kishore pattikonda hospitalised : ‘ಜೇಮ್ಸ್​’ ಸಿನಿಮಾ ನಿರ್ಮಾಪಕ ಕಿಶೋರ್​ ಪತ್ತಿಕೊಂಡ ಆಸ್ಪತ್ರೆಗೆ ದಾಖಲು : ಸ್ಥಿತಿ ಗಂಭೀರ

ಬೆಂಗಳೂರು : kishore pattikonda hospitalised : ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ನಟನೆಯ ಕೊನೆಯ ಸಿನಿಮಾ ಜೇಮ್ಸ್​ ಸಿನಿಮಾಗೆ ಬಂಡವಾಳವನ್ನು ಹೂಡಿದ್ದ ಸ್ಯಾಂಡಲ್​ವುಡ್​ನ ಹೆಸರಾಂತ ನಿರ್ಮಾಪಕ ಕಿಶೋರ್​ ಪತ್ತಿಕೊಂಡ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಿಶೋರ್ ಪತ್ತಿಕೊಂಡಗೆ ಅಧಿಕ ರಕ್ತದೊತ್ತಡದಿಂದಾಗಿ ಹೃದಯಾಘಾತ ಸಂಭವಿಸರಬಹುದು ಎಂದು ಮೂಲಗಳು ತಿಳಿಸಿವೆ.

ಕಿಶೋರ್​ ಪತ್ತಿಕೊಂಡ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತಿದ್ದಂತೆಯೇ ಅವರನ್ನು ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಪೋಲೋ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಕಿಶೋರ್​ಗೆ ಚಿಕಿತ್ಸೆ ಮುಂದುವರಿದಿದೆ. ಕಿಶೋರ್​ ಆಪ್ತ ವಲಯಗಳು ನೀಡಿರುವ ಮಾಹಿತಿ ಪ್ರಕಾರ ಅವರು ಕೋಮಾ ತಲುಪಿದ್ದು ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗ್ತಿದೆ.

ನಿರ್ದೇಶಕ ಚೇತನ್​ ಕುಮಾರ್​​ ಆ್ಯಕ್ಷನ್​ ಕಟ್​ ಹೇಳಿದ್ದ ಸಿನಿಮಾ ಜೇಮ್ಸ್​​ ಅಪ್ಪು ಬೆಳ್ಳಿ ತೆರೆ ಮೇಲೆ ಕಾಣಿಸಿಕೊಂಡ ಕೊನೆಯ ಸಿನಿಮಾವಾಗಿದೆ. ಪುನೀತ್​ ರಾಜ್​ಕುಮಾರ್​ ವಿಧಿವಶರಾಗುವ ಮೂಲಕ 80 ಪ್ರತಿಶತ ಸಿನಿಮಾದ ಕಾರ್ಯಗಳನ್ನು ಮುಗಿಸಿದ್ದರು. ಪುನೀತ್​ ಜನ್ಮ ದಿನದಂದು ಅಂದರೆ ಮಾರ್ಚ್ 17ರಂದು ಈ ಸಿನಿಮಾವನ್ನು ತೆರೆಗೆ ತರಬೇಕೆಂದು ನಿರ್ಧರಿಸಿದ್ದ ಚಿತ್ರತಂಡಕ್ಕೆ ಸಾಥ್​ ನೀಡಿದ್ದ ನಟ ಶಿವಣ್ಣ ಅಪ್ಪು ಪಾತ್ರಕ್ಕೆ ಕಂಠದಾನ ಮಾಡಿದ್ದರು. ಜೇಮ್ಸ್​ ಸಿನಿಮಾ ಚಿತ್ರ ಮಂದಿರಗಳಲ್ಲಿ ಬ್ಲಾಕ್​ ಬಸ್ಟರ್​ ಹಿಟ್​ ಆಗಿತ್ತು. ಬಳಿಕ ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಪುನೀತ್​ ರಾಜ್​ ಕುಮಾರ್​ ಧ್ವನಿಯಲ್ಲಿಯೇ ಈ ಸಿನಿಮಾವನ್ನು ಮತ್ತೊಮ್ಮೆ ರಿ ರಿಲೀಸ್​ ಮಾಡಲಾಗಿತ್ತು. ಪುನೀತ್​ ರಾಜ್​ಕುಮಾರ್​ ಮುಖ್ಯ ಭೂಮಿಕೆಯ ಕೊನೆಯ ಚಿತ್ರಕ್ಕೆ ಕಿಶೋರ್​ ಪತ್ತಿಕೊಂಡ ಬಂಡವಾಳ ಹೂಡಿದ್ದರು.

