Virat Kohli Record: ಮತ್ತೊಂದು ವಿಶ್ವದಾಖಲೆಗೆ ಕಿಂಗ್ಸ್ ಕೊಹ್ಲಿ ಸಜ್ಜು, ಈ ಬಾರಿ ವಿರಾಟ ಕಣ್ಣು ಬಿದ್ದಿರೋದು ಅದ್ಯಾವ ದಾಖಲೆಯ ಮೇಲೆ ?

ಬೆಂಗಳೂರು: Virat Kohli Record : ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ (T20 World Cup 2022) ಟೂರ್ನಿಯಲ್ಲಿ ಭಾರತದ ರನ್ ಮಷಿನ್ ವಿರಾಟ್ ಕೊಹ್ಲಿ (Virat Kohli) ಅಮೋಘ ಫಾರ್ಮ್’ನಲ್ಲಿದ್ದಾರೆ. ಪಾಕಿಸ್ತಾನ ವಿರುದ್ಧದ ಸೂಪರ್-12 ಪಂದ್ಯದಲ್ಲಿ ಅಜೇಯ 82 ರನ್ ಬಾರಿಸಿ ಭಾರತಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ದ ವಿರಾಟ್, ನೆದರ್ಲೆಂಡ್ಸ್ ವಿರುದ್ಧದ 2ನೇ ಲೀಗ್ ಪಂದ್ಯದಲ್ಲೂ ಅಜೇಯ 62 ರನ್ ಗಳಿಸಿದ್ದರು. ಎರಡು ಇನ್ನಿಂಗ್ಸ್’ಗಳಲ್ಲಿ ಎರಡು ಅಜೇಯ ಅರ್ಧಶತಕಗಳನ್ನು ಬಾರಿಸಿರುವ ವಿರಾಟ್ ಕೊಹ್ಲಿ, ಟಿ20 ವಿಶ್ವಕಪ್’ನಲ್ಲಿ ವಿಶ್ವದಾಖಲೆಯೊಂದನ್ನು ಬರೆಯಲು ಸಜ್ಜಾಗಿದ್ದಾರೆ. ಕಿಂಗ್ ಕೊಹ್ಲಿ ಇನ್ನು 28 ರನ್ ಗಳಿಸಿದರೆ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತೀ ಹೆಚ್ಚು ರನ್’ಗಳನ್ನು ದಾಖಲಿಸಿದ ವಿಶ್ವದಾಖಲೆ ನಿರ್ಮಿಸಲಿದ್ದಾರೆ.

2012ರಲ್ಲಿ ಟಿ20 ವಿಶ್ವಕಪ್ ಟೂರ್ನಿಗೆ ಪದಾರ್ಪಣೆ ಮಾಡಿದ್ದ ವಿರಾಟ್ ಕೊಹ್ಲಿ ಅವರಿಗೆ ಇದು ಒಟ್ಟಾರೆ 5ನೇ ಚುಟುಕು ವಿಶ್ವಕಪ್. ಟಿ20 ವಿಶ್ವಕಪ್ ಇತಿಹಾಸದಲ್ಲಿ ಒಟ್ಟು 21 ಇನ್ನಿಂಗ್ಸ್’ ಗಳನ್ನಾಡಿರುವ ವಿರಾಟ್ ಕೊಹ್ಲಿ, 89.90ರ ಸರಾಸರಿಯಲ್ಲಿ 989 ರನ್ ಗಳಿಸಿದ್ದು, ಇನ್ನು 28 ರನ್ ಗಳಿಸಿದರೆ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತೀ ಹೆಚ್ಚು ರನ್ ಗಳಿಸಿರುವ ಶ್ರೀಲಂಕಾದ ಮಾಜಿ ನಾಯಕ ಮಹೇಲ ಜಯವರ್ಧನೆ ಅವರ ವಿಶ್ವದಾಖಲೆಯನ್ನು ಪುಡಿಗಟ್ಟಲಿದ್ದಾರೆ. ಜಯವರ್ಧನೆ 31 ಇನ್ನಿಂಗ್ಸ್’ಗಳಿಂದ 1016
ರನ್ ಕಲೆ ಹಾಕಿದ್ದಾರೆ.

ಕಾಂಗರೂ ನಾಡಿನಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಸತತ 2 ಗೆಲುವುಗಳನ್ನು ದಾಖಲಿಸಿದೆ. ಕಳೆದ ಭಾನುವಾರ ನಡೆದಿದ್ದ ಗ್ರೂಪ್-2 ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಸೋಲಿಸಿದ್ದ ಭಾರತ, ಗುರುವಾರ ನಡೆದ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ 56 ರನ್’ಗಳ ಭರ್ಜರಿ ಗೆಲುವು ದಾಖಲಿಸಿತ್ತು.
ಭಾನುವಾರ ಪರ್ತ್’ನಲ್ಲಿ ನಡೆಯಲಿರುವ ತನ್ನ 3ನೇ ಸೂಪರ್-12 ಪಂದ್ಯದಲ್ಲಿ ರೋಹಿತ್ ಶರ್ಮಾ ಬಳಗ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.

ಐಸಿಸಿ ಟಿ20 ವಿಶ್ವಕಪ್’ನಲ್ಲಿ ಅತೀ ಹೆಚ್ಚು ರನ್

ಮಹೇಲ ಜಯವರ್ಧನೆ (ಶ್ರೀಲಂಕಾ): 1016 ರನ್, 31 ಇನ್ನಿಂಗ್ಸ್
ವಿರಾಟ್ ಕೊಹ್ಲಿ (ಭಾರತ): 989 ರನ್, 21 ಇನ್ನಿಂಗ್ಸ್
ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್): 965 ರನ್, 31 ಇನ್ನಿಂಗ್ಸ್
ರೋಹಿತ್ ಶರ್ಮಾ (ಭಾರತ): 904 ರನ್, 32 ಇನ್ನಿಂಗ್ಸ್
ತಿಲಕರತ್ನೆ ದಿಲ್ಷಾನ್ (ಶ್ರೀಲಂಕಾ): 897 ರನ್, 34 ಇನ್ನಿಂಗ್ಸ್

ಟಿ20 ವಿಶ್ವಕಪ್’ನಲ್ಲಿ ವಿರಾಟ್ ಕೊಹ್ಲಿ (Virat Kohli Record) ಸಾಧನೆ

ಇನ್ನಿಂಗ್ಸ್: 21
ರನ್: 989
ಸರಾಸರಿ: 89.90
ಬೆಸ್ಟ್: 89*
ಅರ್ಧಶತಕ: 12

ಇದನ್ನೂ ಓದಿ : Virat Kohli Vs Pakistan : ರಣಬೇಟೆಗಾರನ ಮತ್ತೊಂದು ಮಹಾಬೇಟೆ, ಪಾಕಿಸ್ತಾನ ವಿರುದ್ಧ ವಿಶ್ವಕಪ್’ನಲ್ಲಿ ವಿರಾಟ್ ದಾಖಲೆ ನೋಡಿದ್ರೆ ದಂಗಾಗಿ ಹೋಗ್ತೀರಿ

ಇದನ್ನೂ ಓದಿ : India will win T20 world cup : ಭಾರತ ಈ ಬಾರಿ ಟಿ20 ವಿಶ್ವಕಪ್ ಗೆಲ್ಲೋದು ಪಕ್ಕಾ.. ಕಾರಣ ಐರ್ಲೆಂಡ್

Virat Kohli set for another world record this time Virat’s eyes fell on that record

Comments are closed.