puneeth rajkumars twitter account : ಕನ್ನಡಿಗರಿಗೆ ಗುಡ್ ನ್ಯೂಸ್ : ಪುನೀತ್ ಟ್ವಿಟರ್ ಖಾತೆಗೆ ಮರಳಿತು ಬ್ಲೂ ಟಿಕ್
puneeth rajkumars twitter account : ಕರ್ನಾಟಕ ರತ್ನ ಡಾ. ಪುನೀತ್ ರಾಜ್ಕುಮಾರ್ ನಮ್ಮನ್ನೆಲ್ಲ ಬಿಟ್ಟು ಹೋಗಿ 9 ತಿಂಗಳುಗಳೇ ಕಳೆಯುತ್ತಾ ಬಂದಿದೆ. ಅಪ್ಪು ದೈಹಿಕವಾಗಿ ಎಲ್ಲರನ್ನೂ ತೊರೆದಿದ್ದಾರೆ ಆದರೂ ಸಹ ಅವರ ನಟನೆ ಹಾಗೂ ಸಾಮಾಜಿಕ ಕಾರ್ಯಗಳ ಮೂಲಕ ಇಂದಿಗೂ ಕರುನಾಡಿನಲ್ಲಿ ಜೀವಂತವಾಗಿ ಇದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಇಂದಿಗೂ ಕೂಡ ಅವರಿಗೆ ಫಾಲೋವರ್ಸ್ ಸಂಖ್ಯೆ ಹೆಚ್ಚುತ್ತಲೇ ಇದೆ.
ಈ ನಡುವೆ ಕೆಲವು ದಿನಗಳ ಹಿಂದೆಯಷ್ಟೇ ಟ್ವಿಟರ್ನಲ್ಲಿ ಪುನೀತ್ ರಾಜ್ಕುಮಾರ್ಗೆ ನೀಡಲಾಗಿದ್ದ ಬ್ಲೂ ಟಿಕ್ನ್ನು ಅಳಿಸಿ ಹಾಕಲಾಗಿತ್ತು. ಟ್ವಿಟರ್ನ ನಿಯಮದ ಪ್ರಕಾರ ಆರು ತಿಂಗಳುಗಳ ಕಾಲ ನಿಷ್ಕ್ರಿಯವಾಗಿರುವ ಖಾತೆಗಳಲ್ಲಿನ ಬ್ಲೂ ಮಾರ್ಕ್ನ್ನು ಅಳಿಸಿ ಹಾಕಲಾಗುತ್ತದೆ. ಆದರೆ ಇದು ಕನ್ನಡಿಗರ ಮನಸ್ಸಿಗೆ ನೋವುಂಟು ಮಾಡಿತ್ತು. ಅಪ್ಪು ಬಾಸ್ ಟ್ವಿಟರ್ ಖಾತೆಯಿಂದ ಬ್ಲೂ ಟಿಕ್ ಅಳಿಸಿ ಹೋಗುವುದನ್ನು ನಾವು ಸಹಿಸೋದಿಲ್ಲ ಎಂದು ಕನ್ನಡಿಗರು ಟ್ವಿಟರ್ನಲ್ಲಿ ಅಭಿಯಾನವನ್ನೇ ನಡೆಸಿದ್ದರು.
ಪುನೀತ್ ರಾಜ್ಕುಮಾರ್ ಟ್ವಿಟರ್ ಖಾತೆಯಿಂದ ವೆರಿಫೈಡ್ ಬ್ಯಾಡ್ಜ್ ತೆಗೆಯದಂತೆ ಮನವಿ ಮಾಡಿದ್ದ ಕನ್ನಡಿಗರು #ReverifyPuneethRajkumarTwitter ಎಂಬ ಹ್ಯಾಶ್ಟಾಗ್ನ ಅಡಿಯಲ್ಲಿ ಟ್ವೀಟ್ ಮಾಡಿದ್ದರು. ಪುನೀತ್ ರಾಜ್ಕುಮಾರ್ರ ಸಾಧನೆ ಹಾಗೂ ಸಾಮಾಜಿ ಕಾರ್ಯಗಳನ್ನು ಈ ಹ್ಯಾಶ್ಟಾಗ್ನ ಅಡಿಯಲ್ಲಿ ಹಾಕಲಾಗಿತ್ತು. ಕನ್ನಡಿಗರ ಅವಿರತ ಹೋರಾಟಕ್ಕೆ ಸ್ಪಂದಿಸಿದ ಟ್ವಿಟರ್ ಇದೀಗ ಪುನೀತ್ ರಾಜ್ಕುಮಾರ್ ಟ್ವಿಟರ್ ಖಾತೆಯ ಬ್ಲೂ ಟಿಕ್ನ್ನು ವಾಪಸ್ ನೀಡಿದೆ. ಈ ಮೂಲಕ ಕನ್ನಡಿಗರ ಹೋರಾಟಕ್ಕೆ ಫಲ ಸಿಕ್ಕಂತಾಗಿದೆ.
ಕಳೆದ ಅಕ್ಟೋಬರ್ 29ರಂದು ಪುನೀತ್ ರಾಜ್ಕುಮಾರ್ ಎದೆನೋವಿನ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿದ್ದರು. ಜಿಮ್ ಮುಗಿಸಿದ ಬಳಿಕ ಅವರ ಎದೆಯಲ್ಲಿ ನೋವು ಕಾಣಿಸಿಕೊಂಡ ಪರಿಣಾಮ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಹೃದಯಸ್ತಂಭನದಿಂದ ಪುನೀತ್ ರಾಜ್ಕುಮಾರ್ ಕೊನೆಯುಸಿರೆಳೆದಿದ್ದರು.
ಇದನ್ನೂ ಓದಿ : Ranbir Kapoor-Alia Bhatt : ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರಾ ಆಲಿಯಾ ಭಟ್:ಕುತೂಹಲ ಮೂಡಿಸಿದ ರಣಬೀರ್ ಹೇಳಿಕೆ
puneeth rajkumars twitter account got a verified badge again
Comments are closed.