ಬೆಂಗಳೂರು : ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್(Punith Rajkumar) ಅಗಲಿ ನಾಳೆಗೆ ಒಂದು ವರ್ಷ ಕಳೆಯುತ್ತದೆ. ನಾಳೆ (ಅಕ್ಟೋಬರ್ 29 ) ಅಪ್ಪುವಿನ ಮೊದಲ ವರ್ಷದ ಪುಣ್ಯಸ್ಮರಣೆಯು ಬೆಂಗಳೂರಿನ ಕಂಠೀರವ ಸ್ಟೂಡಿಯೋದಲ್ಲಿ ನಡೆಯಲಿದ್ದು, ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ಪುನೀತ್ ರಾಜ್ ಕುಮಾರ್ ಅಭಿನಯದ “ಗಂಧದಗುಡಿ” ಸಿನಿಮಾ ಇಂದು ರಾಜ್ಯದಾದ್ಯಂತ ತೆರೆ ಕಂಡಿದ್ದು, ಅಪಾರ ಸಂಖ್ಯೆಯ ಅಭಿಮಾನಿಗಳು ಸಿನಿಮಾ ಮಂದಿರಗಳಲ್ಲಿ ವೀಕ್ಷಿಸಿದ್ದಾರೆ. ಅಲ್ಲದೇ ಅಶ್ವಿನಿ ಪುನೀತ್ ರಾಜ್‌ಕುಮಾರ್ ನಿರ್ಮಾಣದ ಈ ಸಿನಿಮಾ ದೇಶ ವಿದೇಶಗಳಲ್ಲಿ ಬಿಡುಗಡೆಗೊಂಡಿರುತ್ತದೆ. ಮೊದಲ ವರ್ಷದ ಅಪ್ಪುವಿನ ಪುಣ್ಯಸ್ಮರಣೆ ನಾಳೆ ಶನಿವಾರ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ಸಮಾಧಿ ಬಳಿ ನಡೆಸಲು ಅದ್ದೂರಿಯಾಗಿ ತಯಾರಿಯನ್ನು ನಡೆಸುತ್ತಿದ್ದಾರೆ.
ಬೆಂಗಳೂರಿನ ಕಂಠೀರವ ಸ್ಟುಡಿಯೋದ ಸುತ್ತಮುತ್ತ ಪುನೀತ್ ಸಿನಿಮಾದ ಸುಮಾರು 75 ಕಟೌಟ್‌ಗಳನ್ನು ಅಭಿಮಾನಿಗಳು ಹಾಕಲು ನಿರ್ಧರಿಸಿದ್ದಾರೆ. “ಗಂಧದಗುಡಿ” ಬಿಡುಗಡೆ ಹಾಗೂ ಪುನೀತ್ ಮೊದಲನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಸಮಾಧಿ ಹಾಗೂ ಸ್ಟುಡಿಯೋ ಸುತ್ತಮತ್ತ ಕಲರ್‌ಪುಲ್ ಬೆಳಕು ಮತ್ತು ವಿವಿಧ ಹೂವಿನ ಮೂಲಕ ಅಲಂಕರಿಸಲಾಗುತ್ತಿದೆ. ಇಂದು ಮತ್ತು ನಾಳೆ ದಿನದ 24ಗಂಟೆಗಳ ಕಾಲ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿಯ ದರ್ಶನಕ್ಕೆ ಅಭಿಮಾನಿಗಳಿಗೆ ಅವಕಾಶವನ್ನು ಒದಗಿಸಲಾಗಿದೆ. ಇದೇ ಸ್ಟುಡಿಯೋದಲ್ಲಿ ಡಾ.ರಾಜ್‌ಕುಮಾರ್ ಮತ್ತು ಪಾರ್ವತಮ್ಮ ರಾಜ್‌ಕುಮಾರ್ ಸಮಾಧಿ ಇರುವುದರಿಂದ ಅವುಗಳನ್ನು ಕೂಡ ವಿವಿಧ ಹೂಗಳಿಂದ ಮತ್ತು ಕಲರ್‌ಪುಲ್ ಬೆಳಕಿನ ಮೂಲಕ ಸಿಂಗಾರ ಗೊಳಿಸುತ್ತಿದ್ದಾರೆ. ಕಂಠೀರವ ಸ್ಟುಡಿಯೋ ಕಟೌಟ್, ಹೂ ಮತ್ತು ಆಕರ್ಷಕವಾದ ಬೆಳಕಿನ ಅಲಂಕಾರದ ಮೂಲಕ ರಂಗೇರಲಿದೆ.
ಇದನ್ನೂ ಓದಿ : Gandhadagudi : ಅಪ್ಪು “ಗಂಧದಗುಡಿ” ನೋಡಿ ಸಂಭ್ರಮಿಸಿದ ಅಭಿಮಾನಿಗಳು
ಇದನ್ನೂ ಓದಿ : puneeth rajkumar :‘ಗಂಧದಗುಡಿ’ ಮೂಲಕ ಮತ್ತೊಮ್ಮೆ ಕರುನಾಡಿನಲ್ಲಿ ಜೀವಿಸಿದ ಅಪ್ಪು: ನಿರೀಕ್ಷೆಯಂತೆ ಕನ್ನಡಿಗರ ಮನಗೆದ್ದ ಅಪ್ಪು ಕನಸು
ಇದನ್ನೂ ಓದಿ : Gandhadagudi Movie : ನಾಳೆ ತೆರೆಗೆ ಪುನೀತ್ ರಾಜ್ ಕುಮಾರ್ “ಗಂಧದ ಗುಡಿ” : ಟಿಕೇಟ್ ಸೋಲ್ಡ್ ಔಟ್
ಹಾಸ್ಯನಟ, ಸಂಗೀತ ನಿರ್ದೇಶಕ ಹಾಗೂ ಗಾಯಕ ಸಾಧು ಕೋಕಿಲ ತಂಡದವರಿಂದ ಇಂದು (ಅಕ್ಟೋಬರ್ 28) ಮಧ್ಯರಾತ್ರಿ 12 ಗಂಟೆಯಿಂದ ನಾಳೆ (ಅಕ್ಟೋಬರ್ 29) ಮಧ್ಯರಾತ್ರಿ 12ಗಂಟೆಯವರೆಗೂ ಪುನೀತ್ ರಾಜ್‌ಕುಮಾರ್ ಸಮಾಧಿ ಇರುವ ಕಂಠೀರವ ಸ್ಟೂಡಿಯೋದಲ್ಲಿ ಗೀತ ನಮನ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. 24 ಗಂಟೆಗಳ ಕಾಲ ನಿರಂತರವಾಗಿ ಸಾಧು ಕೋಕಿಲ ಹಾಗೂ ಅವರ ತಂಡದವರಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ. ಈ ಕಾರ್ಯಕ್ರಮವನ್ನು ಪುನೀತ್ ರಾಜ್‌ಕುಮಾರ್‌ಗೆ ಗೌರವವನ್ನು ಸಲ್ಲಿಸುವುದಕ್ಕಾಗಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.ಅಷ್ಟೇ ಅಲ್ಲದೇ ಪುನೀತ್ ಅಣ್ಣಂದಿರಾದ ಶಿವರಾಜ್‌ಕುಮಾರ್ ಹಾಗೂ ರಾಘವೇಂದ್ರ ರಾಜ್‌ಕುಮಾರ್ ಕೂಡ ಹಾಡಲಿದ್ದಾರೆ. ಇವರ ಜೊತೆಯಲಿ ಕನ್ನಡ ಚಿತ್ರರಂಗದ ದಿಗ್ಗಜ ಗಾಯಕರು, ತಂತ್ರಜ್ಞಾನರು ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ನಿಮ್ಮೆಲ್ಲರ ಅಭಿಮಾನ ಮತ್ತು ಪ್ರೀತಿಗೆ ನಾನು ಸದಾ ಋಣಿ.#ಗಂಧದಗುಡಿ ಈಗ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ.
— Ashwini Puneeth Rajkumar (@Ashwini_PRK) October 28, 2022
Thank you for all the love and support.#GandhadaGudi in cinemas now.
BMS: https://t.co/rwZ9HWAoZa
PayTM: https://t.co/pxM9HI1zU7 pic.twitter.com/JW6MspYEz9
Punith Rajkumar Tomorrow is Appu’s first year commemoration: All ready in Kathirava studio