BJP – Congress : ಬಿಜೆಪಿ ಅಂಗಡಿಯಲ್ಲಿ ಪ್ರಭಾವ ನೋಡಿ ಸುಣ್ಣ-ಬೆಣ್ಣೆ: ಟ್ವೀಟ್ ನಲ್ಲಿ ಕುಟುಕಿದ ಕಾಂಗ್ರೆಸ್

ಪರಿಷತ್ ಚುನಾವಣೆ ರಂಗೇರುತ್ತಿರುವ ಬೆನ್ನಲ್ಲೇ, ಬಿಜೆಪಿ ಮತ್ತು ಕಾಂಗ್ರೆಸ್ ( BJP – Congress) ನಡುವಿನ ವಾಕ್ಸಮರ್, ಟ್ವೀಟ್ ಸಮರವೂ ಜೋರಾಗಿದೆ. ಒಂದೆಡೆ ಮಗನಿಗೆ ಕಾಂಗ್ರೆಸ್ ಟಿಕೇಟ್ ಕೊಡಿಸಿದ್ದಕ್ಕೆ ಎ.ಮಂಜು ವಿರುದ್ಧ ಬಿಜೆಪಿ ಸಮರ ಸಾರಿದ್ದರೇ, ಬಿಜೆಪಿ ಕ್ರಮಕ್ಕೆ ಸವಾಲೆಸೆದಿರುವ ಕಾಂಗ್ರೆಸ್ ಇದೇ ಶಿಸ್ತುಕ್ರಮವನ್ನು ಜಾರಕಿಹೊಳಿ ಬ್ರದರ್ಸ್ ವಿರುದ್ಧ ಕ್ರಮ ಕೈಗೊಳ್ಳುವ ಸಾಮರ್ಥ್ಯ ನಿಮಗಿದ್ಯಾ ಎಂದು ಟ್ವೀಟ್ ಮಾಡಿದೆ.

ಪರಿಷತ್ ಚುನಾವಣೆಗೆ ಮಾಜಿ ಸಚಿವ ಎ.ಮಂಜು ಇನ್ನಿಲ್ಲದ ಸರ್ಕಸ್ ನಡೆಸಿ ಕಾಂಗ್ರೆಸ್ ನಿಂದ‌ ಮಗನಿಗೆ ಟಿಕೇಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಇದೇ ಕಾರಣಕ್ಕೆ ನಿಮ್ಮ ನಡೆ ಸಂಶಯ ಮೂಡಿಸಿದೆ ಎಂದಿದ್ದ ರಾಜ್ಯ ಬಿಜೆಪಿ ಶಿಸ್ತು ಕಮಿಟಿ ಅಧ್ಯಕ್ಷ ಲಿಂಗ್ ರಾಜ್ ಪಾಟೀಲ್, ಪಕ್ಷದ ಜವಾಬ್ದಾರಿಗಳಿಂದ ನಿಮ್ಮನ್ನು ಮುಕ್ತಗೊಳಿಸಲಾಗಿದೆ ಎಂದು ಎ.ಮಂಜುಗೆ ಆದೇಶಿಸಿತ್ತು.

ಬಿಜೆಪಿಯ ಕ್ರಮವನ್ನು ಟೀಕಿಸಿರುವ ಕಾಂಗ್ರೆಸ್ ಟ್ವೀಟ್ ವಾರ್ ನಡೆಸಿದೆ. ಬಿಜೆಪಿಯ ಬ್ರಹ್ಮಾಸ್ತ್ರ ಗುಬ್ಬಿಯ ಮೇಲೆ ಮಾತ್ರ ಎಂದಿರುವ ಕಾಂಗ್ರೆಸ್ ಲಖನ್ ಜಾರಕಿಹೊಳಿ ಬಂಡಾಯಕ್ಕೆ ಬಾಲಚಂದ್ರ ಹಾಗೂ ರಮೇಶ್ ಜಾರಕಿಹೊಳಿ ಮೇಲೆ ಕ್ರಮಕೈಗೊಳ್ಳಲಾಗಿಲ್ಲ ಎಂದು ಟೀಕಿಸಿದೆ. ಮಾತ್ರವಲ್ಲ ಬಿಜೆಪಿ ಅಂಗಡಿಯಲ್ಲಿ ಪ್ರಭಾವ ನೋಡಿ ಸುಣ್ಣ ಬೆಣ್ಣೆ ಹಂಚಲಾಗುತ್ತದೆ ಎಂದು ಟ್ವೀಟ್ ನಲ್ಲಿ ಕೈ ನಾಯಕರು ವ್ಯಂಗ್ಯವಾಡಿದ್ದಾರೆ.

