puneeth rajkumar :‘ಗಂಧದಗುಡಿ’ ಮೂಲಕ ಮತ್ತೊಮ್ಮೆ ಕರುನಾಡಿನಲ್ಲಿ ಜೀವಿಸಿದ ಅಪ್ಪು: ನಿರೀಕ್ಷೆಯಂತೆ ಕನ್ನಡಿಗರ ಮನಗೆದ್ದ ಅಪ್ಪು ಕನಸು

puneeth rajkumar :ಪುನೀತ್​ ರಾಜ್​​ಕುಮಾರ್​ ನಮ್ಮನ್ನೆಲ್ಲ ಅಗಲಿ ಒಂದು ವರ್ಷ ಕಳೆಯಲು ಇನ್ನೇನು ಒಂದು ದಿನ ಬಾಕಿ ಇದೆ. ಆದರೆ ಅಪ್ಪು ತಮ್ಮ ಸಿನಿಮಾದ ಮೂಲಕ ಮತ್ತೆ ಮತ್ತೆ ಅಭಿಮಾನಿಗಳ ಎದುರು ಬರ್ತಾನೇ ಇದ್ದಾರೆ. ಜೇಮ್ಸ್​ ಸಿನಿಮಾವೇ ಅಪ್ಪುವಿನ ಕೊನೆ ಸಿನಿಮಾ ಅಂತಾ ಹೇಳಲಾಗಿತ್ತು.ಆದರೆ ಅಪ್ಪು ಲಕ್ಕಿಮ್ಯಾನ್​ ಸಿನಿಮಾದ ಮೂಲಕ ಮತ್ತೆ ಅಭಿಮಾನಿ ದೇವರುಗಳ ಎದುರು ಪ್ರತ್ಯಕ್ಷರಾಗಿದ್ರು. ಇದೀಗ ಗಂಧದಗುಡಿ ಡಾಕ್ಯೂಮೆಂಟರಿ ಮೂಲಕ ಮತ್ತೊಮ್ಮೆ ಅಪ್ಪು ಕನ್ನಡಿಗರ ಎದುರು ನಿಂತಿದ್ದಾರೆ. ತಾವು ಸಾಕಷ್ಟು ನಿರೀಕ್ಷೆ ಹಾಗೂ ಕನಸುಗಳನ್ನು ಇಟ್ಟುಕೊಂಡಿದ್ದ ಗಂಧದಗುಡಿ ಪ್ರಾಜೆಕ್ಟ್​ ಇದೀಗ ಬೆಳ್ಳಿ ಪರದೆಯ ಮೇಲೆ ರಾರಾಜಿಸುತ್ತಿದೆ.


ಪುನೀತ್​ ರಾಜ್​ಕುಮಾರ್​ ತಾವು ನಿಧನರಾಗುವ ಎರಡು ದಿನಗಳ ಹಿಂದೆ ಗಂಧದಗುಡಿ ಪ್ರಾಜೆಕ್ಟ್​ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಆದರೆ ಈ ಪೋಸ್ಟ್​ ಶೇರ್​ ಮಾಡಿದ್ದ ಕೇವಲ ಎರಡೇ ದಿನಕ್ಕೆ ಅವರು ನಿಧನರಾಗಿದ್ದರು. ವಿಪರ್ಯಾಸ ಅಂದರೆ ಒಂದು ವರ್ಷದ ಬಳಿಕ ಅದೇ ದಿನದಂದು ಪುನೀತ್​ ರಾಜ್​ಕುಮಾರ್​​​ ಸೋಶಿಯಲ್​ ಮೀಡಿಯಾ ಖಾತೆಗಳಿಂದ ಗಂಧದಗುಡಿ ಸಿನಿಮಾ ಸಂಬಂಧಿ ಪೋಸ್ಟ್​ಗಳು ಶೇರ್​ ಆಗಿವೆ. ಒಂದು ಗಂಟೆ ಮೂವತ್ತೇಳು ನಿಮಿಷ ಅವಧಿಯ ಈ ಗಂಧದ ಗುಡಿ ಅಭಿಮಾನಿಗಳ ಮನಗೆಲ್ಲುವಲ್ಲಿ ಸಂಪೂರ್ಣ ಯಶಸ್ವಿಯಾಗಿದೆ.


ಡಾ.ರಾಜ್​ಕುಮಾರ್​ ಅಭಿನಯದ ಗಂಧದಗುಡಿ ಸಿನಿಮಾ ಈಗಲೂ ಕೂಡ ಚಂದನವನದ ದಂತಕತೆಗಳ ಸಾಲಿನಲ್ಲಿ ಸೇರಿದೆ. ಇದಾದ ಬಳಿಕ ಶಿವರಾಜ್​ಕುಮಾರ್​ ಗಂಧದ ಗುಡಿ 2 ಸಿನಿಮಾವನ್ನು ಮಾಡಿ ಅಭಿಮಾನಿಗಳು ಕಾಡಿನ ರಕ್ಷಣೆಯ ಸಂದೇಶ ಸಾರಿದ್ದರು. ಇದೀಗ ಪುನೀತ್​ ರಾಜ್​ಕುಮಾರ್​ ಕೂಡ ಗಂಧದಗುಡಿಯ ಭಾಗವಾಗಿದ್ದಾರೆ. ಆದರೆ ಇವರು ಯಾವುದೇ ಕಾಲ್ಪನಿಕ ಕತೆಯ ಮೂಲಕ ಅರಣ್ಯ ರಕ್ಷಣೆಯ ಸಂದೇಶ ಸಾರಿಲ್ಲ. ಬದಲಾಗಿ ತಾವೇ ಕಾಡಿನಲ್ಲಿದ್ದು ಪ್ರಕೃತಿಯೊಂದಿಗೆ ಬೆರೆತು ಒಂದೊಳ್ಳೆ ಜರ್ನಿಯನ್ನು ಮಾಡಿದ್ದಾರೆ.