ಸಿಗರೇಟ್​ ಸೇದಿದಂತೆ ಕಾಳಿ ಮಾತೆಯನ್ನು ಚಿತ್ರಿಸಿದ ನಿರ್ಮಾಪಕಿ : ನೆಟ್ಟಿಗರಿಂದ ವ್ಯಾಪಕ ಆಕ್ರೋಶ

ಲೇಖಕಿ – ಚಲನಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ಕಾಳಿ ದೇವಿಯು ಸಿಗರೇಟ್​ ಸೇದುತ್ತಿರುವಂತೆ ಚಿತ್ರಿಸುವ ವಿವಾದಾತ್ಮಕ ಪೋಸ್ಟರ್​ನ್ನು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದು ವ್ಯಾಪಕ ವಿರೋಧವನ್ನು ಎದುರಿಸುತ್ತಿದ್ದಾರೆ. ಇವರ ಹೊಸ ಚಿತ್ರ ‘ಕಾಲಿ’ ಸಿನಿಮಾದ ಪೋಸ್ಟರ್ ಇದಾಗಿದೆ. ಇದನ್ನು ಪರ್ಫಾಮೆನ್ಸ್​ ಡಾಕ್ಯೂಮೆಂಟರಿ ಎಂದು ಕರೆಯಲಾಗುತ್ತಿದೆ. ಸೋಶಿಯಲ್​ ಮೀಡಿಯಾದಲ್ಲಿ ನೆಟ್ಟಿಗರು #ArrestLeenaManimekalai ಎಂಬ ಟ್ರೆಂಡ್​ ಆರಂಭಿಸಿದ್ದಾರೆ.

ಜುಲೈ 2ರಂದು ಸಿನಿಮಾ ನಿರ್ಮಾಪಕಿ ಲೀನಾ ಮಣಿಮೇಕಲೈ ಈ ರೀತಿಯ ಪೋಸ್ಟರ್​ನ್ನು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದಾರೆ. ಅಗಾ ಖಾನ್​ ಮ್ಯೂಸಿಯಂನಲ್ಲಿ ಇಂದು ನನ್ನ ಇತ್ತೀಚಿನ ಚಲನಚಿತ್ರದ ಬಿಡುಗಡೆಯನ್ನು ಶೇರ್​ ಮಾಡಲು ನಾನು ಭಾರೀ ಉತ್ಸುಕಳಾಗಿದ್ದೇನೆ. ಈ ಸಿನಿಮಾದ ಆರು ನಿಮಿಷಗಳ ಆಯ್ದ ಭಾಗವಾದ ಕಾಳಿಯನ್ನು ಇಂದು ತೋರಿಸಲಾಗುವುದು ಎಂದು ಬರೆದುಕೊಂಡಿದ್ದಾರೆ. ಅಗಾ ಖಾನ್ ಮ್ಯೂಸಿಯಂನ ರಿದಮ್ಸ್ ಆಫ್​ ಕೆನಡಾದ ಭಾಗವಾಗಿ ಕೆನಡಾ ಸಂಸ್ಕೃತಿಯ ವೈವಿಧ್ಯಮಯ ವಸ್ತ್ರವನ್ನು ಆಚರಿಸುವ ಒಂದು ವಾರದ ಅವಧಿಯ ಉತ್ಸವ. ಉತ್ಸವದ ಸಮಯದಲ್ಲಿ ಈವೆಂಟ್​ ಮತ್ತು ಮ್ಯೂಸಿಯಂನ ಶಾಶ್ವತ ಸಂಗ್ರಹಣೆ ಗ್ಯಾಲರಿಗೆ ಪ್ರವೇಶ ಉಚಿತವಾಗಿದೆ.

