Kantara Effect : ಕಾಂತಾರ ಸಕ್ಸಸ್, ದೈವನರ್ತಕರಿಗೆ 2 ಸಾವಿರ ರೂ. ಮಾಶಾಸನ

ಬೆಂಗಳೂರು : ಕಾಂತಾರ ಸಿನಿಮಾ (Kantara effect) ಸೂಪರ್ ಸಕ್ಸಸ್ ಆಗಿದೆ. ಇನ್ನೊಂದೆಡೆ ಕರಾವಳಿಗರ ಆಚರಣೆಯ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಈ ನಡುವಲ್ಲೇ ರಾಜ್ಯ ಸರಕಾರ ದೈವ ನರ್ತರಿಗೆ 2 ಸಾವಿರ ರೂಪಾಯಿ ಮಾಶಾಸನ ಘೋಷಣೆ ಮಾಡಿದೆ. ಈ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸುನಿಲ್ ಕುಮಾರ್ ಅವರು ದೈವ ನರ್ತನ ಹಿಂದೂ ಸಂಸ್ಕೃತಿಯ ಭಾಗ. ಇದು ನಮ್ಮ ಸಂಸ್ಕೃತಿಯ ಭಾಗ. ಇದನ್ನು ಮತ್ತಷ್ಟು ಗಟ್ಟಿ ಮಾಡುತ್ತೇವೆ. ಈ ಹಿನ್ನೆಲೆಯಲ್ಲಿ ದೈವ ನರ್ತಕರಿಗೆ ಮಾಶಾಸನ ಘೋಷಣೆ ಮಾಡಲಾಗಿದೆ ಎಂದಿದ್ದಾರೆ.

ಭೂತಾರಾಧನೆಯನ್ನು ಮಾಡುವ ದೈವ ನರ್ತಕರಿಗೆ ಮಾಶಾಸನ ನೀಡಲು ನಿರ್ಧಾರ ಮಾಡಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದಲೇ ಪ್ರತೀ ತಿಂಗಳು ಮಾಶಾಸನ ನೀಡಲಾಗುತ್ತದೆ. 60 ವರ್ಷ ತುಂಬಿದ ದೈವ ನರ್ತಕರು ಮಾಶಾಸನ ಪಡೆಯಲು ಅರ್ಹರಾಗಿದ್ದಾರೆ ಎಂದಿದ್ದಾರೆ.

ಕಾಂತಾರ ಸಿನಿಮಾದಲ್ಲಿ ಪ್ರಮುಖವಾಗಿ ಕರಾವಳಿಗರ ದೈವಾರಾಧನೆಯ ಬಗ್ಗೆ ಬೆಳಕು ಚೆಲ್ಲಲಾಗಿತ್ತು. ಸಿನಿಮಾ ಈಗಾಗಲೇ ದೇಶ, ವಿದೇಶಗಳಲ್ಲಿಯೂ ಬಾರೀ ಸದ್ದು ಮಾಡುತ್ತಿದೆ. ಸಿನಿಮಾ ರಿಲೀಸ್ ಆದ ಬೆನ್ನಲ್ಲೇ ಕರಾವಳಿಯ ದೈವ, ದೇವರ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಈ ನಡುವಲ್ಲೇ ರಾಜ್ಯ ಸರಕಾರ ದೈವ ನರ್ತಕರಿಗೆ ಮಾಶಾಸನ ಬಿಡುಗಡೆ ಮಾಡುವ ಮೂಲಕ ದೀಪಾವಳಿಗೆ ಗುಡ್ ನ್ಯೂಸ್ ಕೊಟ್ಟಿದೆ. ಇನ್ನು ನಟ ಚೇತನ್ ನೀಡಿರುವ ಹೇಳಿಕೆಗೆ ಸಚಿವ ಸುನಿಲ್ ಕುಮಾರ್ ಟಾಂಗ್ ಕೊಟ್ಟಿದ್ದಾರೆ. ಸಂಸೃತಿ ಇಲ್ಲದವರು, ಸಂಸ್ಕೃತಿಯ ಬಗ್ಗೆ ಮಾತನಾಡಬಾರು. ದೈವಾರಾಧನೆ ನಮ್ಮ ತುಳುನಾಡಿನ ಸಾಂಸ್ಕೃತಿಕ ಬಿಂಬ. ಯಾರೋ ಬಗ್ಗೆ ವ್ಯಕ್ತಿ ಹಾಗೆ ಹೇಳಿದ್ರೆ. ಆ ಸಂಸ್ಕೃತಿಯಿಂದ ಯಾರೂ ದೂರ ಆಗಲ್ಲ. ಭೂತಾರಾಧನೆ ಹಿಂದೂ ಸಂಸ್ಕೃತಿಯ ಗಟ್ಟಿಭಾಗ ಎಂದಿದ್ದಾರೆ.

ಪಿಎಫ್‍ಐ ಸಂಘಟನೆಯನ್ನು ನಿಷೇಧ ಮಾಡಿದ ಬಳಿಕ ಹಲವು ಸಂಗತಿಗಳು ಬೆಳಕಿಗೆ ಬರುತ್ತಿದೆ. ಅಯೋಧ್ಯೆ ರಾಮಮಂದಿರದ ಸ್ಪೋಟ ಸೇರಿದಂತೆ ಪಿಎಫ್‍ಐ ಸಂಘಟನೆ ಭಾರತವನ್ನು ಇಸ್ಲಾಮೀಕರಣ ಮಾಡುವ ದೊಡ್ಡ ಸಂಚು ಮಾಡುತ್ತಿತ್ತು.ಇವತ್ತು ರಾಮಮಂದಿರವನ್ನು ಧ್ವಂಸ ಮಾಡುವ ಅಜೆಂಡಾ ಇಟ್ಕೊಂಡಿತ್ತು.ಈ ಅಜೆಂಡಾದ ಕಾರ್ಯತಂತ್ರವನ್ನು ಈಗ ಕೇಂದ್ರ ಸರ್ಕಾರ ವಿಫಲಗೊಳಿಸಿದೆ. ಇಡೀ ತನಿಖಾ ತಂಡಕ್ಕೆ ನಾನು ಅಭಿನಂದನೆ ಸಲ್ಲಿಸ್ತೇನೆ. ಯಾವುದೇ ಕಾರಣಕ್ಕೂ ಭಾರತವನ್ನು ಇಸ್ಲಾಮೀಕರಣ ಮಾಡಲು ಬಿಡಲ್ಲ. ನಮ್ಮದು ಹಿಂದೂ ರಾಷ್ಟ್ರ, ಹಿಂದೂ ರಾಷ್ಟ್ರವಾಗಿಯೇ ಇನ್ನಷ್ಟು ಗಟ್ಟಿ ಮಾಡ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ : ಹೋಟೆಲ್ ಕೆಲಸ, ಬಿಸ್ಲೆರಿ ಮಾರಾಟ, ಕೈ ಕೊಟ್ಟ ಸಿನಿಮಾ : ಇದು ಕಾಂತಾರ ರಿಷಬ್ ಶೆಟ್ಟಿ ಜೀವನ ಸಾಧನೆ

ಇದನ್ನೂ ಓದಿ : Firecracker Factory blast: ಪಟಾಕಿ ಗೋದಾಮಿನಲ್ಲಿ ಸ್ಫೋಟ: 4 ಸಾವು, 7 ಮಂದಿಗೆ ಗಾಯ

Kantara effect Karnataka Government Good news for Buta kola performers Daiva Narthakas

Comments are closed.