ನಾಗರಹೊಳೆಯಿಂದ ಆರಂಭವಾಗುವ ಪುನೀತ್​ರಾಜ್​ಕುಮಾರ್​ ಪಯಣ ಡಾ.ರಾಜ್​ಕುಮಾರ್​ ಜನಿಸಿದ ಗಾಜನೂರಿಗೆ ತಲುಪುತ್ತೆ.ಇದಾದ ಬಳಿಕ ಬಿಆರ್​ಟಿ ಟೈಗರ್​ ರಿಸರ್ವ್, ವಿಜಯನಗರ, ದಾಂಡೇಲಿ ಹೀಗೆ ಮಲೆನಾಡು, ಬೆಟ್ಟ- ಗುಡ್ಡ, ಆನೆ ಕ್ಯಾಂಪ್​ಗಳು, ಕಾಳಿ ಹಾಗೂ ತುಂಗಭದ್ರಾ ನದಿ , ಕರಾವಳಿ ತೀರ, ಹೀಗೆ ಎಲ್ಲಾ ಕಡೆ ಸುತ್ತಿದ್ದಾರೆ. ಕುರಿಗಾಹಿಗಳ ಜೊತೆ ಕುಳಿತು ಊಟ ಮಾಡುವ ಅಪ್ಪು ದೊಡ್ಡ ನಟನಂತೆ ಕಾಣೋದೇ ಇಲ್ಲ. ಬದಲಾಗಿ ಒಬ್ಬ ಪುಟ್ಟ ಮಗುವಿನಂತೆ ಎನಿಸುತ್ತಾರೆ. ಅಷ್ಟರ ಮಟ್ಟಿಗೆ ಪುನೀತ್​ ಕರುನಾಡಿನ ಪ್ರತಿಯೊಬ್ಬ ಕನ್ನಡಿಗನ ಮನಸಲ್ಲಿ ರಾರಾಜಿಸುತ್ತಾರೆ.


ವಿಶೇಷ ಅಂದರೆ ಈ ಡಾಕ್ಯೂಮೆಂಟರಿಯಲ್ಲಿ ಅಶ್ವಿನಿ ಪುನೀತ್​ರಾಜ್​ಕುಮಾರ್​ ಕೂಡ ಇದ್ದಾರೆ. ಗಂಧದ ಗುಡಿ ನೋಡುವ ಆ ಒಂದೂವರೆ ಗಂಟೆಯಲ್ಲಿ ಅಪ್ಪು ಈಗ ನಮ್ಮೊಂದಿಗಿಲ್ಲ ಎಂಬ ವಾಸ್ತವವೊಂದು ಸಂಪೂರ್ಣ ಮರೆತೇ ಹೋಗುತ್ತೆ. ಪುನೀತ್​ ಇನ್ನೂ ನಮ್ಮೊಂದಿಗೆ ಇದ್ದಾರೆ ಎಂಬ ಭಾವದಲ್ಲಿಯೇ ಪ್ರೇಕ್ಷಕ ಇದನ್ನು ನೋಡುತ್ತಾನೆ. ನಿರ್ದೇಶಕ ಅಮೋಘವರ್ಷ ಕೂಡ ಪುನೀತ್​​ ಅಭಿಮಾನಿಗಳಿಗೆ ಒಂದಿಂಚೂ ಬೇಸರವೆನಿಸದಂತೆ ಈ ಅದ್ಭುತ ಅನುಭವವನ್ನು ಕಟ್ಟಿಕೊಟ್ಟಿದ್ದಾರೆ. ಒಂದೂವರೆ ಗಂಟೆಗಳ ಕಾಲ ನಗುಮೊಗದಲ್ಲೇ ಕಾಣುವ ಆ ಅಪ್ಪು ಮುಖ ಸಿನಿಮಾ ಥಿಯೇಟರ್​ನಿಂದ ಹೊರಬಂದ ಬಳಿಕವೂ ಪ್ರೇಕ್ಷಕನ ಎದೆಯಲ್ಲಿ ಹಾಗೆ ಉಳಿಯುತ್ತಿದೆ.

ಇದನ್ನು ಓದಿ : Head Bush issue solved: ‘ಹೆಡ್ ಬುಶ್’ ವಿವಾದ ಅಂತ್ಯ; ಕ್ಷಮೆ ಕೋರಿ ಆಕ್ಷೇಪಾರ್ಹ ಪದ ತೆಗೆಯಲು ಒಪ್ಪಿದ ಚಿತ್ರತಂಡ

ಇದನ್ನೂ ಓದಿ : Anand Mahindra:ಒಂದೇ ಬಾರಿಗೆ 15 ಚಿತ್ರಗಳನ್ನು ಒಟ್ಟಿಗೆ ಬಿಡಿಸಿದ ಯುವತಿ : ಭೇಷ್​ ಎಂದ ಆನಂದ್​ ಮಹೀಂದ್ರಾ,ಅನುಮಾನ ವ್ಯಕ್ತಪಡಿಸಿದ ನೆಟ್ಟಿಗರು

puneeth rajkumar amoghavarsha starrer gandhada gudi movie review rating in kannada

Comments are closed.