Elon Musk: ಎಲೋನ್‌ ಮಸ್ಕ್‌ ಟ್ವಿಟರ್‌ ನ ಹೊಸ ಮಾಲಿಕ; ಸಿಇಓ ಪರಾಗ್‌ ಅಗರ್ವಾಲ್‌ ವಜಾ

ಎಲೋನ್‌ ಮಸ್ಕ್‌ (Elon Musk) ಅಧಿಕೃತವಾಗಿ ಟ್ವಿಟರ್‌ (Twitter) ನ ಹೊಸ ಮಾಲಿಕರಾಗಿದ್ದಾರೆ. ಟ್ವಿಟರ್ ಸ್ವಾಧೀನಪಡಿಸಿಕೊಳ್ಳುವುದರ ಮೂಲಕ ಅವರು ಸಾಮಾಜಿಕ ಮಾಧ್ಯಮ (Social Media) ಕಂಪನಿಯ ಹೊಸ ಮುಖ್ಯಸ್ಥರಾಗಿದ್ದಾರೆ. ಕಂಪನಿಯ ಮುಖ್ಯಸ್ಥರಾಗಿ ಅಧಿಕಾರವಹಿಸಿಕೊಂಡ ಬೆನ್ನಲ್ಲೇ ಉನ್ನತ ಕಾರ್ಯನಿರ್ವಾಹಕರನ್ನು ವಜಾಗೊಳಿಸಲಾಗಿದೆ. ಟ್ವಿಟರ್ ಸಿಇಒ ಪರಾಗ್ ಅಗರವಾಲ್, ಮುಖ್ಯ ಹಣಕಾಸು ಅಧಿಕಾರಿ ನೆಡ್ ಸೆಗಲ್, ಕಂಪನಿಯ ನೀತಿ ಮುಖ್ಯಸ್ಥ ವಿಜಯ ಗಡ್ಡೆ ಅವರನ್ನು ಕಂಪನಿಯಿಂದ ವಜಾಗೊಳಿಸಲಾಗಿದೆ. ವಿವಿಧ ಮೂಲಗಳು ವರದಿ ಮಾಡಿದಂತೆ ಹೆಚ್ಚಿನ ಉದ್ಯೋಗ ಕಡಿತವನ್ನು ನಿರೀಕ್ಷಿಸಲಾಗಿರುವುದರಿಂದ ಟ್ವಿಟರ್ ಉದ್ಯೋಗಿಗಳಿಗೆ ಭಯವು ಹೆಚ್ಚಿದೆ.

ಉನ್ನತ ಕಾರ್ಯನಿರ್ವಹಣಾಧಿಕಾರಿಗಳನ್ನು ವಜಾಗೊಳಿಸಿದ ನಂತರ, ಎಲೋನ್ ಮಸ್ಕ್ ‘ಬರ್ಡ್‌ ಈಸ್‌ ಫ್ರೀಡ್‌’ ಎಂದು ಹೇಳಿದ್ದಾರೆ. ಜಾಕ್ ಡೋರ್ಸೆ ಅವರ ನಂತರ ಟ್ವಿಟರ್ ಸಿಇಒ ಆಗಿ ಅಧಿಕಾರ ವಹಿಸಿಕೊಂಡ ಪರಾಗ್ ಅಗರವಾಲ್, ನೆಡ್ ಸೆಗಲ್ ಅವರನ್ನು ವಜಾಗೊಳಿಸುವ ಸಮಯದಲ್ಲಿ ಟ್ವಿಟರ್ ಕಚೇರಿಯಲ್ಲಿದ್ದರು ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಇನ್ಸೈಡರ್ ವರದಿಯ ಪ್ರಕಾರ ಪರಾಗ್‌ ಅಗರವಾಲ್ $38.7 ಮಿಲಿಯನ್, ನೆಡ್‌ ಸೆಗಲ್ $25.4 ಮಿಲಿಯನ್, ವಿಜಯ್‌ ಗಡ್ಡೆ $12.5 ಮಿಲಿಯನ್ ಮತ್ತು ಪರ್ಸೋನೆಟ್ $11.2 ಮಿಲಿಯನ್ ಪಡೆದು ಹೊರಹೋಗಿದ್ದಾರೆ.

ಟ್ವಿಟರ್‌ ಹೊಸ ಮಾಲಿಕ ಎಲೋನ್‌ ಮಸ್ಕ್‌ ಮುಂದಿನ ನಡೆ ಏನು?
ಟ್ವಿಟರ್‌ ಹೊಸ ಮಾಲಿಕ ಎಲೋನ್‌ ಮಸ್ಕ್‌ ಮುಂದಿನ ನಡೆ ಏನಿರಬಹುದೆಂಬುದು ಕುತೂಹಲ ಹೆಚ್ಚಿಸಿದೆ. ಈಗಾಗಲೇ ಮಾಡಿರುವ ಬದಲಾಣೆಗಳ ಪ್ರಕಾರ ಪ್ರಮುಖ ಸಿಬ್ಬಂದಿಗಳ ಬದಲಾವಣೆ ನಿರೀಕ್ಷಿಸಲಾಗಿದೆ. ಟ್ವಿಟರ್‌ನ ಚಂದಾದಾರರ ಮೂಲ ಮತ್ತು ಆದಾಯವನ್ನು ಹೆಚ್ಚಿಸಬಹುದು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : Kantara America : ಅಮೇರಿಕಾದಲ್ಲೂ ದೈವಗಗ್ಗರದ ಅಬ್ಬರ : ಎಂಟೂವರೆ ಕೋಟಿ ಗಳಿಸಿದ ಕಾಂತಾರ

ಇದನ್ನೂ ಓದಿ : Road Accident , 3 died : ಅಮೇರಿಕಾದಲ್ಲಿ ಭೀಕರ ರಸ್ತೆ ಅಪಘಾತ ; ಮೂವರು ಭಾರತೀಯ ವಿದ್ಯಾರ್ಥಿಗಳು ಸಾವು

(Elon Musk officially took over as twitter boss, top executives sacked)

Comments are closed.