ಭಾನುವಾರ, ಏಪ್ರಿಲ್ 27, 2025
HomeCinemaPuneeth Rajkumar James : ಜೇಮ್ಸ್ ಮೂಲಕ ಮತ್ತೆ ತೆರೆಗೆ ಬರ್ತಾರೆ ಪುನೀತ್: ಪವರ್ ಗೆ...

Puneeth Rajkumar James : ಜೇಮ್ಸ್ ಮೂಲಕ ಮತ್ತೆ ತೆರೆಗೆ ಬರ್ತಾರೆ ಪುನೀತ್: ಪವರ್ ಗೆ ಧ್ವನಿಯಾಗ್ತಾರೆ ಶಿವಣ್ಣ

- Advertisement -

ಕನ್ನಡದ ಪವರ್ ಅಭಿಮಾನಿಗಳು ಇನ್ನಷ್ಟು ಸಿನಿಮಾದಲ್ಲಿ ಪುನೀತ್ ನಟನೆಯನ್ನು ನೋಡಿ ಸಂಭ್ರಮಿಸಬೇಕಿತ್ತು. ಆದರೇ ವಿಧಿ ಆ ಅಭಿಮಾನಿಗಳಿಂದ ಆ ಖುಷಿ ಕಿತ್ತುಕೊಂಡಿದೆ. ಆದರೆ ಪವರ್ ಬಹುನೀರಿಕ್ಷಿತ ಚಿತ್ರ ಜೇಮ್ಸ್ ನ್ನು ಮಾತ್ರ ತೆರೆಗೆ ತರಲು ನಿರ್ದೇಶಕ ಚೇತನ್ ಕುಮಾರ್ ಶಪಥ ಮಾಡಿದ್ದಾರೆ.

ಅನೀರಿಕ್ಷಿತವಾಗಿ ಪುನೀತ್ ರಾಜ್ ಕುಮಾರ್ ನಮ್ಮ ನಡುವಿನಿಂದ ಸರಿದು ಹೋಗಿದ್ದಾರೆ. ಈ ದುರ್ಘಟನೆಗೂ ಮುನ್ನ ಪುನೀತ್ ಅಭಿನಯದ ಜೇಮ್ಸ್ ಚಿತ್ರ ಶೇಕಡಾ 95 ರಷ್ಟು ಶೂಟಿಂಗ್ ಮುಗಿಸಿತ್ತು. ಕೊನೆಯ 9 ದಿನಗಳ ಶೂಟಿಂಗ್ ಬಾಕಿ ಇತ್ತು. ಹೀಗಿರುವಾಗಲೇ ಪುನೀತ್ ರಾಜಕುಮಾರ್ ಚಿರನಿದ್ರೆಗೆ ಜಾರಿದ್ದಾರೆ. ಹೀಗಾಗಿ ಜೇಮ್ಸ್ ಚಿತ್ರ ತಂಡಕ್ಕೆ ಆಘಾತವಾಗಿತ್ತು.

ಆದರೆ ಈಗ ಶತಾಯಗತಾಯ ಸಿನಿಮಾ ತೆರೆಗೆ ತರಲೇ ಬೇಕೆಂದು ಚಿತ್ರ ತಂಡ ತೀರ್ಮಾನಿಸಿದೆ. ಹೀಗಾಗಿ ಮುಂದಿನ ವರ್ಷಕ್ಕೆ ಸಿನಿಮಾ ಅದ್ದೂರಿಯಾಗಿ ತೆರೆಗೆ ಬರಲಿದೆ. 2022 ರ ಮಾರ್ಚ್ 17 ರ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದಂದು ಜೇಮ್ಸ್ ತೆರೆಗೆ ತರಲು ಚಿತ್ರತಂಡ ನಿರ್ಧರಿಸಿದೆ. ಇದಕ್ಕಾಗಿ‌ ಬಾಕಿ ಇರುವ ಶೂಟಿಂಗ್ ಪೂರ್ತಿಗೊಳಿಸುವುದಾಗಿ ನಿರ್ದೇಶಕ ಚೇತನ್ ಕುಮಾರ್ ನಿರ್ಧರಿಸಿದ್ದಾರೆ.

ಇದನ್ನೂ ಓದಿ : ಅಪ್ಪುಗೆ ಅವಮಾನ : ತಮಿಳು ನಟರ ವಿರುದ್ಧ ಧ್ವನಿಎತ್ತಿದ ನಟಭಯಂಕರ

ಇನ್ನು ಜೇಮ್ಸ್ ಸಿನಿಮಾದ ಶೂಟಿಂಗ್ ಮುಕ್ತಾಯದ ಹಂತ ತಲುಪಿದ್ದರೂ ಡಬ್ಬಿಂಗ್ ಇನ್ನು ಆರಂಭವಾಗಿರಲಿಲ್ಲ. ಹೀಗಾಗಿ ಚಿತ್ರತಂಡ ಪುನೀತ್ ಧ್ವನಿಗಾಗಿ ಶಿವರಾಜ್ ಕುಮಾರ್ ಮೊರೆ ಹೋಗಲು ತೀರ್ಮಾನಿಸಿದೆ.

ಇದನ್ನೂ ಓದಿ :  2 ಕಣ್ಣುಗಳ ಮೂಲಕ ನಾಲ್ಕು ಮಂದಿಗೆ ದೃಷ್ಟಿ ನೀಡಿದ ಪುನೀತ್‌ ರಾಜ್‌ ಕುಮಾರ್‌

ಚಿತ್ರತಂಡಕ್ಕೆ ಅಗತ್ಯ ಸಹಾಯ ನೀಡಲು ನಾನು ಸಿದ್ಧ ಎಂದು ಈಗಾಗಲೇ ಶಿವರಾಜ್ ಕುಮಾರ್ ಕೂಡ ಘೋಷಿಸಿದ್ದಾರೆ. ಹೀಗಾಗಿ ಜೇಮ್ಸ್ ಚಿತ್ರ ನಿರಾತಂಕವಾಗಿ ತೆರೆಗೆ ಬರೋದು ನಿಶ್ಚಿತವಾಗಿದೆ. ಇನ್ನೂ ಪುನೀತ್ ನಟನೆಯ ಕೊನೆಯ ಚಿತ್ರವಾಗಿರೋ ಜೇಮ್ಸ್ ಬಗ್ಗೆ ಅಭಿಮಾನಿಗಳು ಕುತೂಹಲದಿಂದ ಕಾಯ್ತಿದ್ದಾರೆ.

(Puneeth Raj Kumar to the screen again by James Movie with Voice Shivaraj Kumar)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular