ನಟ ಪುನೀತ್‌ ಅಭಿನಯದ ಕೊನೆಯ ಸಿನಿಮಾ “ಗಂಧದಗುಡಿ” ಓಟಿಟಿ ರಿಲೀಸ್‌ ಡೇಟ್‌ ಫಿಕ್ಸ್

ಸ್ಯಾಂಡಲ್‌ವುಡ್‌ ಪವರ್‌ಸ್ಟಾರ್‌ ಹುಟ್ಟುಹಬ್ಬಕ್ಕೆ (Puneeth Rajkumar’s birthday) ದಿನಗಣನೆ ಶುರುವಾಗಿದೆ. ನಟ ಪುನೀತ್‌ ಅಗಲಿಕೆ ನಂತರವು ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಸಂಭ್ರಮದಿಂದ ಆಚರಿಸುತ್ತಿರವುದು ವಿಶೇಷ. ಈಗಾಗಲೇ ನಟ ಪುನೀತ್‌ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬಕ್ಕಾಗಿ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಹಂಚಿಕೊಂಡಿದ್ದಾರೆ. ಅದರೊಂದಿಗೆ ಅಭಿಮಾನಿಗಳನ್ನು ಇನ್ನಷ್ಟು ಖುಷಿಪಡಿಸಲು ಅಪ್ಪು ಅಭಿನಯದ ಕೊನೆಯ ಡಾಕ್ಯುಮೆಂಟರಿ ಸಿನಿಮಾ “ಗಂಧದ ಗುಡಿ”ಯನ್ನು (Gandhadagudi Movie OTT Release) ಓಟಿಟಿಯಲ್ಲಿ ಬಿಡುಗಡೆ ಮಾಡಲು ಡೇಟ್‌ನ್ನು ಫಿಕ್ಸ್‌ ಮಾಡಿದ್ದಾರೆ. ಈ ಸಿನಿಮಾ ನಿರ್ಮಾಪಕರಾದ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ನ್ನು ಹಂಚಿಕೊಂಡಿದ್ದಾರೆ.

ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ತಮ್ಮ ಪೋಸ್ಟ್‌ನಲ್ಲಿ, “ಗಂಧದಗುಡಿ ಆನ್ ಅಮೆಜಾನ್‌ ಪ್ರೈಮ್, ಮಾರ್ಚ್ 17 ರಂದು ಈ ಆಕರ್ಷಕ ಸಂಗೀತ ಪ್ರಯಾಣದಲ್ಲಿ ಪ್ರಕೃತಿಯ ಅದ್ಭುತಗಳನ್ನು ಅನ್ವೇಷಿಸಲು ಸಿದ್ಧರಾಗಿ” ಎಂದು ಬರೆದು ಹಂಚಿಕೊಂಡಿದ್ದಾರೆ. ಪತಿ ಪುನೀತ್‌ ಅಗಲಿಕೆ ನಂತರ ಸಾಕಷ್ಟು ನೋವುಂಡ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ತಮ್ಮ ಕರ್ತವ್ಯ ಹಾಗೂ ಜವಬ್ದಾರಿಗಳನ್ನು ಸಮಯೋಜಿತವಾಗಿ ನಿಭಾಯಿಸಿಕೊಂಡು ಬಂದಿದ್ದಾರೆ. ನಟ ಪುನೀತ್‌ ಮರಣದ ನಂತರ ಜೇಮ್ಸ್‌ ಹಾಗೂ ಗಂಧದಗುಡಿ ಸಿನಿಮಾವನ್ನು ಬಹಳ ಅದ್ಧೂರಿಯಾಗಿ ಅಪ್ಪು ಅಭಿಮಾನಿಗಳ ಮುಂದೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಅಭಿಮಾನಿಗಳು ವಿಶೇಷವಾಗಿ ಗೌರವಿಸುತ್ತಿದ್ದಾರೆ.

ಇದನ್ನೂ ಓದಿ : ಕಾಂತಾರ 2 ಸಿನಿಮಾ ಮುನ್ನವೇ ಹೊಸ ಸಿನಿಮಾ “ಲಾಫಿಂಗ್‌ ಬುದ್ಧ” ನಿರ್ಮಾಣಕ್ಕೆ ಮುಂದಾದ ನಟ ರಿಷಬ್‌ ಶೆಟ್ಟಿ

ಇದನ್ನೂ ಓದಿ : ಸ್ಯಾಂಡಲ್‌ವುಡ್‌ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಲವ್‌ಸ್ಟೋರಿ ಬಗ್ಗೆ ನಿಮಗೆಷ್ಟು ಗೊತ್ತು ?

ಇದನ್ನೂ ಓದಿ : ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬ ಸಂಭ್ರಮ : ಅಪ್ಪು ನೆನೆದು ಭಾವುಕರಾದ ಫ್ಯಾನ್ಸ್‌

ಅಪ್ಪು ಅಭಿನಯದ ಕೊನೆಯ ಸಿನಿಮಾವಾದ “ಗಂಧದಗುಡಿ” ಅಕ್ಟೋಬರ್‌ 28 ರಂದು ದೇಶದಾದ್ಯಂತ ತೆರೆ ಕಂಡಿದೆ. “ಗಂಧದಗುಡಿ” ಸಿನಿಮಾದಲ್ಲಿ ಸ್ವತಃ ಪುನೀತ್‌ ರಾಜ್‌ಕುಮಾರ್‌ ಮತ್ತು ಅಮೋಘವರ್ಷ ಕೈಯಲ್ಲಿ ಕ್ಯಾಮರಾ ಹಿಡಿದು ಕರುನಾಡಿನ ವನ್ಯಜೀವಿ, ಪ್ರಕೃತಿ ಸಂಪತ್ತು, ಕಾಡು, ಬೆಟ್ಟ-ಗುಡ್ಡ ಸೇರಿದಂತೆ ಅನೇಕ ಅಧ್ಬುತಗಳನ್ನು ಸೆರೆ ಹಿಡಿದಿರುತ್ತಾರೆ. “ಗಂಧದಗುಡಿ” ಡ್ಯಾಕುಮೆಂಟರಿ ಸಿನಿಮಾವಾಗಿ ತೆರೆ ಕಂಡಿದೆ. ಡ್ಯಾಕುಮೆಂಟರಿ ಸಿನಿಮಾವು ಹೆಚ್ಚಾಗಿ ಸಿನಿಮಾ ಮಂದಿರಗಳಲ್ಲಿ ಬಿಡುಗಡೆ ಮಾಡುವುದಿಲ್ಲ. ಆದರೆ ಗಂಧದಗುಡಿ ಸಿನಿಮಂದಿರಗಳಲ್ಲಿ 1 ಗಂಟೆ 37 ನಿಮಿಷಗಳ ಕಾಲ ಸಿನಿಮಾವಾಗಿ ತೆರೆ ಕಂಡಿರುವುದು ವಿಶೇಷ.

Puneeth Rajkumar’s birthday : Gandhadagudi Movie OTT Release : Actor Puneeth’s Last Movie “Gandhadagudi” OTT Release Date Fix

Comments are closed.