ಲೀನಾ ಮಣಿಮೇಕಲೈನ ಪೋಸ್ಟರ್​​ ನೆಟ್ಟಿಗರಿಗೆ ಸುತಾರಾಂ ಇಷ್ಟವಾಗಿಲ್ಲ. ಅನೇಕರು ಈ ಪೋಸ್ಟರ್​ನಿಂದ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ದೂರಿದ್ದಾರೆ. ಈ ಪೋಸ್ಟರ್​ನ್ನು ಈ ಕೂಡಲೇ ತೆಗೆಯಬೇಕು ಎಂದು ಒತ್ತಾಯಿಸಿದ್ದಾರೆ. ಈ ಪೋಸ್ಟರ್​ನಲ್ಲಿ ಮಾ ಕಾಳಿ ಸಿಗರೇಟ್​ ಸೇದುತ್ತಿರುವಂತೆ ತೋರಿಸಲಾಗಿದ್ದು ಇದನ್ನು ನೋಡಿ ಸೋಶಿಯಲ್​​ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗ್ತಿದೆ. ಕಾಳಿ ಮಾತೆಯಂತೆ ವೇಷಭೂಷಣ ಧರಿಸಿರುವ ಕಲಾವಿದೆ ಒಂದು ಕೈಯಲ್ಲಿ ತ್ರಿಶೂಲ ಹಾಗೂ ಮತ್ತೊಂದು ಕೈಯಲ್ಲಿ LGBTQ ಸಮುದಾಯದ ಹೆಮ್ಮೆಯ ಧ್ವಜವನ್ನು ಹಿಡಿದಿದ್ದಾರೆ.

ಕಾಳಿ ಸಾಕ್ಷ್ಯಚಿತ್ರದ ಪೋಸ್ಟರ್​ ಕಂಡು ಆಕ್ರೋಶ ವ್ಯಕ್ತಪಡಿಸಿರುವ ನೆಟ್ಟಿಗರು , ಪ್ರತಿದಿನವೂ ಸಮಾಜದಲ್ಲಿ ಹಿಂದೂ ಧರ್ಮದ ಭಾವನೆಗಳಿಗೆ ಧಕ್ಕೆ ಬರುವಂತಹ ಘಟನೆಗಳು ಜರುಗುತ್ತಿವೆ. ಇವರು ನಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದಾರೆ ಎಂದು ಸಿಟ್ಟು ಹೊರ ಹಾಕಿದ್ದಾರೆ. ಮಾತ್ರವಲ್ಲದೇ ಈ ಫೋಟೋಗಳಿಗೆ ಅಮಿತ್​ ಶಾ ಹಾಗೂ ಪ್ರಧಾನಿ ಕಚೇರಿಯನ್ನು ಟ್ಯಾಗ್​ ಮಾಡುವ ಮೂಲಕ ಈ ಫೋಸ್ಟರ್​ ಹಾಗೂ ಸಿನಿಮಾದ ಮೇಲೆ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಇದನ್ನು ಓದಿ : Uttar Pradesh : ಹಿಂದೂ ದೇವರ ಫೋಟೋ ಇರುವ ಕಾಗದದ ಮೇಲೆ ಮಾಂಸ ಮಾರಾಟ : ಆರೋಪಿ ಬಂಧನ

ಇದನ್ನೂ ಓದಿ : Bike horn Murder : ಬೈಕ್​ ಹಾರ್ನ್​ ವಿಚಾರಕ್ಕೆ ಶುರುವಾದ ದ್ವೇಷ ಕೊಲೆಯಲ್ಲಿ ಅಂತ್ಯ : ಆರೋಪಿಗಳ ಬಂಧನ

puneeth rajkumar starrer james movie producer kishore pattikonda hospitalised

Comments are closed.