ಭಾನುವಾರ, ಏಪ್ರಿಲ್ 27, 2025
HomeCinemaPRK : ನನಸಾಗಲಿದೆ ಪುನೀತ್ ಕನಸು : ಅಶ್ವಿನಿ ಮಹತ್ವದ ಘೋಷಣೆ

PRK : ನನಸಾಗಲಿದೆ ಪುನೀತ್ ಕನಸು : ಅಶ್ವಿನಿ ಮಹತ್ವದ ಘೋಷಣೆ

- Advertisement -

ಪುನೀತ್ ರಾಜ್ ಕುಮಾರ್ ಸ್ಯಾಂಡಲ್ ವುಡ್ ನ ಕನಸುಗಾರ ಹೀರೋ. ತಮ್ಮ‌ ಕೆರಿಯರ್ ಜೊತೆ ಚಿತ್ರರಂಗದ ಕಿರಿಯರಿಗಾಗಿಯೂ ಹಲವು ಪ್ರಾಜೆಕ್ಟ್ ಸಿದ್ಧಪಡಿಸಿದ್ದರು. ಪ್ರೊಡಕ್ಷನ್ ಹೌಸ್ (PRK) ಮೂಲಕ ಹೊಸಬರಿಗೆ ಆಶ್ರಯತಾಣವಾಗಿದ್ದರು. ಆದರೇ ಎಲ್ಲ ಕನಸುಗಳನ್ನು ಅರ್ಧಕ್ಕೆ ಬಿಟ್ಟು ಎದ್ದು ಹೋಗಿದ್ದಾರೆ. ಈಗ ಈ ಕನಸುಗಳನ್ನು ನನಸಾಗಿಸಲು ಅಶ್ವಿನಿ ಸಿದ್ಧವಾಗಿದ್ದು ಅಭಿಮಾನಿಗಳಿಗೆ ಸಿಹಿಸುದ್ದಿ‌ನೀಡಿದ್ದಾರೆ.

ಪುನೀತ್ ನಿಧನದ ಬಳಿಕ ಅವರ ಎಲ್ಲ ವ್ಯವಹಾರಗಳನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್ ನೋಡಿಕೊಳ್ಳುತ್ತಿದ್ದಾರೆ. ಇದಕ್ಕೆ ಪಿಆರ್ ಕೆ ಪ್ರೊಡಕ್ಷನ್ ಹೌಸ್ ಕೂಡ ಹೊರತಲ್ಲ. ಪಿಆರ್ ಕೆ ಪ್ರೊಡಕ್ಷನ್ ಹೌಸ್ ಮೂಲಕ ಪುನೀತ್ ಕಂಡಿದ್ದ ಕನಸುಗಳನ್ನು ನನಸಾಗಿಸಲು ಅಶ್ವಿನಿ ಮುಂದಾಗಿದ್ದು ಮಹತ್ವದ ಘೋಷಣೆ ಮಾಡಿದ್ದಾರೆ.

ವೈಲ್ಡ್ ಕರ್ನಾಟಕ ಡಾಕ್ಯುಮೆಂಟರಿ ಮಾಡಿದ್ದ ಅಮೋಘವರ್ಷ ಜೊತೆ ಸೇರಿ ಪುನೀತ್ ರಾಜ್ ಕುಮಾರ್ ಕರ್ನಾಟಕದ ಬಗ್ಗೆ ಸಾಕ್ಷ್ಯಚಿತ್ರವೊಂದನ್ನು ಸಿದ್ಧಪಡಿಸಲು ಮುಂದಾಗಿದ್ದರು. ಈ ಸಾಕ್ಷ್ಯಚಿತ್ರಕ್ಕೆ ಗಂಧದಗುಡಿ ಎಂದು ಹೆಸರಿಡಲಾಗಿತ್ತು. ಈ ಸಾಕ್ಷ್ಯ ಚಿತ್ರವನ್ನು ಪುನೀತ್ ಸ್ವತಃ ರಾಜ್ಯದ ಎಲ್ಲೆಡೆ ಓಡಾಡಿ ಶೂಟ್ ಮಾಡಿಸಿದ್ದರು. ಈ ಸಾಕ್ಷ್ಯ ಚಿತ್ರದಲ್ಲಿ ಪುನೀತ್ ಕೂಡ ಕಾಣಿಸಿಕೊಂಡಿದ್ದರು.

ಎಲ್ಲ ಅಂದುಕೊಂಡಂತೆ ಆಗಿದ್ದರೇ ನವೆಂಬರ್ ೧ ಕನ್ನಡ ರಾಜ್ಯೋತ್ಸವದಂದು ಗಂಧದಗುಡಿಯ ಟೀಸರ್ ಕೂಡಬಿಡುಗಡೆಯಾಗಬೇಕಿತ್ತು. ಆದರೆ ಪುನೀತ್ ಅಗಲಿಕೆ ಈ ಎಲ್ಲ ಕನಸು ಗಳನ್ನು ಅರ್ಧಕ್ಕೆ ಬಿಟ್ಟು ಹೋಗುವಂತೆ ಮಾಡಿತ್ತು. ಗಂಧದಗುಡಿ ಟೀಸರ್ ರಿಲೀಸ್ ಬಗ್ಗೆ ತುಂಬ ಎಕ್ಸೈಟ್ ಆಗಿದ್ದ ಪುನೀತ್ ನಿಧನದ ಕೆಲವು ದಿನ ಮೊದಲು ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು.ನಮ್ಮ ಜನ ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು. ನಮ್ಮ ಅಡವಿಯ ಹಸಿರನ್ನು ಜಗತ್ತಿಗೆ ಹರಡಿತ್ತು. ಪೀಳಿಗೆಗೆ ಸ್ಪೂರ್ತಿ ನೀಡಿ ಅಜರಾಮರವಾಗಿತ್ತು. ಆ ಚರಿತ್ರೆ ಮರಳುವ ಸಮಯವೀಗ ಬಂದಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದರು.

ಅಲ್ಲದೇ ಇದಕ್ಕಾಗಿ‌ ನವೆಂಬರ್ 1 ರವರೆಗೆ ಕಾಯುವಂತೆಯೂ ಹೇಳಿದ್ದರು. ಆದರೆ ನವೆಂಬರ್ 1 ಬೆಳಗಾಗುವ ಹೊತ್ತಿಗೆ ಪುನೀತ್ ನೆನಪಿನ ಬುತ್ತಿ ಸೇರಿದ್ದರು. ಈಗ‌ ಈ ಕನಸಿಗೆ ಮತ್ತೆ ಜೀವ ಬಂದಿದೆ. ಪುನೀತ್ ಪತ್ನಿ ಅಶ್ವಿನಿ, ಈ ಬಗ್ಗೆ ಪಿಆರ್ ಕೆ ಪ್ರೊಡಕ್ಷನ್ ಕಡೆಯಿಂದ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದು, ಅಪ್ಪು ಅವರ ಕನಸೊಂದು 1/11/2021 ರಂದು ಬೆಳಕು ಕಾಣಬೇಕಿತ್ತು. ಆದರೆ ಈ ಕನಸಿಗಿದು ಅಲ್ಪವಿರಾಮವಷ್ಟೇ. ಅದನ್ನು ಅವರಿಷ್ಟದಂತೆ ನನಸಾಗಿಸುವ ಜವಾಬ್ದಾರಿ ನಮ್ಮದು. ಇಲ್ಲಿಯವರೆಗೆ ನೀವು ತೋರಿದ ಸಂಯಮ ಮತ್ತು ಸಹಕಾರಕ್ಕೆ ನಾವು ಆಭಾರಿ ಎಂದು ಅಶ್ವಿನಿ ಟ್ವೀಟ್ ಮಾಡಿದ್ದಾರೆ. ಹೀಗಾಗಿ ಪುನೀತ್ ಗಂಧದಗುಡಿ ಸಾಕ್ಷ್ಯಚಿತ್ರ‌ ಸದ್ಯವೇ ತೆರೆಕಾಣಲಿದೆ ಎಂಬ ಭರವಸೆ ಮೂಡಿದೆ.

ಇದನ್ನೂ ಓದಿ : ತಂದೆಯ ಪಕ್ಕ ಪುತ್ರ ಅಮರ: ಬಿಬಿಎಂಪಿ ಆವರಣದಲ್ಲಿ ಪುನೀತ್ ಪುತ್ಥಳಿ ನಿರ್ಮಾಣಕ್ಕೆ ಸಿದ್ಧತೆ

ಇದನ್ನೂ ಓದಿ : Kiccha Sudeep : ರೈತನ ಮಗನ ಕಷ್ಟಕ್ಕೆ ಸ್ಪಂದಿಸಿದ ಕಿಚ್ಚ ಸುದೀಪ್ : ಕಾಲೇಜ್ ಪೀಸ್ ಕಟ್ಟಿದ ಬಾದ್ ಷಾ

( Puneeth Rajkumar dream to be fulfilled, PRK Ashwini Puneeth Rajkumar)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular