ಎಂದು ವರದಿಯಾಗಿದೆ. ಆರೋಪಿ ಇತ್ತೀಚಿಗಷ್ಟೇ ಮಾದಕ ವ್ಯಸನ ಕೇಂದ್ರದಿಂದ ಬಿಡುಗಡೆಗೊಂಡಿದ್ದ. ನಾಲ್ವರ ಕತ್ತನ್ನು ಸೀಳಲು ತೀಕ್ಷ್ಣವಾದ ಮಾರಕಾಸ್ತ್ರವನ್ನು ಬಳಿಸಿದ್ದಾನೆ. ಅಲ್ಲದೇ ಹಲವರು ಬಾರಿ ಅವರನ್ನು ಚುಚ್ಚಿ ಚುಚ್ಚಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆಯ ಕುರಿತು ಸ್ಥಳೀಯರಿಂದ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಈ ವೇಳೆಯಲ್ಲಿ ಸ್ಥಳದಿಂದ ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಮಾದಕ ದ್ರವ್ಯದ ವ್ಯಚನದ ಚಟಕ್ಕೆ ಬಿದ್ದ ಆರೋಪಿಯಿಂದಾಗಿ ನಾಲ್ವರ ಪ್ರಾಣಪಕ್ಷಿ ಹಾರಿ ಹೋಗಿದೆ.

KSRTC Bus and Bolero accident near dharmasthala One dead 7 seriously injured

Comments are closed.