David Warner : ಮುಂಬೈನ ಬೀದಿಯಲ್ಲಿ ಕ್ಯಾಬ್ ಡ್ರೈವರ್ ಜೊತೆ ಸೆಲ್ಫಿ ಕ್ಲಿಕ್ಕಿಸಿದ ಡೇವಿಡ್ ವಾರ್ನರ್, ಫೋಟೋ ವೈರಲ್

ಮುಂಬೈ : ಆಸ್ಟ್ರೇಲಿಯಾ ತಂಡದ ಎಡಗೈ ಆರಂಭಿಕ ಬ್ಯಾಟ್ಸ್’ಮನ್ ಡೇವಿಡ್ ವಾರ್ನರ್ (David Warner) ಭಾರತದಲ್ಲಿ ತುಂಬಾನೇ ಫೇಮಸ್. ವಾರ್ನರ್ ಅವರಿಗೆ ಭಾರತದಲ್ಲಿ ದೊಡ್ಡ ಸಂಖ್ಯೆಯ ಅಭಿಮಾನಿ ಬಳಗವಿದೆ. ಕಾರಣ ಐಪಿಎಲ್.2008ರಿಂದ ಐಪಿಎಲ್ ಆಡುತ್ತಿರುವ ಡೇವಿಡ್ ವಾರ್ನರ್ ಭಾರತದಲ್ಲಿ ದೊಡ್ಡ ಅಭಿಮಾನಿ (David Warner Selfie) ಬಳಗವನ್ನೇ ಸಂಪಾದಿಸಿದ್ದಾರೆ.

ಇನ್’ಸ್ಟಾಗ್ರಾಂನಲ್ಲಿ ಆಗಾಗ ಭಾರತದ ಸಿನಿಮಾ ಪಾತ್ರಗಳಿಗೆ ತಮ್ಮ ಫೋಟೋ ಅಥವಾ ವೀಡಿಯೊಗಳನ್ನು ಕಟ್ & ಪೇಸ್ಟ್ ಮಾಡಿ ಅಭಿಮಾನಿಗಳನ್ನು ರಂಜಿಸುತ್ತಲೇ ಇರುತ್ತಾರೆ. ಇದೀಗ ಮುಂಬೈನ ಬೀದಿಯಲ್ಲಿ ಕ್ಯಾಬ್ ಡ್ರೈವರ್ ಜೊತೆ ಸೆಲ್ಫಿ ಕ್ಕಿಕ್ಲಿಸುವ ಮೂಲಕ ವಾರ್ನರ್ ಗಮನ ಸೆಳೆದಿದ್ದಾರೆ. ಭಾರತ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗಾಗಿ ಡೇವಿಡ್ ವಾರ್ನರ್ ಕೆಲ ದಿನಗಳ ಹಿಂದೆ ಆಸ್ಟ್ರೇಲಿಯಾದಿಂದ ಮುಂಬೈಗೆ ಬಂದಿಳಿದಿದ್ದರು.

ಛತ್ರವತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಆಸೀಸ್ ತಂಡ ತಂಗಿರುವ ಹೋಟೆಲ್’ಗೆ ತೆರಳುವ ಹಾದಿಯಲ್ಲಿ ತಾವು ಕುಳಿತ ಕಾರಿನಿಂದಲೇ ಪಕ್ಕದ ಕಾರ್’ನಲ್ಲಿದ್ದ ಕ್ಯಾಬ್ ಡ್ರೈವರ್ ಜೊತೆ ಡೇವಿಡ್ ವಾರ್ನರ್ ಸೆಲ್ಫಿ ಕ್ಲಿಕ್ಕಿಸಿದ್ದಾರೆ. ಕ್ಯಾಬ್ ಡ್ರೈವರ್ ಜೊತೆ ಸೆಲ್ಫಿ ಕ್ಕಿಕ್ಕಿಸಿದ್ದಷ್ಟೇ ಅಲ್ಲ, ಮರುದಿನ ಮುಂಬೈ ಬೀದಿಯಲ್ಲಿ ಸ್ಥಳೀಯ ಮಕ್ಕಳೊಂದಿಗೆ ವಾರ್ನರ್ ಕ್ರಿಕೆಟ್ ಕೂಡ ಆಡಿ ಗಮನ ಸೆಳೆದಿದ್ದಾರೆ.

ಭಾರತ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ದಯನೀಯ ವೈಫಲ್ಯ ಎದುರಿಸಿದ್ದ ಡೇವಿಡ್ ವಾರ್ನರ್, ಸರಣಿಯ ಮಧ್ಯದಲ್ಲೇ ಆಸ್ಟ್ರೇಲಿಯಾಗೆ ವಾಪಸ್ ಆಗಿದ್ದರು. ಹೀಗಾಗಿ 3 ಹಾಗೂ 4ನೇ ಟೆಸ್ಟ್ ಪಂದ್ಯಗಳಲ್ಲಿ ವಾರ್ನರ್ ಆಡಿರಲಿಲ್ಲ. ಇದೀಗ 3 ಪಂದ್ಯಗಳ ಏಕದಿನ ಸರಣಿಗೆ ವಾರ್ನರ್ ಆಸೀಸ್ ತಂಡಕ್ಕೆ ಮರಳಿದ್ದಾರೆ. 36 ವರ್ಷದ ಡೇವಿಡ್ ವಾರ್ನರ್ ಐಪಿಎಲ್-16ರ ಟೂರ್ನಿಗೆ ಗುರುವಾರವಷ್ಟೇ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿ ನೇಮಕಗೊಂಡಿದ್ದರು.

ಇದನ್ನೂ ಓದಿ : Yuvraj meets Rishabh Pant : ರಿಷಭ್ ಪಂತ್ ಭೇಟಿ ಮಾಡಿ ಧೈರ್ಯ ತುಂಬಿದ “ದಿ ಫೈಟರ್” ಯುವರಾಜ್ ಸಿಂಗ್

ಇದನ್ನೂ ಓದಿ : Will Jacks out : ಐಪಿಎಲ್ ಆರಂಭಕ್ಕೂ ಮೊದಲೇ ರಾಯಲ್ ಚಾಲೆಂಜರ್ಸ್‌ಗೆ ಶಾಕ್, ಸ್ಟಾರ್ ಆಟಗಾರ ಟೂರ್ನಿಯಿಂದಲೇ ಔಟ್

ಇದನ್ನೂ ಓದಿ : ರಿಷಭ್ ಪಂತ್ ಅನುಪಸ್ಥಿತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್’ಗೆ ಡೇವಿಡ್ ವಾರ್ನರ್ ನಾಯಕ

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕ್ಯಾಪ್ಟನ್ ಆಗಿದ್ದ ರಿಷಭ್ ಪಂತ್ ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ಕಾರಣ ಐಪಿಎಲ್’ಗೆ ಲಭ್ಯರಿಲ್ಲ. ಹೀಗಾಗಿ ಆಸೀಸ್ ಸ್ಟಾರ್ ಡೇವಿಡ್ ವಾರ್ನರ್’ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಪಟ್ಟ ಕಟ್ಟಲಾಗಿದೆ. 2009ರಿಂದ 2013ರವರೆಗೆ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಪರ ಆಡಿದ್ದ ಡೇವಿಡ್ ವಾರ್ನರ್, 2014ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಸೇರಿದ್ದರು. 2022ರ ಐಪಿಎಲ್ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಡೇವಿಡ್ ವಾರ್ನರ್ ಅವರನ್ನು ಬರೋಬ್ಬರಿ 6.25 ಕೋಟಿ ರೂ. ಮೊತಕ್ಕೆ ಖರೀದಿಸಿತ್ತು.

David Warner Selfie: David Warner clicked a selfie with a cab driver on the streets of Mumbai, the photo went viral

Comments are closed.