ರಚಿತಾ ರಾಮ್ -ಧನಂಜಯ್ ಹೊಸ ಸಿನಿಮಾ : ಅಗಸ್ಟ್ 23 ಕ್ಕೆ ಬಿಡುಗಡೆಯಾಗುತ್ತೆ ಚಿತ್ರದ ಶೀರ್ಷಿಕೆ

0

ಸ್ಯಾಂಡಲ್ ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗೂ ಡಾಲಿ ಧನಂಜಯ್ ಕಾಂಬಿಷೇಶನ್ ನಲ್ಲಿ ಹೊಸ ಸಿನಿಮಾವೊಂದು ಸೆಟ್ಟೇರುತ್ತಿದೆ.

ರಚ್ಚು – ಡಾಲಿ ನಟನೆಯ ಸಿನಿಮಾ ಹಲವು ರೀತಿಯಲ್ಲಿ ಕುತೂಹಲ ಮೂಡಿಸಿದ್ದು, ಸಿನಿಮಾದ ಫಸ್ಟ್ ಲುಕ್ ಹಾಗೂ ಶೀರ್ಷಿಕೆ ಧನಂಜಯ್ ಹುಟ್ಟುವಾದ ಅಗಸ್ಟ್ 23ಕ್ಕೆ ಬಿಡುಗಡೆಯಾಗಲಿದೆ.

ನಿರ್ದಶಕ ಎಸ್.ರವೀಂದ್ರನಾಥ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಿನಿಮಾದ ಫಸ್ಟ್ ಲುಕ್ ಗಾಗಿ ಚಿತ್ರತಂಡ ಸದ್ಯ ಪೋಟೋ ಶೂಟ್ ನಲ್ಲಿ ಬ್ಯುಸಿಯಾಗಿದೆ.

ಡಿಂಪಲ್ ಕ್ವೀನ್ ರಚ್ಚು ಈಗಾಗಲೇ ಎಸ್.ರವೀಂದ್ರನಾಥ್ ನಿರ್ದೇಶನದ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದರೆ, ಡಾಲಿ ಧನಂಜಯ್ ಅವರಿಗೆ ಇದು ಮೊದಲ ಸಿನಿಮಾ.

ಸಿನಿಮಾದ ಪ್ರೀ ಪ್ರೋಡಕ್ಷನ್ ವರ್ಕ್ ಮುಗಿಸಿಕೊಂಡಿರುವ ಚಿತ್ರತಂಡ ಸಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಲ್ಲಿ ಶೂಟಿಂಗ್ ನಡೆಸುವುದಕ್ಕೆ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ.

ಸ್ಯಾಂಡಲ್ ವುಡ್ ಬಹು ಬೇಡಿಕೆಯ ನಟಿಯಾಗಿರುವ ರಚಿತಾ ರಾಮ್ ನಟನೆಯ 100, ಏಕ್ ಲವ್ ಯಾ ಸಿನಿಮಾಗಳು ಈಗಾಗಲೇ ಬಿಡುಗಡೆಗೆ ಸಿದ್ದವಾಗಲಿವೆ.

ಕನ್ನಡ ಮಾತ್ರವಲ್ಲದೇ ರಚಿತಾ ರಾಮ್ ಎಪ್ರಿಲ್ ಹಾಗೂ ಲಿಲ್ಲಿ ಸಿನಿಮಾಗಳ ಶೂಟಿಂಗ್ ಈಗಾಗಲೇ ಮುಕ್ತಾಯಗೊಂಡಿದ್ದು, ವೀರಂ ಸಿನಿಮಾದ ಶೂಟಿಂಗ್ ಇನ್ನಷ್ಟೇ ಆರಂಭಗೊಳ್ಳಬೇಕಿದೆ.

ಇತ್ತ ಡಾಲಿ ಧನಂಜಯ್ ಕೂಡ ಸಖತ್ ಬ್ಯುಸಿಯಾಗಿದ್ದಾರೆ. ಧನಂಜಯ್ ನಟನೆಯ ಬಹುನಿರೀಕ್ಷಿತ ಸಿನಿಮಾ ಯುವರತ್ನ ಮತ್ತು ಪೊಗರು ಬಿಡುಗಡೆಗೆ ಕಾಯುತ್ತಿದ್ರೆ, ಬಡವ ರಾಸ್ಕಲ್ ಸಿನಿಮಾದ ಶೂಟಿಂಗ್ ಈಗಾಗಲೇ ಮುಕ್ತಾಯಗೊಂಡಿದೆ.

ಇನ್ನು ಅಂಡರ್ ವಲ್ಡ್ ಡಾನ್ ಎಂ.ಪಿ.ಜಯರಾಜ್ ಪಾತ್ರದಲ್ಲಿ ಧನಂಜಯ್ ಕಾಣಿಸಿಕೊಳ್ಳಲಿದ್ದು, ಸಿನಿಮಾ ಸಾಕಷ್ಟು ಕುತೂಹಲವನ್ನು ಹುಟ್ಟಿಸಿದೆ. ಆದರೆ ಸಿನಿಮಾದ ಶೂಟಿಂಗ್ ಇನ್ನಷ್ಟೇ ಆರಂಭಗೊಳ್ಳಬೇಕಿದೆ.

Leave A Reply

Your email address will not be published.