ಬಿಜೆಪಿ ಕ್ರಮವನ್ನು ಎತ್ತಿಗೆ ಜ್ವರ ಬಂದ್ರೇ ಎಮ್ಮೆಗೆ ಬರೆ ಎಂದು ಟೀಕಿಸಿರುವ ಕಾಂಗ್ರೆಸ್, ಮಂಥರ್ ಗೌಡ ಕಾಂಗ್ರೆಸ್ ನಿಂದ ಸ್ಪರ್ಧಿಸುತ್ತಿರುವುದಕ್ಕೆ ಎ.ಮಂಜು ವಿರುದ್ಧ ಬಿಜೆಪಿ ಶಿಸ್ತುಕ್ರಮ‌ಕೈಗೊಂಡಿದೆ. ಲಖನ್ ಜಾರಕಿಹೊಳಿ ಬಂಡಾಯ ಹಾಗೂ ಸ್ಪರ್ಧೆಗೆ ರಮೇಶ್ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ವಿರುದ್ಧವೂ ಇದೇ ಕ್ರಮ‌ ಜರುಗಿಸುವ ಧೈರ್ಯವಿದೆಯೇ ಬಿಜೆಪಿಗೆ? ಅಥವಾ ಉತ್ತರ ಕುಮಾರನ ಪೌರುಷ ಒಲೆ ಮುಂದೇ ಮಾತ್ರವೇ ಎಂದು ಪ್ರಶ್ನಿಸಿದೆ.

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ವೇಳೆ ಬಿಜೆಪಿ ಬೆಂಬಲ‌ ನೀಡಿದ್ದ ಲಖನ್ ಜಾರಕಿಹೊಳಿ ಬಿಜೆಪಿಯಿಂದ ಪರಿಷತ್ ಟಿಕೇಟ್ ಆಕಾಂಕ್ಷಿಯಾಗಿದ್ದರು. ಆದರೆ ಬಿಜೆಪಿ ಟಿಕೇಟ್ ನೀಡದ ಹಿನ್ನೆಲೆಯಲ್ಲಿ ಬಂಡಾಯವೆದ್ದಿದ್ದು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಇದಕ್ಕೆ ಸಹೋದರರಾದ ರಮೇಶ್ ಜಾರಕಿಹೊಳಿ ಮತ್ತು ಬಾಲಚಂದ್ರ್ ಜಾರಕಿಹೊಳಿ ಬೆಂಬಲ ನೀಡಿದ್ದಾರೆ ಎನ್ನಲಾಗುತ್ತಿದೆ. ಈ ವಿಚಾರ ರಾಜಕೀಯ ವಲಯದಲ್ಲಿ ಚರ್ಚೆಗೂ ಕಾರಣವಾಗಿದೆ. ಇದೇ ಕಾರಣಕ್ಕೆ ಕಾಂಗ್ರೆಸ್ ಟ್ವೀಟ್ ನಲ್ಲಿ ಬಿಜೆಪಿ ಯನ್ನು ಕೆಣಕಿದೆ.

ಇದನ್ನೂ ಓದಿ : ಸಾವಿಗೂ ಎರಡು ದಿನ ಮೊದಲು ಸಿಎಂಗೆ ಅಪ್ಪು ಕಾಲ್ : ಕರೆ ಮಾಡಿ ಕೇಳಿದ್ದೇನು ಗೊತ್ತಾ?

ಇದನ್ನೂ ಓದಿ : BJP Gate Pass : ಮಗನಿಗೆ ಕಾಂಗ್ರೆಸ್ MLC ಟಿಕೆಟ್ : ಅಪ್ಪನಿಗೆ ಬಿಜೆಪಿ ಗೇಟ್ ಪಾಸ್

( BJP Congress Twitter War on MLC ticket )

Comments are closed.